KSRTC: ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಲಗೇಜ್ ತೆಗೆದುಕೊಂಡು ಹೋಗುವ ಮಹಿಳೆಯರಿಗೆ ಇಲಾಖೆ ನೀಡಿದೆ ನೋಡಿ ಹೊಸ ಸೂಚನೆ!

KSRTC: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಕೆಎಸ್‌ಆರ್‌ಟಿಸಿ ನಿಗಮದ ಬಸ್ಸುಗಳಲ್ಲಿ ಮಹಿಳೆಯರಿಗೆ ರಾಜ್ಯದೊಳಗೆ ಉಚಿತ ಬಸ್ ಪ್ರಯಾಣದ ಅವಕಾಶವನ್ನು ಮಾಡಿಕೊಡಲಾಗಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಆದರೆ ಅವರು ತೆಗೆದುಕೊಂಡು ಹೋಗುವಂತಹ ಲಗೇಜ್ ಮೇಲೆ ಯಾವ ರೀತಿಯ ಶುಲ್ಕ ಇದೆ ಅನ್ನೋದನ್ನ ಮಹಿಳೆಯರು ತಿಳಿದುಕೊಂಡಿಲ್ಲ. ಹಾಗಿದ್ರೆ ಬನ್ನಿ ಈ ಲಗೆಜುಗಳಿಗೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಇದರ ನಿಯಮ ಏನಿದೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಮಹಿಳೆಯರಿಗೆ ಲಗೇಜ್ ಶುಲ್ಕ!

ನಿಯಮಗಳ ಪ್ರಕಾರ 30 ಕೆಜಿ ತೂಕದ ಲಗೇಜ್ ಅನ್ನು ಯಾವುದೇ ಶುಲ್ಕ ಇಲ್ಲದೆ ಮಹಿಳೆಯರು ಬಸ್ಸಿನಲ್ಲಿ ತೆಗೆದುಕೊಂಡು ಹೋಗಬಹುದಾಗಿದೆ. ಇದು ಯಾವುದೇ ವಸ್ತು ಅಥವಾ ಪ್ರಾಣಿ ಪಕ್ಷಿ ಇರಬಹುದು. ಆದರೆ ಇದಕ್ಕಿಂತ ಹೆಚ್ಚಿನ ತೂಕದ ವಸ್ತುವನ್ನು ತೆಗೆದುಕೊಂಡು ಹೋಗುವುದಕ್ಕೆ ಶುಲ್ಕವನ್ನು ಕಟ್ಟಬೇಕಾಗುತ್ತದೆ. ರಾಜ್ಯದ ಸಾರಿಗೆ ಇಲಾಖೆ ಅಧಿಕೃತವಾಗಿ ಹೊರಡಿಸಿರುವಂತಹ ನಿಯಮಗಳ ಪ್ರಕಾರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಆದರೆ ಅವರು ತೆಗೆದುಕೊಂಡು ಹೋಗುವಂತಹ 30 ಕೆಜಿಗೆ ಅಧಿಕ ತೂಕದ ವಸ್ತುಗಳ ಮೇಲೆ ಶುಲ್ಕವನ್ನು ವಿಧಿಸಬೇಕಾಗಿರುತ್ತದೆ.

ಯಾವುದಕ್ಕೆಲ್ಲಾ ಟಿಕೆಟ್ ಇದೆ?

ನಾಯಿ ಬೆಕ್ಕು ಕೋಳಿ ಮೊಲಗಳಂತಹ ಪ್ರಾಣಿಗಳನ್ನ ಒಂದು ವೇಳೆ ನೀವು ಇಂತಹ ಸಾರಿಗೆ ಬಸ್ಸುಗಳಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವಂತಹ ಯೋಜನೆ ಅರ್ಥ ಮಾಡಿಕೊಂಡು ಬಿಡಿ ಇವುಗಳನ್ನು ತೆಗೆದುಕೊಂಡು ಹೋಗುವಾಗ ನೀವು ಪ್ರತ್ಯೇಕವಾಗಿ ಟಿಕೆಟ್ ಖರೀದಿಸಬೇಕಾಗಿರುತ್ತದೆ. ಇನ್ನು ಇವುಗಳನ್ನು ಎಸಿ ಬಸ್ಸುಗಳಲ್ಲಿ ಹಾಗೂ ರಾಜಹಂಸಗಳಂತಹ ಪ್ರತಿಷ್ಠಿತ ವಸ್ತುಗಳಲ್ಲಿ ತೆಗೆದುಕೊಂಡು ಹೋಗುವ ಹಾಗೆ ಇರುವುದಿಲ್ಲ. ಸಾಮಾನ್ಯ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಹಾಗೂ ವೇಗದೂತ ಬಸ್ಸುಗಳಲ್ಲಿ ಇದನ್ನು ಕೊಂಡು ಹೋಗಬಹುದು. ಕನಿಷ್ಠ ಐದು ರೂಪಾಯಿಗಳಂತೆ ಎಷ್ಟು ಕೆಜಿ ಇದೆ ಎನ್ನುವುದರ ಮೇಲೆ ಅವುಗಳ ಟಿಕೆಟ್ ಬೆಲೆ ನಿರ್ಧಾರವಾಗುತ್ತದೆ.

ಈ ನಿಯಮ ಕಡ್ಡಾಯ!

ನೀವು ಲಗೇಜ್ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೆ ನಿಮ್ಮ ಪಕ್ಕದ ಸೀಟಿನಲ್ಲಿ ಇದನ್ನು ಇಡುವ ಹಾಗಿಲ್ಲ. ಡ್ರೈವರ್ ಪಕ್ಕದಲ್ಲಿ ಇರುವಂತಹ ಇಂಜಿನ್ ಸ್ಥಳದಲ್ಲಿ ಕೂಡ ಪ್ರಯಾಣಿಕರು ಚಲಿಸಲು ತೊಂದರೆ ಆಗುವ ರೀತಿಯಲ್ಲಿ ಅಡ್ಡ ಇರುವ ಹಾಗಿಲ್ಲ. 30 ಕೆಜಿಗಿಂತ ಹೆಚ್ಚಿನ ತೂಕ ಇರುವಂತಹ ಲಗೇಜ್ ಗಳಿಗೆ ತಪ್ಪದೆ ಅವುಗಳ ತೂಕಕ್ಕೆ ಅನುಸಾರವಾಗಿ ಟಿಕೆಟ್ ಅನ್ನು ಖರೀದಿಸಬೇಕು ಎನ್ನುವಂತಹ ನಿಯಮವನ್ನು ಕಡ್ಡಾಯವಾಗಿ ಮಹಿಳೆಯರು ಪಾಲಿಸಲೇಬೇಕು. ಉಚಿತ ಟಿಕೆಟ್ ಪ್ರಯಾಣ ಇರೋದು ಅವರಿಗೆ ಮಾತ್ರ ಅವರ ಲಗೇಜ್ ಗಳಿಗಲ್ಲ. ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಂತಹ ಪ್ರತಿಯೊಬ್ಬ ಮಹಿಳೆಯರು ಕೂಡ ಈ ವಿಚಾರ ಹಾಗೂ ನಿಯಮಗಳನ್ನು ತಿಳಿದುಕೊಳ್ಳಬೇಕಾಗಿರುತ್ತದೆ.

Comments are closed.