Breakfast recipe: ಮೊಳಕೆ ಕಾಳಿನ ದೋಸೆಯನ್ನು ತಿಂದಿದ್ದೀರಾ? ಇಲ್ಲವಾದರೆ ತಪ್ಪದೇ ಟ್ರೈ ಮಾಡಿ, ಬೆಳಿಗ್ಗೆ ಒಂದೈದು ದೋಸೆ ಎಕ್ಸ್ಟ್ರಾನೇ ತಿಂತಿರಿ!

Breakfast recipe: ದೋಸೆ (dose)ಯಲ್ಲಿ ಎಷ್ಟೊಂದು ವೆರೈಟಿ ಇದೆ ಅಲ್ವಾ? ಅದರಲ್ಲೂ ಕೆಲವು ದೋಸೆಗಳು ತಿನ್ನೋದಕ್ಕೂ ರುಚಿ ಮಾಡೋದಕ್ಕೂ ಸುಲಭ. ಇನ್ನೂ ಕೆಲವು ದೋಸೆಗಳು ಆರೊಗ್ಯಕರ ಗುಣಗಳ ಆಗರ. ಕರ್ನಾಟಕ (Karnataka) ದಲ್ಲಿ ಒಂದೊಂದು ಬದಿಗೂ ಒಂದೊಂದು ರೀತಿಯ ದೋಸೆ ಫೇಮಸ್. ಅಂದಹಾಗೆ ನೀವು ಹೆಸರು ಕಾಳು ಮೊಳಕೆ ತರಿಸಿದ ದೋಸೆ ತಿಂದಿದ್ದೀರಾ? ಇಲ್ಲವಾದರೆ ತಪ್ಪದೇ ಟ್ರೈ ಮಾಡಿ ನೋಡಿ. ರುಚಿಯು ಸೂಪರ್, ಮಾಡೋದಕ್ಕೂ ಸುಲಭ. ಅಷ್ಟೇ ಅಲ್ಲ, ಆರೋಗ್ಯಕ್ಕಂತೂ ಹೇಳಿ ಮಾಡಿಸಿದ ಆಹಾರ. ಹಾಗಾದರೆ ಇಲ್ಲಿದೆ ನೋಡಿ ಮೊಳಕೆ ಕಾಳಿನ ದೋಸೆಯ ರೆಸಿಪಿ (recipe).

ಹೆಸರು ಕಾಳಿನ ಮೊಳಕೆ ಬರಿಸಿದ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು(Needed things):

ಒಂದು ಕಪ್ ಮೊಳಕೆಯೊಡೆದ ಹೆಸರು ಕಾಳು

ಅರ್ಧ ಕಟ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು

ಒಂದು ಇಂಚಿನ ಕತ್ತರಿಸಿದ ಶುಂಠಿ

ಎರಡರಿಂದ ಮೂರು ಹಸಿರು ಮೆಣಸಿನಕಾಯಿ

ಒಂದು ಟೀ ಸ್ಪೂನ್ ಜೀರಿಗೆ

ಅರ್ಧ ಕಪ್ ನೀರು

ರಿಚಿಗೆ ತಕ್ಕಷ್ಟು ಉಪ್ಪು

ದೋಸೆ ಮಾಡಲು ಎಣ್ಣೆ

ಇದನ್ನೂ ಓದಿ: Kannada Recipe: ನಾಳೆ ಬೆಳಿಗ್ಗೆ ಏನು ತಿಂಡಿ ಮಾಡೋದು ಅಂತ ಯೋಚನೆನಾ? ಚಿಂತೆನೇ ಬೇಡ ಸುಲಭವಾಗಿ ಹೀಗೆ ಹೆಸರು ಬೇಳೆ ದೋಸೆ ಮಾಡಿ ಮನೆಯವರು ಚಪ್ಪರಿಸಿಕೊಂಡು ತಿಂತ್ತಾರೆ ನೋಡಿ!

ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ ಮಾಡುವ ವಿಧಾನ:

ಒಂದು ಕಪ್ ಹೆಸರು ಕಾಳನ್ನು ರಾತ್ರಿಯೇ ನೆನೆಸಿ, ಮಾರನೇ ದಿನ ಬೆಳಗ್ಗೆ ನೀರನ್ನು ಸೋಸಿ, ಒಂದು ಬಟ್ಟೆಯಲ್ಲಿ ಕಾಳುಗಳನ್ನು ಕಟ್ಟಿಡಿ ಅದು ಮೊಳಕೆ ಬಂದಿರುತ್ತದೆ. ಮೊಳಕೆ ಬಂದ ಮಿಕ್ಸರ್ ಗೆ ಹಾಕಿರಿ. ಬಳಿಕ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಂದು ಇಂಚಿನ ಕತ್ತರಿಸಿದ ಶುಂಠಿ, ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಜೀರಿಗೆ, ಅರ್ಧ ಕಪ್ ನೀರು, ಅರ್ಧ ಟೀ ಸ್ಪೂನ್ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಬಳಿಕ ರುಚಿ ನೋಡಿಕೊಂಡು ಅಗತ್ಯವಿದ್ದರೆ ಇನ್ನೂ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ತವಾವನ್ನು ಬಿಸಿ ಮಾಡಿ. ಅದಕ್ಕೆ ಎಣ್ಣೆಯನ್ನು ಸವರಿ. ಸಿದ್ಧವಾಗಿರುವ ಹಿಟ್ಟಿನಿಂದ ತವಾ ಮ್ಲೆ ದೋಸೆ ಹುಯ್ಯಿರಿ. ಕತ್ತರಿಸಿದ ಈರುಳ್ಳಿಯನ್ನು ಮೇಲಿಂದ ಹಾಕಿ ಬೇಯಿಸಿ. ಇದನ್ನು ಸ್ವಲ್ಪ ಕ್ರಿಸ್ಪಿಯಾಗಿ ಮಾಡಿದ್ದರೆ ಒಂದೇ ಬದಿಗೆ ಬೇಯಿಸಿದರೆ ಸಾಕು. ಬೇಕಿದ್ದರೆ ಎರಡೂ ಕಡೆಗೂ ಮೊಗಚಿ ಹಾಕಿ ದೋಸೆಯನ್ನು ಬೇಯಿಸಿಕೊಳ್ಳಿ. ಈಗ ನಿಮಗಿಷ್ಟವಾದ ಚಟ್ನಿ ಜೊತೆ ಮೊಳಕೆ ಕಾಳಿನ ದೋಸೆ ಸವಿಯಲು ಸಿದ್ಧ.  ಇದನ್ನೂ ಓದಿ: ಕೇವಲ ಹತ್ತು ನಿಮಿಷಗಳಲ್ಲಿ ಮಾಡಿ ಬೆಂಡೆಕಾಯಿ ಚಟ್ನಿ; ಬಿಸಿ ಬಿಸಿ ಅನ್ನಕ್ಕೆ ಇದೊಂದು ಚಟ್ನಿ ಸಾಕು!

Comments are closed.