Naga Sadhu: ಒಂದು ಕಾಲದಲ್ಲಿ ನಿರ್ಮಾಣ ಮಾಡಿರುವಂತಹ ನಮ್ಮ ಹಿಂದೂ ದೇವಾಲಯಗಳು ಹಾಗೂ ಮಠಗಳನ್ನು ಮತ್ತು ಅಲ್ಲಿಗೆ ಬರುವಂತಹ ಭಕ್ತರನ್ನ ರಕ್ಷಿಸುವುದಕ್ಕಾಗಿ ಒಂದು ಭಕ್ತಗಣ ತಯಾರಾಗಿತ್ತು. ಅವರನ್ನೇ ನಾಗಸಾಧುಗಳು ಎಂಬುದಾಗಿ ಕರೆಯುತ್ತಾರೆ. ಸಾಮಾನ್ಯವಾಗಿ ನಾಗ ಸಾಧುಗಳು ಎಂದಾಗ ನಾವು ಪುರುಷರನ್ನ ಮಾತ್ರ ನೋಡಿರುತ್ತೇವೆ ಆದರೆ ಸ್ತ್ರೀಯರು ಕೂಡ ನಾಗ ಸಾಧುಗಳಾಗಿರುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಕಷ್ಟಗಳನ್ನು ಕೂಡ ಅನುಭವಿಸ ಬೇಕಾಗಿರುತ್ತದೆ ಅವುಗಳ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ತಿಳಿಯೋಣ.
ಮೊದಲಿಗೆ ಸ್ತ್ರೀಯರು ನಾಗ ಸಾಧುಗಳಾಗುವುದಕ್ಕೆ ತಮ್ಮ ಎಲ್ಲಾ ಲೌಕಿಕ ಸಂಬಂಧಗಳನ್ನು ತೊರೆದಿದ್ದೇನೆ ಎನ್ನುವ ರೀತಿಯಲ್ಲಿ ಪಿಂಡಪ್ರದಾನವನ್ನು ಮಾಡಬೇಕಾಗಿರುತ್ತದೆ ಹಾಗೂ ನಂತರ ತಲೆಯನ್ನು ಬೋಳಿಸಿಕೊಳ್ಳಬೇಕಾಗುತ್ತದೆ. ಇದಾದ ನಂತರವೇ ಅವರಿಗೆ ನಾಗ ಸಾಧು ಆಗುವುದಕ್ಕೆ ದೀಕ್ಷೆಯನ್ನು ನೀಡಲಾಗುತ್ತದೆ. ಈ ಪ್ರಪಂಚದಿಂದಲೇ ದೂರವಾಗಿ ಅವರು ಯಾರಿಗೂ ಕಾಣದ ರೀತಿಯಲ್ಲಿ ಗುಹೆ ಹಾಗೂ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಕುಂಭಮೇಳದಂತಹ ದೊಡ್ಡ ಉತ್ಸವಗಳಲ್ಲಿ ಮಾತ್ರ ಅವರು ಈ ಹೊರಲೋಕಕ್ಕೆ ಕಾಣಿಸಿಕೊಳ್ಳುತ್ತಾರೆ. ಆದರೆ ಪುರುಷರ ರೀತಿಯಲ್ಲಿ ಇವರು ಸಂಪೂರ್ಣವಾಗಿ ನಗ್ನವಾಗಿರುವುದಿಲ್ಲ ಬದಲಾಗಿ ಕೇಸರಿಬಟ್ಟೆಯನ್ನು ಸುತ್ತಿಕೊಳ್ಳುತ್ತಾರೆ.
ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಸ್ತ್ರೀಯರನ್ನು ನಾಗ ಸಾಧುಗಳಾಗಿ ದೀಕ್ಷೆ ನೀಡಿ ಅವರನ್ನ ಪರಿವರ್ತಿಸುವುದಕ್ಕಿಂತ ಮುಂಚೆ ಅವರು ಈ ಜೀವನಕ್ಕೆ ಸರಿ ಹೊಂದುತ್ತಾರೋ ಇಲ್ಲವೋ ಎನ್ನುವುದಕ್ಕಾಗಿ ಅವರನ್ನು ಕಠಿಣ ರೀತಿಯಲ್ಲಿ ಪರೀಕ್ಷೆ ಕೂಡ ಮಾಡಲಾಗುತ್ತದೆ ಎಂಬುದನ್ನ ಇಲ್ಲಿ ಪ್ರಮುಖವಾಗಿ ಎಲ್ಲರೂ ಕೂಡ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಯಾಕೆಂದ್ರೆ ನಾಗ ಸಾಧು ಜೀವನ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಹಾಗೂ ಮಹಿಳೆಯರು ಇದಕ್ಕೆ ಸರಿ ಹೊಂದುತ್ತಾರೋ ಇಲ್ಲವೋ ಎನ್ನುವುದನ್ನು ಮೊದಲಿಗೆ ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಕಷ್ಟದ ಪರೀಕ್ಷೆಗಳನ್ನು ಕೂಡ ಅವರಿಗೆ ನೀಡಲಾಗುತ್ತದೆ. ಈ ಎಲ್ಲ ಕಷ್ಟಕರ ಪರೀಕ್ಷೆಗಳನ್ನು ಹಾಗೂ ಇರುವಂತಹ ಎಲ್ಲ ಲೌಕಿಕ ಸಂಬಂಧಗಳನ್ನು ಹಾಗೂ ವ್ಯಾಮೋಹಗಳನ್ನು ತ್ಯಜಿಸಿದ ನಂತರವೇ ಮಹಿಳೆಯರು ನಾಗಸಾಧುಗಳಾಗಿ ದೀಕ್ಷೆಯನ್ನು ಪಡೆದುಕೊಳ್ಳಬಹುದಾಗಿದೆ. ದೀಕ್ಷೆಯನ್ನು ಪಡೆದುಕೊಂಡ ನಂತರ ಕೂಡ ಆ ಜೀವನವನ್ನು ನಡೆಸುವುದು ಹಾಗೂ ಹೊರಲೋಕಕ್ಕೆ ಕಾಣದಂತೆ ನಡೆದುಕೊಳ್ಳುವುದು ಕೂಡ ಕಷ್ಟಕರ ವಿಚಾರವಾಗಿದೆ.
ಇವಿಷ್ಟು ಪರೀಕ್ಷೆಗಳು ಹಾಗೂ ಪ್ರಕ್ರಿಯೆಗಳ ನಂತರವಷ್ಟೇ ಮಹಿಳೆಯರು ನಾಗಸಾಧುಗಳಾಗಿ ಅಧಿಕೃತವಾಗಿ ಶಾಸ್ತ್ರ ಬದ್ಧವಾಗಿ ಕಾಣಿಸಿಕೊಳ್ಳಬಹುದಾಗಿದೆ.
Comments are closed.