Government Rules:ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರೆಂಟ್ ಬಿಲ್ ಕಟ್ಟುವವರಿಗೆ ಸಿಕ್ತು ನೋಡಿ ಗುಡ್ ನ್ಯೂಸ್!

Government Rules: ನರೇಂದ್ರ ಮೋದಿ ರವರ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಇರುವಂತಹ ಎನ್.ಡಿ.ಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಕರೆಂಟ್ ಬಿಲ್ ಕಟ್ಟುವಂತಹ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ನಾವ್ ಮಾತನಾಡಲು ಹೊರಟಿರೋದು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ರೂಫ್ ಟಾಪ್ ಸೋಲಾರ್ ಯೋಜನೆ ಬಗ್ಗೆ. ಸೋಲಾರ್ ಯೋಜನೆಯ ಮೂಲಕ ಯಾವ ರೀತಿ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಬಳಕೆ ಮಾಡಬಹುದು ಎನ್ನುವುದರ ಬಗ್ಗೆ. ಬನ್ನಿ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸೋಲಾರ್ ರೂಫ್ ಟಾಪ್ ಸ್ಕೀಮ್!

ಈಗಾಗಲೇ ರಾಜ್ಯದಲ್ಲಿ ಸೋಲಾರ್ ರೂಫ್ ಟಾಪ್ ಅಳವಡಿಕೆಯ ಬಗ್ಗೆ ಮಾರ್ಗಸೂಚಿಗಳನ್ನು ಕೂಡ ವಿದ್ಯುತ್ ಇಲಾಖೆಯಲ್ಲಿ ಜಾರಿಗೆ ತರಲಾಗಿದೆ ಎನ್ನುವಂತಹ ಮಾಹಿತಿ ಕೂಡ ತಿಳಿದು ಬಂದಿದೆ. ಸೌರ ಫಲಕಗಳನ್ನು ಮನೆಯ ಮೇಲ್ಚಾವಣಿಯ ಮೇಲೆ ಸ್ಥಾಪಿಸಬೇಕು ಎನ್ನುವುದಕ್ಕಾಗಿ ಈಗಾಗಲೇ ವಿದ್ಯುತ್ ಇಲಾಖೆಯಲ್ಲಿ ಸಮಿತಿಯನ್ನು ಕೂಡ ರಚಿಸಲಾಗಿದ್ದು ಆ ಸಮಿತಿಯ ರಿಪೋರ್ಟ್ಗಳ ಮೂಲಕವೇ ಈಗ ವಿದ್ಯುತ್ ಇಲಾಖೆಯ ಹೊಸ ಮಾರ್ಗಸೂಚಿಗಳು ಜಾರಿಯಾಗಿವೆ ಎಂದು ಹೇಳ ಬಹುದಾಗಿದೆ.

ವಿದ್ಯುತ್ ಇಲಾಖೆಯಿಂದಲೂ ಕೂಡ ಜನರಲ್ಲಿ ಸೋಲಾರ್ ರೂಫ್ ಟಾಪ್ ಅನ್ನು ಅಳವಡಿಕೆ ಮಾಡಿಕೊಳ್ಳುವುದಕ್ಕೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದರ ಬಗ್ಗೆ ವಿದ್ಯುತ್ ಇಲಾಖೆಯಿಂದಲೇ ಅಧಿಕೃತವಾಗಿ ಘೋಷಣೆ ಹೊರ ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ವಿದ್ಯುತ್ ಇಲಾಖೆಯಿಂದ ಒಂದರಿಂದ ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಾಗಿ ಸಲಹೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಅಧಿಕೃತವಾದ ವೆಬ್ಸೈಟ್ ಅನ್ನು ಕೂಡ ರಿಜಿಸ್ಟರ್ ಮಾಡಿಕೊಳ್ಳುವುದಕ್ಕಾಗಿ ತಯಾರಿ ಮಾಡಲಾಗುತ್ತಿದ್ದು ಮೇ 31 ರಿಂದ ಸಾಫ್ಟ್ ವೇರ್ ಬಿಲ್ಲಿಂಗ್ ಪ್ರಕ್ರಿಯೆಯನ್ನು ಕೂಡ ಲಾಂಚ್ ಮಾಡುವಂತಹ ಪ್ರಕ್ರಿಯೆಯಲ್ಲಿ ವಿದ್ಯುತ್ ಇಲಾಖೆ ತೊಡಗಿಕೊಂಡಿದೆ.

ಈ ಪ್ರಕ್ರಿಯೆ ಆದಷ್ಟು ಶೀಘ್ರದಲ್ಲಿ ಜಾರಿಗೆ ತರಬೇಕು ಎಂಬುದಾಗಿ ಇಲಾಖೆಯಿಂದ ಆದೇಶ ಹೊರಬಂದಿದ್ದು ಇದರಲ್ಲಿ ಯಾವುದೇ ವಿಳಂಬ ಆದಲ್ಲಿ ಸಂಬಂಧಪಟ್ಟಂತಹ ಅಧಿಕಾರಿಗಳ ಮೇಲೆ ದಂಡವನ್ನು ವಿಧಿಸಲಾಗುತ್ತದೆ. ಪ್ರಮುಖವಾಗಿ ಈಗ ಈ ಸೋಲಾರ್ ರೂಫ್ ಟಾಪ್ ಯೋಜನೆಯನ್ನು ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟದೇ ಇರುವಂತಹ ಜನರಿಗೆ ಬಳಕೆ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಈ ಮೂಲಕ ಕರೆಂಟ್ ಬಿಲ್ ಕಟ್ಟುವಂತಹ ಈ ಗ್ರಾಹಕರು ಕಡಿಮೆ ಖರ್ಚಿನಲ್ಲಿ ವಿದ್ಯುತ್ ಬಳಕೆ ಮಾಡಬಹುದಾಗಿದೆ. ಹೀಗಾಗಿ ಕೇವಲ ಇನ್ನು ಮುಂದೆ ಗೃಹಜೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪಡೆಯುವವರಿಗೆ ಮಾತ್ರವಲ್ಲದೆ ಈ ರೀತಿ ಸೋಲಾರ್ ರೂಫ್ ಟಾಪ್ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳುವವರಿಗು ಕೂಡ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ದೊರಕುವ ಸಾಧ್ಯತೆ ಹೆಚ್ಚಾಗಿದೆ.

Comments are closed.