Naga Sadhu: ನಾಗ ಸಾಧು ಆಗಬಯಸುವಂತಹ ಮಹಿಳೆಯರು ಈ ಕೆಲಸ ಮಾಡಲೇಬೇಕು; ಕಷ್ಟ ಆದರೂ ಕೇಳೋರಿಲ್ಲ!

Naga Sadhu: ನೀವು ಸಾಕಷ್ಟು ಬಾರಿ ನಾಗಸಾಧುಗಳನ್ನು ನೋಡಿರಬಹುದಾಗಿದೆ ಹಾಗೂ ಅವರು ಬಹುತೇಕ ಎಲ್ಲರೂ ಕೂಡ ಪುರುಷರಾಗಿರುತ್ತಾರೆ ಹಾಗೂ ಬೆತ್ತಲೆ ಆಗಿರುತ್ತಾರೆ. ಆದರೆ ನಾಗ ಸಾಧುಗಳು ಎಂದಾಕ್ಷಣ ಕೇವಲ ಪುರುಷರು ಮಾತ್ರ ಇರ್ತಾರೆ ಅಂತಲ್ಲ. ಅಲ್ಲಿ ಮಹಿಳೆಯರು ಕೂಡ ಇರ್ತಾರೆ. ಅವರು ಕೂಡ ಬೆತ್ತಲೆ ಆಗಿರಬೇಕು ಅನ್ನೋದಾಗಿ ನೀವು ಕೇಳಬಹುದು ಆದರೆ ಆ ರೀತಿ ಇರೋದಿಲ್ಲ. ಬದಲಾಗಿ ಅವರು ಹೊಲಿಗೆ ಹಾಕದ ಒಂದೇ ಒಂದು ತುಂಡು ಬಟ್ಟೆಯನ್ನು ಮೈಗೆ ಸುತ್ತಿಕೊಳ್ಳುತ್ತಾರೆ. ಹಣೆಗೆ ತಿಲಕವನ್ನು ಹಚ್ಚಿಕೊಂಡು ಮೈತುಂಬ ಕೂದಲನ್ನು ಇಳಿಬಿಟ್ಟು ಕೊಂಡಿರುತ್ತಾರೆ.

ಮಹಿಳೆಯರು ನಾಗಸಾಧು ಆಗಬೇಕು ಅಂತ ಅಂದರೆ ಕಠಿಣ ತಪಸ್ಸು ಹಾಗೂ ಧ್ಯಾನವನ್ನು ಮಾಡಬೇಕಾಗಿರುತ್ತದೆ ಎನ್ನುವಂತಹ ನಿಯಮ ಕೂಡ ನಾಗಸಾಧುಗಳಲ್ಲಿ ಇದೆ. ಇನ್ನು ಮಹಿಳೆಯರು ನಾಗಸಾಧು ಆಗೋದಕ್ಕಿಂತ ಮುಂಚೆ 6 ರಿಂದ 12 ವರ್ಷಗಳ ಕಾಲ ಬ್ರಹ್ಮಚರ್ಯೆಯನ್ನು ಪಾಲಿಸಬೇಕಾಗಿರುತ್ತದೆ. ಕಠಿಣವಾಗಿರುವಂತಹ ಬ್ರಹ್ಮಚರ್ಯ ನಿಯಮವನ್ನು ಪಾಲಿಸಿದ ನಂತರವಷ್ಟೇ ನಾಗಸಾಧು ಆಗುವ ಅವಕಾಶ ಸಿಗುತ್ತದೆ.

ಇನ್ನು ಮಹಿಳೆಯರು ನಾಗಸಾಧುಗಳಾಗಿ ದೀಕ್ಷೆಯನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ ತಲೆಯನ್ನು ಬೋಳಿಸಬೇಕು ಎಂಬ ಪ್ರಕ್ರಿಯೆ ಇದ್ದು ಇದರಲ್ಲಿ ಮಹಿಳೆಯರು ಸಾಕಷ್ಟು ನೋ-ವನ್ನು ಅನುಭವಿಸುತ್ತಾರೆ ಎಂಬುದಾಗಿ ಕೂಡ ಹೇಳಲಾಗುತ್ತದೆ. ಸಾಮಾನ್ಯವಾಗಿ ಸನಾತನ ಹಿಂದೂ ಸಂಸ್ಕೃತಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸ-ತ್ತ ನಂತರ ಪಿಂಡ ಪ್ರಧಾನ ಮಾಡಲಾಗುತ್ತದೆ. ಆದರೆ ಮಹಿಳಾ ನಾಗ ಸಾಧುಗಳು ದೀಕ್ಷೆಯನ್ನು ಪಡೆಯುವುದಕ್ಕಿಂತ ಮುಂಚೆ ಪಿಂಡಪ್ರದಾನವನ್ನು ಮಾಡಬೇಕಾಗಿರುತ್ತದೆ. ಇದು ಕೂಡ ನಾಗ ಸಾಧು ಆಗುವುದಕ್ಕೆ ಅನುಸರಿಸ ಬೇಕಾಗಿರುವಂತಹ ಒಂದು ಪ್ರಮುಖ ನಿಯಮವಾಗಿದೆ.

ಈ ಮೂಲಕ ಪ್ರಪಂಚದಲ್ಲಿರುವಂತಹ ಪ್ರತಿಯೊಂದು ಲೌಕಿಕ ಬಂಧಗಳನ್ನು ಆ ಮಹಿಳಾ ನಾಗ ಸಾಧುಗಳು ಮುರಿದುಕೊಳ್ಳುತ್ತಾರೆ ಎಂಬುದಾಗಿ ಅರ್ಥವಾಗಿರುತ್ತದೆ. ಇನ್ನು ಈ ಪ್ರಪಂಚದಿಂದ ಯಾವಾಗಲೂ ಕೂಡ ಮಹಿಳಾ ಸಾಧುಗಳು ದೂರವಾಗಿಯೇ ತಮ್ಮ ಜೀವನವನ್ನು ನಡೆಸುತ್ತಾರೆ. ಇವರು ಪ್ರಪಂಚದ ಮುಂದೆ ಬರೋದು ಕುಂಭಮೇಳದಂತಹ ಮಹಾನ್ ಆಚರಣೆಯ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡುವುದಕ್ಕಾಗಿ. ಇದನ್ನು ಹೊರತುಪಡಿಸಿ ನೀವು ಮಹಿಳಾ ನಾಗಸಾಧುಗಳನ್ನು ಹೆಚ್ಚಾಗಿ ಕಾಣುವುದಕ್ಕೆ ಸಾಧ್ಯ ಇರುವುದಿಲ್ಲ. ಹೀಗಾಗಿ ಮಹಿಳಾ ಸಾಧು ಆಗಬೇಕು ಅಂತ ಅಂದ್ರೆ ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ನಂತರವಷ್ಟೇ ಮಹಿಳಾ ಸಾಧು ಆಗೋದಕ್ಕೆ ಮಹಿಳೆಯರಿಗೆ ಅವಕಾಶ ಇರುತ್ತದೆ. ಪ್ರಪಂಚದಲ್ಲಿರುವ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡ ನಂತರ ಹಾಗೂ ಪಿಂಡಪ್ರದಾನ ಮಾಡಿ ತಲೆಯನ್ನು ಬೋಳಿಸಿಕೊಂಡು ನಂತರವಷ್ಟೇ ದೀಕ್ಷೆಯನ್ನು ಪಡೆದುಕೊಳ್ಳಲು ಸಾಧ್ಯವಿರುತ್ತದೆ.

Comments are closed.