Rahul Dravid:ನಾನು ನಟಿಸಲು ಸಿದ್ದ – ಆದರೆ – ಅಧಿಕ ಪ್ರಸಂಗ ಮಾಡಿದ ಪತ್ರಕರ್ತರಿಗೆ ದ್ರಾವಿಡ್ ಕೊಟ್ಟ ಉತ್ತರ ಹೇಗಿತ್ತು ಗೊತ್ತೇ??
Rahul Dravid:ಭಾರತ ಕ್ರಿಕೆಟ್ ತಂಡಂತಹ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿರುವಂತಹ ರಾಹುಲ್ ದ್ರಾವಿಡ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಬಾರಿ ನಡೆದಿರುವಂತಹ ಟಿ 20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ 2007ರ ನಂತರ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆಲ್ಲುವುದಕ್ಕೆ ಪ್ರಮುಖ ಕಾರಣರಾಗಿದ್ದಾರೆ. ವಿಶ್ವ ಕಪ್ ಗೆ ಕೊಟ್ಟ ನಂತರವೇ ಅವರು ಕೂಡಲೇ ತಮ್ಮ ಕೋಚಿಂಗ್ ಸ್ಥಾನಕ್ಕೆ ನಿವೃತ್ತಿಯನ್ನು ಘೋಷಿಸಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಇನ್ನು ಇತ್ತೀಚೆಗೆ ಮುಂಬೈನಲ್ಲಿ ನಡೆದಿರುವಂತಹ ಚಾಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ರವರು ಸೇರಿದಂತೆ ರೋಹಿತ್ ಶರ್ಮ, ಜೈ ಶಾ, ಶಮ್ಮಿ, ಶ್ರೇಯಸ್ ಅಯ್ಯರ್ ಸೇರಿದಂತೆ ಸಾಕಷ್ಟು ಖ್ಯಾತನಾಮರು ಕೂಡ ಈ ಕಾರ್ಯಕ್ರಮದಲ್ಲಿ ಇದ್ದರು ಎಂಬುದಾಗಿ ತಿಳಿದುಬಂದಿದೆ. ಕಳೆದ ಬಾರಿಯ ಏಕದಿನ ವಿಶ್ವಕಪ್ ನಲ್ಲಿ 10 ಸತತ ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ತಂಡ ರಾಹುಲ್ ದ್ರಾವಿಡ್ ಅವರ ಕೋಚಿಂಗ್ನಲ್ಲಿ ಗೆದ್ದಿದೆ. ಅದೇ ರೀತಿಯಲ್ಲಿ ಟಿ20 ವಿಶ್ವಕಪ್ ನಲ್ಲಿ ಕೂಡ ಅಜೇಯ ತಂಡವಾಗಿ ವಿಶ್ವ ಕಪ್ ಗೆದ್ದಿರುವುದು ಕೂಡ ರಾಹುಲ್ ದ್ರಾವಿಡ್ ರವರ ಜೀವಮಾನ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.
ಇನ್ನು ಇದೇ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ರವರಿಗೆ ಅವರ ಜೀವನಕ್ಕೆ ಸಂಬಂಧಪಟ್ಟಂತಹ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂಬುದಾಗಿ ಕೇಳಿದಾಗ ಒಳ್ಳೆಯ ಸಂಭಾವನೆ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ ಎಂಬುದಾಗಿ ರಾಹುಲ್ ದ್ರಾವಿಡ್ ಹಾಸ್ಯಾಸ್ಪದವಾಗಿ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ ರವರ ಬಯೋಪಿಕ್ ಕೂಡ ಅನೌನ್ಸ್ ಆಗಿರುವುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಮಹೇಂದ್ರ ಸಿಂಗ್ ಧೋನಿ ರವರ ನಂತರ ಯುವರಾಜ್ ಸಿಂಗ್ ರವರ ಬಯೋಪಿಕ್ ಈ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದೆ.
ಕನ್ನಡಿಗ ಆಗಿರುವಂತಹ ರಾಹುಲ್ ದ್ರಾವಿಡ್ ರವರ ಬಗ್ಗೆ ಕೂಡ ಬಯೋಪಿಕ್ ಮಾಡುವ ಮೂಲಕ ಅವರ ಕ್ರಿಕೆಟ್ ಜೀವನಕ್ಕೆ ಗೌರವ ಸಲ್ಲಿಸುವಂತಹ ಕೆಲಸವನ್ನು ಮಾಡಬೇಕು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಆಶಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಆರಂಭಿಕ ದಿನಗಳಲ್ಲಿ ಕೋಚ್ ಆಗಿ ರಾಹುಲ್ ದ್ರಾವಿಡ್ ವಿಫಲರಾದರು ಕೂಡ ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು ಗಮನಾರ್ಹ ಸಾಧನೆಯಾಗಿದೆ.
Comments are closed.