Pavithra Gowda:ಜೈಲಿನಲ್ಲಿದ್ದು ಕಷ್ಟದಲ್ಲಿ ಇರುವ ಪವಿತ್ರ ರವರು ಜಾಮೀನು ಅರ್ಜಿ ಸಲ್ಲಿಸಿದ ತಕ್ಷಣ ಶಾಕ್ ಕೊಟ್ಟ ಪೊಲೀಸರು!
Pavithra Gowda: ಈಗಾಗಲೇ ರೇಣುಕಾ ಸ್ವಾಮಿ ಪ್ರಕರಣದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವಿತ್ರ ಗೌಡ ಹಾಗೂ ಚಾಲನೆ ಸ್ಟಾರ್ ದರ್ಶನ್ ರವರು ಇಬ್ರೂ ಕೂಡ ಜೈಲಿಗೆ ಹೋಗಿ ಎರಡು ತಿಂಗಳಿಗೂ ಹೆಚ್ಚಿನ ಸಮಯ ಕಳೆದಿದೆ. ಇನ್ನು ಇದೇ ಸಂದರ್ಭದಲ್ಲಿ ಅಂದರೆ ಆಗಸ್ಟ್ 22ನೇ ದಿನಾಂಕದಂದು ಪವಿತ್ರ ಗೌಡ ಅವರು ಬೇಲ್ಗಾಗಿ ಅರ್ಜಿ ಸಲ್ಲಿಸಿದರು ಎಂಬುದಾಗಿ ತಿಳಿದು ಬಂದಿದ್ದು ನ್ಯಾಯಾಲಯದಿಂದ ಪವಿತ್ರ ಗೌಡ ಅವರಿಗೆ ನಿರಾಸೆ ಕಾದಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಪವಿತ್ರ ಗೌಡ ಅವರ ಜಾಮೀನು ಅರ್ಜಿಯ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ನವರು ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ಇದು ಪವಿತ್ರ ಗೌಡ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಪವಿತ್ರ ಗೌಡ ಅವರು ಬೇಲ್ ಸಲ್ಲಿಸುವುದಕ್ಕೆ ಸಿಂಗಲ್ ಪೇರೆಂಟ್ ಹಾಗೂ ವಯಸ್ಸಾಗಿರುವಂತಹ ಪೋಷಕರನ್ನ ನೋಡಿಕೊಳ್ಳಬೇಕು ಎನ್ನುವ ಕಾರಣವನ್ನು ನೀಡಿದ್ದು ಆದರೆ ಇದು ಮರ್ಡ-ರ್ ಕೇಸ್ ಆಗಿರುವುದರಿಂದಾಗಿ ಬೇಲ್ ಸಿಗುವುದು ಸುಲಭದ ಮಾತಲ್ಲ ಅನ್ನೋದು ಮನವರಿಕೆಯಾಗಿದೆ. ಈಗಾಗಲೇ ನಡೆದಿರುವಂತಹ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಕೂಡ ನನ್ನ ಪಾತ್ರವಿಲ್ಲ ಎಂಬುದಾಗಿ ಪವಿತ್ರ ಗೌಡ ಹೇಳಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದರು ಕೂಡ ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ರೀತಿಯಲ್ಲಿ ಸಕಾರಾತ್ಮಕ ಫಲಿತಾಂಶ ಪವಿತ್ರ ಗೌಡ ಅವರ ಪರವಾಗಿ ಕಂಡು ಬಂದಿಲ್ಲ.
ಕೇವಲ ಪವಿತ್ರ ಗೌಡ ಮಾತ್ರವಲ್ಲದೆ ಈ ಪ್ರಕರಣದ ಎ10 ಆರೋಪಿಯಾಗಿರುವಂತಹ ವಿನಯ್ ಅವರು ಕೂಡ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಈ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ರೇಣುಕಸ್ವಾಮಿ ಪ್ರಕರಣದಲ್ಲಿ ಪೊಲೀಸರು 4000ಕ್ಕೂ ಹೆಚ್ಚಿನ ಪುಟಗಳ ರಿಪೋರ್ಟ್ ಅನ್ನು ಈ ಪ್ರಕರಣದ ಅಡಿಯಲ್ಲಿ ಸಲ್ಲಿಕೆ ಮಾಡಲು ಸಿದ್ಧರಾಗಿ ನಿಂತಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. 60 ದಿನಗಳಿಗಿಂತಲೂ ಹೆಚ್ಚಿನ ಕಾಲ ತನಿಖೆ ನಡೆಸಿದ ನಂತರ ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡುವುದಕ್ಕೆ ಪೊಲೀಸರು ಸಿದ್ಧವಾಗಿದ್ದಾರೆ. ಚಾರ್ಜ್ ಶೀಟ್ ಪ್ರಮುಖವಾದಂತಹ ಸಾಕ್ಷಿದಾರ ವಾಗಿದ್ದು ಇದರಲ್ಲಿ 17 ಆರೋಪಿಗಳು ಪ್ರಕರಣದಲ್ಲಿ ಇದ್ದಾರೆ ಎನ್ನುವುದಕ್ಕೆ ನೂರಕ್ಕೂ ಹೆಚ್ಚಿನ ಸಾಕ್ಷಿಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಸೆಪ್ಟೆಂಬರ್ 5ರ ಒಳಗೆ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಪೊಲೀಸರಿಗೆ ಅವಕಾಶವಿದ್ದು ಇದರಲ್ಲಿ ಪ್ರತಿಯೊಬ್ಬ ಆರೋಪಿಯ ಹೇಳಿಕೆ ಸೇರಿದಂತೆ ದರ್ಶನ್ ರವರ ಬಟ್ಟೆಯ ಮೇಲಿದ್ದ ರಕ್ತದ ಕಲೆಗಳನ್ನು ಕೂಡ ಸೇರಿಸಿ ಸಾಕಷ್ಟು ಸಾಕ್ಷಿ ಗಳನ್ನು ಪೊಲೀಸರು ಕಲೆ ಹಾಕಿರುವ ಬಗ್ಗೆ ಕೂಡ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ವಿಚಾರದ ಬಗ್ಗೆ ಕೋರ್ಟಿನಿಂದ ಒಂದು ದೊಡ್ಡ ಮಟ್ಟದ ತೀರ್ಪು ಹೊರಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
Comments are closed.