Health Tips: ಮಧುಮೇಹದಿಂದ ಬಳಲುತ್ತಾ ಇದ್ದೀರಾ? ಇನ್ನು ಮುಂದೆ ತಲೆ ಕೆಡಿಸಿಕೊಳ್ಳುವುದು ಬೇಡ. ಇದನ್ನ ಸೇವಿಸಿ ಎಲ್ಲಾ ಸರಿಯಾಗುತ್ತೆ!
Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಮಧುಮೇಹ ಅನ್ನೋದು ಕಾಡ್ತಾ ಇದೆ ಅನ್ನೋದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ. ಆದರೆ ಇನ್ಮುಂದೆ ನೀವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಮನೆಯಲ್ಲಿ ಅಡುಗೆಗೆ ಬಳಸುವಂತಹ ಈರುಳ್ಳಿ ಮೂಲಕ ಯಾವ ರೀತಿಯಲ್ಲಿ ಇದನ್ನು ಸರಿ ಮಾಡಿಕೊಳ್ಳಬಹುದೆಂಬುದರ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ.
ರಕ್ತದಲ್ಲಿರುವಂತಹ ಸಕ್ಕರೆ ಅಂಶವನ್ನು ಕಂಟ್ರೋಲ್ ಮಾಡೋದಿಕ್ಕೆ ಈರುಳ್ಳಿಯ ರಸದ ಸೇವನೆ ರಾಮಬಾಣ ಎಂಬುದಾಗಿ ಹೇಳಲಾಗುತ್ತದೆ. ಹಸಿ ಈರುಳ್ಳಿಯನ್ನು ಸಲಾಡ್ ಮಾಡುವಾಗ ಕೂಡ ಬಳಸಿಕೊಂಡು ಅದನ್ನು ನಿಯಮಿತವಾಗಿ ತಿನ್ನುವುದರಿಂದಲೂ ಕೂಡ ನೀವು ನಿಮ್ಮ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡಿಕೊಳ್ಳಬಹುದಾಗಿದೆ. ಈರುಳ್ಳಿಯಲ್ಲಿ ಇರುವಂತಹ ಕ್ರೋಮಿಯಂ ಹಾಗೂ ಸಲ್ಫರ್ ಅಂಶಗಳು ರಕ್ತದಲ್ಲಿರುವಂತಹ ಸಕ್ಕರೆ ಅಂಶವನ್ನು ಕಂಟ್ರೋಲ್ ಮಾಡುವುದಕ್ಕೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಎ ಹಾಗೂ ಸಿ ಅಂಶಗಳು ಕೂಡ ಸಮೃದ್ಧವಾಗಿ ಇದರಲ್ಲಿ ಕಂಡುಬರುತ್ತವೆ. ರೋಗನಿರೋಧಕ ಶಕ್ತಿ ಕೂಡ ಈರುಳ್ಳಿಯಲ್ಲಿ ಹೆಚ್ಚಾಗಿರುತ್ತದೆ.
ಆಯುರ್ವೇದ ಶಾಸ್ತ್ರದ ಪ್ರಕಾರ ಈರುಳ್ಳಿಯಲ್ಲಿ ಇರುವಂತಹ ಇಷ್ಟೆಲ್ಲ ಅಂಶಗಳಿಂದ ಈರುಳ್ಳಿಯ ರಸವನ್ನ ದೈನಂದಿನ ಜೀವನದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದಾಗಿ ಸೇವನೆ ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು ಎನ್ನುವಂತಹ ಉಲ್ಲೇಖವಿದೆ. ನೀವು ಕೂಡ ಒಂದು ವೇಳೆ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಈರುಳ್ಳಿ ರಸವನ್ನ ಬಳಸಿಕೊಳ್ಳಬಹುದಾಗಿದೆ ಇದಕ್ಕಾಗಿ ನೀವು ನಿಮ್ಮ ವೈದ್ಯರ ಬಳಿ ಕೂಡ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ. ಹಸಿ ಈರುಳ್ಳಿಯ ಸೇವನೆ ನಿಮ್ಮ ಮೇದೋಜೀರಕ ಗ್ರಂಥದಲ್ಲಿ ಇನ್ಸುಲಿನ್ ಅಂಶವನ್ನು ಹೆಚ್ಚು ಮಾಡುವುದಕ್ಕೆ ಕೂಡ ಸಹಾಯಕಾರಿಯಾಗಿರುತ್ತದೆ ಎಂಬುದಾಗಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖವಿದೆ. ಹೀಗಾಗಿ ಇದರ ನಿಯಮಿತ ಸೇವನೆ ಸಕ್ಕರೆ ಮಟ್ಟವನ್ನ ಕಡಿಮೆ ಮಾಡುವುದಕ್ಕೆ ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯಮಾಡುತ್ತದೆ. ಇನ್ನು ಈರುಳ್ಳಿಯನ್ನ ನಿಂಬೆ ರಸದಲ್ಲಿ ಸೇರಿಸಿ ಸೇವಿಸುವುದರ ಮೂಲಕ ಕೂಡ ನೀವು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.
Comments are closed.