Money Tips: ನಮಗೆ ಸಿಕ್ತಾ ಇರೋದೇ ಅಷ್ಟೋ ಇಷ್ಟ ಸಂಬಳದಲ್ಲಿ ನಾವು ಕೋಟ್ಯಾಧಿಪತಿ ಆಗೋದು ಹೇಗೆ ಅನ್ನುವುದಾಗಿ ಸಾಕಷ್ಟು ಜನರಲ್ಲಿ ಪ್ರಶ್ನೆ ಇರಬಹುದು ಆದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಇದರಿಂದಲೂ ಕೂಡ ಯಾವ ರೀತಿಯಲ್ಲಿ ಕೋಟ್ಯಾಧಿಪತಿ ಆಗಬಹುದು ಅನ್ನೋದನ್ನ ಹೇಳೋದಕ್ಕೆ ಹೊರಟಿದ್ದೇವೆ. ಹಣಕಾಸಿನ ಹೂಡಿಕೆ ಹಾಗೂ ಉಳಿತಾಯದಲ್ಲಿ ಸ್ವಲ್ಪಮಟ್ಟಿಗೆ ಲೆಕ್ಕಾಚಾರ ಕರೆಕ್ಟ್ ಆಗಿದ್ದರೆ ಸಾಕು, ನೀವು ಕೂಡ ಕೋಟಿಯಾಧೀಶರಾಗಬಹುದು. ಇನ್ನು ಕೆಲಸ ಮಾಡುವಂತಹ ಕೆಲವು ವರ್ಗದ ಜನರು ವರ್ಷಕ್ಕೆ ಕೋಟಿ ರೂಪಾಯಿಗಳ ಸಂಪಾದನೆಯನ್ನು ಸಂಪಾದನೆ ಮಾಡಿದರೆ ಇನ್ನು ಕೆಲವರು ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಾರೆ.
ಇಂತಹ 25 ರಿಂದ 30 ಸಾವಿರ ಸಂಬಳ ಪಡೆದುಕೊಳ್ಳುವಂತಹ ಜನರು ಕೋಟ್ಯಾಧಿಪತಿಯಾಗುವಂತಹ ಕನಸನ್ನ ಬಿಟ್ಟುಬಿಡುತ್ತಾರೆ. ಆದರೆ ನೀವು ಕೂಡ ತಿಳಿದುಕೊಳ್ಳಬೇಕಾಗಿರುವುದು ಏನು ಅಂತ ಅಂದ್ರೆ ನೀವು ಕೂಡ ಸುಲಭವಾಗಿ ಈ ಕನಸನ್ನ ನನಸು ಮಾಡಿಕೊಳ್ಳಬಹುದಾಗಿದೆ. ಸರಿಯಾದ ರೀತಿಯಲ್ಲಿ ನೀವು ಮನೆ ಮ್ಯಾನೇಜ್ಮೆಂಟ್ ಮಾಡಿಕೊಂಡರೆ ಇದನ್ನು ಸಾಧಿಸುವುದು ಕಷ್ಟದ ಮಾತಲ್ಲ.
ನೀವು ಕೂಡ ಕೋಟ್ಯಾಧಿಪತಿ ಆಗಬಹುದು!
ಇಂದಿನ ದಿನಗಳಲ್ಲಿ ತಿಂಗಳಿಗೆ 25 ರಿಂದ 30,000 ಸಂಬಳ ಬರುವಂತಹ ಜನರು ಕೂಡ ಕೋಟ್ಯಾಧಿಪತಿಯಾಗುವಂತಹ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಎಸ್ಐಪಿ ಹಣವನ್ನ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವಂತಹ ಅವಕಾಶವನ್ನು ಇನ್ನೂ ಕೂಡ ಹೊಂದಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ನೇರವಾಗಿ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡುವುದಕ್ಕಿಂತ ಇದು ರಿಸ್ಕ್ ಕಡಿಮೆ ಹಾಗೂ ಇದರಲ್ಲಿ ಎಷ್ಟು ಹಣ ರಿಟರ್ನ್ ಸಿಗುತ್ತದೆ ಎಂಬುದಾಗಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿರುವುದಿಲ್ಲ. ಆವರೇಜ್ ಆದಾಯ ಖಂಡಿತವಾಗಿ 12% ರಿಟರ್ನ್ ರೂಪದಲ್ಲಿ ಸಿಗೋದು ಗ್ಯಾರಂಟಿ ಎಂಬುದಾಗಿ ತಜ್ಞರು ಹೇಳುತ್ತಾರೆ. ಮ್ಯೂಚುವಲ್ ಫಂಡ್ಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದಾಗಿ ಹಣ ವೇಗವಾಗಿ ಬೆಳೆಯುತ್ತದೆ ಎಂಬುದಾಗಿ ಆರ್ಥಿಕ ತಜ್ಞರು ಹೇಳ್ತಾರೆ ಹಾಗೂ ಮಾರುಕಟ್ಟೆಯಲ್ಲಿರುವಂತಹ ಬೇರೆ ಯಾವುದೇ ಯೋಜನೆಗಳಲ್ಲಿ ಹಣವನ್ನ ಹೂಡಿಕೆ ಮಾಡುವುದಕ್ಕಿಂತ ಇದು ಲಾಭದಾಯಕ ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ.
ಕೋಟ್ಯಾಧಿಪತಿ ಆಗೋದಕ್ಕೆ ಹೀಗೆ ಮಾಡಿ!
30,000 ತಿಂಗಳಿಗೆ ಸಂಬಳ ಇರುವವರು 50-30-20 ತಂತ್ರವನ್ನ ಅನುಸರಿಸಬೇಕು. ಅಂದರೆ ನಿಮ್ಮ ಒಟ್ಟಾರೆ ಆದಾಯದ 20 ಪ್ರತಿಶತ ಹಣವನ್ನು ಎಸ್ ಐ ಪಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು. ಅಂದರೆ 30,000 ಅಲ್ಲಿ ಇದು 6,000 ಆಗಿರುತ್ತದೆ. ಈ ರೀತಿ ಹಣವನ್ನು ಹೂಡಿಕೆ ಮಾಡಿದರೆ ನೀವು ಕೇವಲ 24 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗ್ತೀರಿ. 24 ವರ್ಷಗಳಲ್ಲಿ ನೀವು ಮಾಡುವಂತಹ ಹೂಡಿಕೆಯಿಂದಾಗಿ 17.28 ಲಕ್ಷ ರೂಪಾಯಿಗಳ ಹೂಡಿಕೆಯನ್ನ ಮಾಡಿರುತ್ತೀರಿ ಹಾಗೂ ಹನ್ನೆರಡು ಪರ್ಸೆಂಟ್ ಮಿನಿಮಮ್ ರಿಟರ್ನ್ ರೂಪದಲ್ಲಿ 83.08 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಂಡಿರುತ್ತೀರಿ ಹಾಗೂ ಸಮಯದ ಜೊತೆಗೆ ನಿಮ್ಮ ಆದಾಯ ಕೂಡ ಹೆಚ್ಚಾಗುವುದರಿಂದಾಗಿ ನೀವು ನಿಮ್ಮ ಹೂಡಿಕೆಯನ್ನು ಕೂಡ ಹೆಚ್ಚು ಮಾಡಿರುತ್ತೀರಿ ಹೀಗಾಗಿ 24 ವರ್ಷಗಳ ಮುಂಚೇನೆ ನೀವು ಕೋಟ್ಯಾಧಿಪತಿ ಆಗಿರುತ್ತೀರಿ.
Comments are closed.