Money Tips: ಒಂದು ವೇಳೆ ನಿಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ಅಧಿಕವಾಗಿ ಕಂಡು ಬರ್ತಾ ಇದ್ರೆ ವಾಸ್ತು ಶಾಸ್ತ್ರದ ಪ್ರಕಾರ ಈ ಕೆಲವು ವಸ್ತುಗಳನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಹಣದ ಹರಿವು ಹೆಚ್ಚಾಗಲಿದೆ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ರೆ ವಾಸ್ತು ಶಾಸ್ತ್ರದ ಈ ಉಪಾಯಗಳು ಏನು ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
- ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ಬೆಳ್ಳಿ ನಾಣ್ಯವನ್ನು ನೀವು ಆಕೆಯ ಪಾದಕ್ಕೆ ಅರ್ಪಿಸಿ ನಂತರ ಅದನ್ನು ನಿಮ್ಮ ಪರ್ಸನಲ್ ಇಟ್ಕೊಳ್ಳುವ ಮೂಲಕ ನೀವು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
- ಇನ್ನು ಲಕ್ಷ್ಮಿ ದೇವಿಯ ಪ್ರತೀಕ ಆಗಿರುವಂತಹ ಶ್ರೀ ಯಂತ್ರವನ್ನು ಕೂಡ ನೀವು ನಿಮ್ಮ ಪರ್ಸನಲ್ ಇಟ್ಟುಕೊಳ್ಳುವ ಮೂಲಕ ನೀವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವಂತಹ ಸಾಧ್ಯತೆ ಕೂಡ ಇದೆ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
- ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ವಸ್ತುಗಳಲ್ಲಿ ಗೋಮತಿ ಚಕ್ರ ಕೂಡ ಒಂದು. ಇದನ್ನು ಕೂಡ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ನೀವು ನಿಮ್ಮ ಎಲ್ಲ ಸಾಲಗಳನ್ನು ತೀರಿಸಿಕೊಳ್ಳಬಹುದಾಗಿದೆ ಹಾಗೂ ಹಣಕಾಸಿನ ಹರಿವು ಕೂಡ ಹೆಚ್ಚಾಗಲಿದೆ.
- ವಾಸ್ತುಶಾಸ್ತ್ರದ ಪ್ರಕಾರ 21 ಅಕ್ಕಿ ಕಾಳುಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿ ಅದನ್ನು ಹಣ ಇಡುವಂತಹ ಸ್ಥಳ ಅಥವಾ ನಿಮ್ಮ ಪರ್ಸನಲ್ಲಿ ಇಟ್ಟರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತವೆ ಎಂಬುದಾಗಿ ಪರಿಗಣಿಸಲಾಗಿದೆ.
- ಶಾಸ್ತ್ರಗಳ ಪ್ರಕಾರ ಹಳೆಯ ಒಂದು ರೂಪಾಯಿ ನೋಟನ್ನು ಯಾವತ್ತೂ ಕೂಡ ಖರ್ಚು ಮಾಡದೆ ಅದನ್ನ ನಿಮ್ಮ ಪರ್ಸಿನಲ್ಲಿಯೇ ಇಟ್ಟುಕೊಳ್ಳುವುದರ ಮೂಲಕವೂ ಕೂಡ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ ಎಂಬುದಾಗಿ ಕೂಡ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
- ಅಶ್ವತ್ಥ ಮರದ ಎಲೆಯನ್ನು ಕೂಡ ಹಿಂದೂ ಶಾಸ್ತ್ರಗಳ ಪ್ರಕಾರ ಅತ್ಯಂತ ಪವಿತ್ರ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಗಂಗಾಜಲದಲ್ಲಿ ಶುಚಿಗೊಳಿಸಿದ ನಂತರ ನೀವು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತವೆ.
- ಪರ್ಸಿನಲ್ಲಿ ಸನಾತನ ಹಿಂದು ಸಂಸ್ಕೃತಿಯಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ಸಂಕೇತ ಆಗಿರುವಂತಹ ಲಕ್ಷ್ಮಿ ತಾಯಿಯ ಫೋಟೋವನ್ನು ಕೂಡ ಇಟ್ಟುಕೊಳ್ಳುವುದು ನಿಮ್ಮ ಹಣಕಾಸು ಹೆಚ್ಚಾಗುವುದಕ್ಕೆ ಒಂದು ಪ್ರಮುಖ ಕಾರಣವಾಗುತ್ತದೆ ಎಂಬುದನ್ನು ಕೂಡ ತಿಳಿಸಲಾಗಿದೆ ನೀವು ಈ ವಿಧಾನವನ್ನು ಕೂಡ ಅನುಸರಿಸಬಹುದಾಗಿದೆ.
Comments are closed.