Health Tips: ನಿಮ್ಮ ಹಾರ್ಟ್ ವೀಕ್ ಇದೆ ಅನ್ನೋದಕ್ಕೆ ಈ ಆರು ಗುಣಲಕ್ಷಣಗಳು ಸಾಕ್ಷಿ; ನಿಮಗೂ ಇದಿದ್ರೆ ಕೂಡಲೇ ಡಾಕ್ಟರ್ ಅನ್ನು ಭೇಟಿ ಮಾಡಿ!
Health Tips: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕೂಡ ಹೃದಯ ಸಂಬಂಧ ಪಟ್ಟಂತಹ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು ನೀವೆಲ್ಲರೂ ನೋಡುತ್ತಿದ್ದೀರಿ. ಇನ್ನು ವೈದ್ಯ ಲೋಕದ ಪ್ರಕಾರ ಈ ಕೆಲವೊಂದು ಗುಣಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಹೃದಯ ವೀಕ್ ಆಗಿದೆ ಅಥವಾ ಹೃದಯ ಸಂಬಂಧಪಟ್ಟಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದೇ ಎನ್ನುವಂತಹ ಮುನ್ಸೂಚನೆ ಆಗಿರುತ್ತದೆ. ಹಾಗಿದ್ರೆ ಆ ಲಕ್ಷಣಗಳು ಯಾವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.
- ಸಾಮಾನ್ಯವಾಗಿ ಎದೆ ನೋವು ಎನ್ನುವುದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬರುವಂತಹ ಅಥವಾ ಆಮ್ಲೀಯತೆಯಿಂದ ಬರುವಂತಹ ಸಮಸ್ಯೆ ಆಗಿದೆ ಎನ್ನುವುದಾಗಿ ಭಾವಿಸಬಹುದಾಗಿದೆ ಆದರೆ ಕೆಲವೊಮ್ಮೆ ಭಾರವಾಗಿ ಕಾಣಿಸಿಕೊಳ್ಳುವುದು ಹಾಗೂ ತೀವ್ರವಾದ ಎದೆ ನೋ-ವು ಕಾಣಿಸಿಕೊಳ್ಳುವುದು ಕೂಡ ಹೃದಯ ಸಮಸ್ಯೆಯ ಮುನ್ಸೂಚನೆ ಆಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ.
- ಕೆಲವೊಮ್ಮೆ ಉಸಿರಾಟದಲ್ಲಿ ಸಮಸ್ಯೆಗಳು ಕಂಡುಬರುವುದು ಅದರಲ್ಲೂ ವಿಶೇಷವಾಗಿ ರಾತ್ರಿ ಸಂದರ್ಭದಲ್ಲಿ ಉಸಿರಾಟದ ತೊಂದರೆ ಪ್ರಮುಖವಾಗಿ ಕಾಣಿಸಿಕೊಳ್ಳುವುದು ಕೂಡ ಈ ಆರೋಗ್ಯ ಸಮಸ್ಯೆಯ ಪ್ರಮುಖ ಗುಣಲಕ್ಷಣಗಳಾಗಿವೆ.
- ನಿಮ್ಮ ಹೃದಯ ರಕ್ತವನ್ನು ಸರಿಯಾದ ರೀತಿಯಲ್ಲಿ ಪಂಪ್ ಮಾಡಲು ಸಾಧ್ಯವಾಗದೇ ಇದ್ದಾಗ ಆ ಸಂದರ್ಭದಲ್ಲಿ ದ್ರವಗಳು ನಿಮ್ಮ ದೇಹವನ್ನು ತುಂಬಿ ಊತ ಕಾಣಿಸಿಕೊಂಡು ನೋ-ವು ಕೂಡ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ ಆ ಸಂದರ್ಭದಲ್ಲಿ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನೇರವಾಗಿ ಹೋಗಿ ವೈದ್ಯರನ್ನು ಸಂಪರ್ಕಿಸಿ.
- ಇದ್ದಕ್ಕಿದ್ದಂತೆ ನಿಮ್ಮ ದೇಹದ ತೂಕ ಹೆಚ್ಚಾಗಿದ್ದರೆ ಅಥವಾ ಹೆಚ್ಚಾಗುತ್ತಾ ಇದ್ರೆ ಆ ಸಂದರ್ಭದಲ್ಲಿ ನೀವು ಮೊದಲಿಗೆ ಹೋಗಿ ಹೃದಯ ಸಂಬಂಧ ಪಟ್ಟಂತೆ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ.
- ಚಿಕ್ಕದಾಗಿ ನಡೆದಾಡಿದರೂ ಕೂಡ ಅಥವಾ ವ್ಯಾಯಾಮ ಮಾಡಿದ್ರು ಕೂಡ ಒಂದು ವೇಳೆ ನಿಮಗೆ ಪದೇ ಪದೇ ಸುಸ್ತಾಗ್ತ ಇದೆ ಅಂತ ಅಂದ್ರೆ ಅದು ಕೂಡ ನಿಮ್ಮ ಹೃದಯಕ್ಕೆ ಸಂಬಂಧಪಟ್ಟಂತೆ ಇರುವಂತಹ ಸಮಸ್ಯೆಯ ಗುಣಲಕ್ಷಣ ಅಥವಾ ರಕ್ತ ಸರಿಯಾಗಿ ನಿಮ್ಮ ಹೃದಯಕ್ಕೆ ಪಂಪ್ ಆಗ್ತಾ ಇಲ್ಲ ಅನ್ನೋದು ಮುನ್ಸೂಚನೆ ನೀಡಿರುವ ಲಕ್ಷಣವಾಗಿದೆ.
- ವಿನಾಕಾರಣ ನೀವು ಪದೇ ಪದೇ ಹೆಚ್ಚಾಗಿ ಬೆವರುತ್ತಿದ್ದರೆ ಅದು ಸಾಮಾನ್ಯ ಸಮಸ್ಯೆ ಎಂಬುದಾಗಿ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ ಆದಷ್ಟು ಶೀಘ್ರದಲ್ಲಿ ಹೃದಯ ಸಂಬಂಧ ಪಟ್ಟಂತಹ ವೈದ್ಯರಿಗೆ ಈ ಸಮಸ್ಯೆಯನ್ನು ತೋರಿಸಿ.
Comments are closed.