Government Scheme: ಆಯುಷ್ಮಾನ್ ಕಾರ್ಡ್ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ!
Government Scheme: ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದಲೂ ಕೂಡ ಭಾರತದ ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಸಮಾಜದಲ್ಲಿ ಉತ್ತಮ ಜೀವನ ಶೈಲಿಯನ್ನು ಜೀವಿಸುವಂತಹ ನಿಟ್ಟಿನಲ್ಲಿ ಸಹಾಯಕ ಆಗುವ ರೀತಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಕೂಡ ಒಂದಾಗಿದೆ. ಅದರಲ್ಲಿ ವಿಶೇಷವಾಗಿ ಈಗ ಆ ಯೋಜನೆ ಅಡಿಯಲ್ಲಿ 70 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರನ್ನು ಕೂಡ ಅವರ ಆರ್ಥಿಕ ಪರಿಸ್ಥಿತಿಯನ್ನು ಯಾವುದೇ ಗಣನೆಗೆ ತೆಗೆದುಕೊಳ್ಳದೆ ಆಯ್ಕೆ ಮಾಡಲಾಗಿದೆ. ನಿಜಕ್ಕೂ ಕೂಡ ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದಿರುವಂತಹ ಹಿರಿಯ ನಾಗರಿಕರಿಗೆ ಸಾಕಷ್ಟು ಲಾಭದಾಯಕವಾಗಲಿದೆ.
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 70 ವರ್ಷ ವಯಸ್ಸಿಗಿಂತ ಹಿರಿಯ ನಾಗರಿಕರು ವಾರ್ಷಿಕ 5 ಲಕ್ಷಗಳ ವರೆಗೆ ಆರೋಗ್ಯ ಸಂಬಂಧಪಟ್ಟಂತಹ ಖರ್ಚಿನ ಕವರೇಜ್ ಅನ್ನು ಪಡೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವಂತಹ ಬೇರೆ ಆರೋಗ್ಯ ಯೋಜನೆಗಳಲ್ಲಿ ನೋಂದಾವಣೆ ಮಾಡಿಕೊಂಡಿದ್ದರೂ ಕೂಡ ಅವರು ಈ ಯೋಜನೆಯಲ್ಲಿ ಫಲಾನುಭವಿಗಳಾಗುವಂತಹ ಅವಕಾಶವನ್ನು ಹೊಂದಿದ್ದಾರೆ. ಒಂದು ವೇಳೆ ಪ್ರೈವೇಟ್ ಇನ್ಸೂರೆನ್ಸ್ ಯೋಜನೆಯಲ್ಲಿ ಹಿರಿಯ ನಾಗರಿಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ ಅವರು ಕೂಡ ಈ ಯೋಜನೆಯಲ್ಲಿ ನಿಸ್ಸಂಶಯವಾಗಿ ಫಲಾನುಭವಿಗಳಾಗ ಬಹುದಾಗಿದೆ
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಭಾರತದಲ್ಲಿ 55 ಕೋಟಿ ಜನರು ಪ್ರತಿ ವರ್ಷ 5 ಲಕ್ಷ ರೂಪಾಯಿಗಳ ವರೆಗೆ ಇನ್ಸೂರೆನ್ಸ್ ಕವರ್ ಅನ್ನು ತಮ್ಮ ಆರೋಗ್ಯಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ.
ಇದನ್ನು ನೀವು ಆಯುಷ್ಮಾನ್ ಭಾರತ್ ಅಪ್ಲಿಕೇಶನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ನಿಮ್ಮ ಹತ್ತಿರದ ಆಸ್ಪತ್ರೆ ಅಥವಾ ಆಯುಷ್ಮಾನ್ ಕೇಂದ್ರಕ್ಕೆ ಹೋಗಿ ಕೂಡ ಅಲ್ಲಿ ಅರ್ಜಿ ಸಲ್ಲಿಸುವ ಮೂಲಕವೂ ಕೂಡ ಕಾರ್ಡ್ ಅನ್ನು ಪಡೆದುಕೊಳ್ಳುವಂತಹ ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವಂತಹ ಜನರು ಗ್ರಾಮ ರೋಜ್ಗಾರ್ ಸಹಾಯಕ ಅಥವಾ ವಾರ್ಡ್ ಇನ್ಚಾರ್ಜ್ ಮೂಲಕ ಕೂಡ ನೀವು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ವಿಶೇಷವಾಗಿ ಇದು ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಪ್ರಮೇಯ ಬರದಂತೆ ನೋಡಿಕೊಳ್ಳುತ್ತದೆ.
Comments are closed.