Gruhalakshmi Scheme: ಲೋಕಸಭೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಗೃಹಲಕ್ಷ್ಮಿ ಯೋಜನೆ ನಲ್ಲಿ ಭಾರಿ ಬದಲಾವಣೆ; ಮಹಿಳೆಯರಿಗೆ ಆತಂಕ!

Gruhalakshmi Scheme: ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುವ ರೀತಿಯಲ್ಲಿ ಫಲಿತಾಂಶ ಎರಡು ದೊಡ್ಡ ಪಕ್ಷ ಹಾಗೂ ಅವರ ಒಕ್ಕೂಟ ಪಕ್ಷಗಳಿಗೆ ಸಮಾನಾಂತರವಾಗಿ ಫಲಿತಾಂಶ ಬಂದಿದ್ದು ಕೊನೆಗೂ ಎನ್.ಡಿ.ಎ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡುವಂತಹ ಅಧಿಕಾರವನ್ನು ಹೊಂದಿದೆ. ಇದರ ನಡುವೆ ರಾಜ್ಯದಲ್ಲಿ ಕಳೆದ 10 ತಿಂಗಳುಗಳಿಂದ ಜಾರಿಗೆಯಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಲೋಕಸಭಾ ಚುನಾವಣೆ ಹೊರಗೆ ಬರುತ್ತಿದ್ದಂತೆ ಈಗ ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ಕಂಡುಬರುವಂತಹ ಸಾಧ್ಯತೆ ಇದೆ. ಹಾಗಿದ್ರೆ ಆ ಅಪ್ಡೇಟ್ಗಳು ಹಾಗೂ ಆ ಬದಲಾವಣೆಗಳು ಏನು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಇನ್ಮುಂದೆ ಇವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇಲ್ಲ!

ನಿಮಗೆಲ್ಲರಿಗೂ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಪ್ರಮುಖವಾಗಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ಮಹಿಳೆಯರಿಗೆ ತಿಂಗಳಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅವರ ಖಾತೆಗೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಸಿಸ್ಟಮ್ ಮೂಲಕ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿತ್ತು. ಸಮಾಜದಲ್ಲಿ ಪುರುಷರ ರೀತಿಯಲ್ಲಿ ಮಹಿಳೆಯರು ಕೂಡ ಆರ್ಥಿಕವಾಗಿ ತಮ್ಮನ್ನು ತಾವು ಸಮರ್ಥವಾಗಿರಿಸಿಕೊಳ್ಳುವ ನಟಿಯಲ್ಲಿ ಕಾಂಗ್ರೆಸ್ ಸರ್ಕಾರ ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ.

ಕಳೆದ ಹತ್ತು ತಿಂಗಳಿನಿಂದಲೂ ಕೂಡ ಈ ಯೋಜನೆ ಅಡಿಯಲ್ಲಿ ಕನಿಷ್ಠ ಪಕ್ಷ ಪ್ರತಿಯೊಬ್ಬ ಮಹಿಳೆಯರು 20000 ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಕೇವಲ ಈ ರೀತಿ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರ ವಿಚಾರ ಕೂಡ ಈಗಾಗಲೇ ಹೊರಬಂದಿದ್ದು ಸರ್ಕಾರ ಇದೆ ಕಾರಣಕ್ಕಾಗಿ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳುವಂತಹ ನಿರ್ಧಾರವನ್ನು ಮಾಡಿದೆ. ಈ ರೀತಿ ನಕಲಿ ದಾಖಲೆ ಪತ್ರಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವವರ ಕಾರಣದಿಂದಾಗಿ ಈ ರೀತಿಯ ಸರ್ಕಾರಿ ಯೋಜನೆಗಳಿಂದ ಕೆಲವೊಂದು ಅರ್ಹ ಮಹಿಳೆಯರು ವಂಚಿತರಾಗುತ್ತಿದ್ದಾರೆ.

ಇದೇ ಕಾರಣಕ್ಕಾಗಿ ಈ ರೀತಿ ನಕಲಿ ದಾಖಲೆ ಪತ್ರಗಳನ್ನು ನೀಡಿ ಈ ರೀತಿಯ ಯೋಜನೆಗಳನ್ನು ಪಡೆದುಕೊಳ್ಳುತ್ತಿರುವಂತಹ ಮಹಿಳೆಯರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಹಾಗೂ ಇದುವರೆಗೂ ಪಡೆದುಕೊಂಡಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ವಾಪಸ್ ಅವರಿಂದ ಪಡೆದುಕೊಳ್ಳುವಂತಹ ಕೆಲಸವನ್ನು ಮಾಡಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾದಲ್ಲಿ ಈ ರೀತಿ ಅಕ್ರಮ ಕ್ರಮಗಳ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಂಡಿರುವಂತಹ ಮಹಿಳೆಯರನ್ನ ಲಿಸ್ಟ್ನಿಂದ ಹೊರ ಹಾಕುವುದು ಮಾತ್ರವಲ್ಲದೆ ಅವರು ಪಡೆದುಕೊಂಡಿರುವಂತಹ ಹಣವನ್ನು ಕೂಡ ಮರಳಿ ಪಡೆಯಲಾಗುವುದು.

Comments are closed.