Kannada Recipe: ಪ್ರತಿ ದಿನವು ಬೆಳಗಿನ ತಿಂಡಿಗೆ ಹಾಗೂ ಸಂಜೆಯ ವೇಳೆ ತಿನ್ನಲು ವೈರಟಿ ತಿಂಡಿಯನ್ನು ಇಷ್ಟಪಡುತ್ತಾರೆ. ಪ್ರತಿದಿನ ಮಾಡುವುದನ್ನೇ ಮಾಡಿದರೆ ಮನೆಯ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಚಪಾತಿ ಮಾಡಿದರೆ ಹೆಚ್ಚಿನ ಜನರು ಇಷ್ಟಪಡುತ್ತಾರೆ. ಮಧುಮೇಹಿಗಳು ಕೂಡ ಚಪಾತಿಗೆ ಆದ್ಯತೆ ನೀಡುತ್ತಾರೆ. ಅಲ್ಲದೆ ತೂಕ ಇಳಿಸುವವರು ಸಹ ಚಪಾತಿ ತಿನ್ನಲು ಆಸೆ ಪಡುತ್ತಾರೆ. ಹಾಗಾಗಿ ನೀವು ರೀತಿ ಚಪಾತಿ ಮಾಡುವುದರಿಂದ ಚಪಾತಿ ತುಂಬಾ ಮೃದುವಾಗಿರುತ್ತದೆ. ಇದನ್ನೂ ಓದಿ: Black Thread usage: ದೃಷ್ಟಿ ದೃಷ್ಟಿ ಎಂದು ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತೀರಾ? ಕಟ್ಟಿಕೊಳ್ಳುವ ಮುನ್ನ ಈ ವಿಷಯ ತಿಳಿದುಕೊಂಡು ಕಟ್ಟಿಕೊಳ್ಳಿ!
ಮೊದಲು ಅಗಲವಾದ ಬಾಣೆಲೆಯಲ್ಲಿ ನಿಮಗೆ ಬೇಕಾದಷ್ಟು ಗೋದಿ ಹಿಟ್ಟನ್ನು ತೆಗೆದುಕೊಳ್ಳಿ. ಈ ಹಿಟ್ಟಿಗೆ ಅರ್ಧ ಚಮಚ ಸಕ್ಕರೆ ಸೇರಿಸಬೇಕು. ಈ ರೀತಿ ಮಾಡುವುದುರಿಂದ ಚಪಾತಿ ಬೇಯಿಸಿದಾಗ ಚಪಾತಿ ಕಂದು ಬಣ್ಣಕ್ಕೆ ಬರುತ್ತದೆ. ಕೆಲವರು ಚಪಾತಿ ಹಿಟ್ಟಿಗೆ ಉಪ್ಪು, ತುಪ್ಪ ಅಥವಾ ಎಣ್ಣೆಯನ್ನು ಸೇರಿಸುತ್ತಾರೆ. ಹಿಟ್ಟನ್ನು ಕಲಸುವ ವೇಳೆ ಎಚ್ಚರಿಕೆಯಿಂದ ಇರಬೇಕು. ಚಪಾತಿ ಮೃದುವಾಗಲು ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಹಿಟ್ಟನ್ನು ಕಲಸಿದ ನಂತರ ಹೆಚ್ಚಿನ ಒತ್ತಡ ಹಾಕಬೇಕು. ಇದರಿಂದ ಚಪಾತಿ ಮೃದುವಾಗುತ್ತದೆ. ಇದನ್ನೂ ಓದಿ: Hindu god photo on beer bottle: ಬಿಯರ್ ಬಾಟಲಿಯ ಮೇಲೆ ಹಿಂದೂ ದೇವರ ಚಿತ್ರ ಮುದ್ರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಮೂರ್ಖ ಸಂಸ್ಥೆ; ಉತ್ಪನ್ನ ಮಾರಾಟ ನಿಲ್ಲಿಸದಿದ್ದರೆ ನಡೇಯೋದೆ ಬೇರೆ, ಹಿಂದೂ ಸಂಘಟನೆಗಳ ವಾರ್ನಿಂಗ್!
ಚಪಾತಿ ಮಾಡುವಾಗ ಹಿಟ್ಟನ್ನು ಮೃದುವಾಗಿ ನಾದಬೇಕು. ಬೇಕಿದ್ದರೆ ಬಾಳೆಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅದನ್ನು ಬೇಕಾದರೆ ಹಿಟ್ಟಿಗೆ ಬೆರೆಸಬಹುದು. ಈಗ ಕಲಸಿದ ಹಿಟ್ಟನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ ಗಾಳಿ ಆಡದಂತೆ ಇಡಬೇಕು. ಬಟ್ಟೆಯಲ್ಲಿ ಇಟ್ಟ ಹಿಟ್ಟನ್ನು ಎರಡು ಗಂಟೆಯ ನಂತರ ತೆಗೆಯಿರಿ. ಈಗ ಅದಕ್ಕೆ ಗೋದಿ ಹಿಟ್ಟನ್ನು ಸಿಂಪಡಿಸಿ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಿ. ಈ ಉಂಡೆಯನ್ನು ಹೆಚ್ಚು ಒತ್ತಡ ಹಾಕದೆ ನಿಧಾನವಾಗಿ ಲಟ್ಟಿಸಬೇಕು. ನಂತರ ತವಾದಲ್ಲಿ ಬೇಯಿಸಿದರೆ ಚಪಾತಿ ತುಂಬಾನೆ ಮೃದುವಾಗಿ ಇರುತ್ತದೆ.
Comments are closed.