Rakshita Prem: ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ರಕ್ಷಿತಾ ಪ್ರೇಮ್ ಅವರು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿ ಕೇವಲ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಬಹುದು ಆದರೆ ಇವತ್ತಿಗೂ ಕೂಡ ಅವರಿಗೆ ಅಭಿಮಾನಿಗಳ ಸಂಖ್ಯೆಯಲ್ಲಿ ಕೊರತೆ ಕಂಡು ಬಂದಿಲ್ಲ. ಇತ್ತೀಚಿಗಷ್ಟೇ ಸೆಟ್ ನಲ್ಲಿ ಆಗಿರುವಂತಹ ಒಂದು ಅವಮಾನದ ಮಾತಿನ ಬಗ್ಗೆ ರಕ್ಷಿತಾ ಪ್ರೇಮ್ ಅವರು ಹೇಳಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಮಾಹಿತಿಯನ್ನು ಪಡೆದುಕೊಳ್ಳೋಣ.
ರಕ್ಷಿತಾ ಪ್ರೇಮ್ ಯಾವತ್ತೂ ಕೂಡ ಯಾವುದೇ ವಿಚಾರ ಇರಲಿ ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳಿ ಬಿಡುವಂತಹ ನೇರ ವ್ಯಕ್ತಿತ್ವವನ್ನು ಹೊಂದಿರುವಂತಹ ನಟಿ. ಅದರಲ್ಲೂ ವಿಶೇಷವಾಗಿ ತಮ್ಮ ತಂದೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಮಾತನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಮಾತನಾಡಿದ್ದಾರೆ. ತಂದೆ ತೀರಿಕೊಂಡ ಮೂರನೇ ದಿನಕ್ಕೆ ಅವರು ಚಿತ್ರಿಕರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ನಿರ್ದೇಶಕರು ನಾವೇನು ಶೂಟಿಂಗ್ ನಿಲ್ಸ್ಬೇಕಾ, ಪ್ರೊಡ್ಯೂಸರ್ ಹಣ ಹೋಗ್ತಾ ಇದೆ ಅಲ್ವಾ, ಎಂದು ಹೇಳಿರುವುದನ್ನ ಇವತ್ತಿಗೂ ಕೂಡ ನೆನಪು ಮಾಡಿಕೊಳ್ಳುತ್ತೇನೆ ಅನ್ನೋದಾಗಿ ಆ ಕಹಿ ಘಟನೆಯನ್ನು ರಕ್ಷಿತಾ ಪ್ರೇಮ್ ಅವರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ. ಆ ಮಾತುಗಳನ್ನು ರಕ್ಷಿತಾ ಪ್ರೇಮ್ ಅವರಿಗೆ ಕೇಳಿಸಿಕೊಳ್ಳಲು ಸಾಧ್ಯವಾಗದೆ ಕೂಡಲೇ ಅವರು ಶೂಟಿಂಗ್ ಸೆಟ್ಸ್ನಿಂದ ಹೊರ ನಡೆಯುತ್ತಾರೆ ಹಾಗೂ ಇದನ್ನು ನಿರ್ಮಾಪಕರಿಗೂ ಕೂಡ ಅವರು ಕಾಲ್ ಮಾಡಿ ಹೇಳುತ್ತಾರೆ.
ಸಾಕಷ್ಟು ವರ್ಷಗಳ ನಂತರ ಈಗ ರಕ್ಷಿತಾ ಪ್ರೇಮ್ ಅವರು ಇಂಟರ್ವ್ಯೂ ಒಂದರಲ್ಲಿ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದು ಕೆಲವೊಮ್ಮೆ ಜೀವನದಲ್ಲಿ ಕಷ್ಟ ಆದರೂ ಕೂಡ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಇಂತಹ ನಿರ್ಧಾರಗಳು ನಾವು ಎಂತಹ ಕಷ್ಟದ ಪರಿಸ್ಥಿತಿ ಬಂದ್ರು ಕೂಡ ಎಷ್ಟು ಗಟ್ಟಿಯಾಗಿರುತ್ತವೆ ಅನ್ನೋದನ್ನ ಸಾಬೀತುಪಡಿಸುತ್ತವೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವಂತಹ ನಟಿ ರಕ್ಷಿತಾ ಪ್ರೇಮ್ ಅವರು ನಿರ್ಮಾಪಕವಾಗಿ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ದಿ ವಿಲನ್ ಸಿನಿಮಾದಲ್ಲಿ ನಟಿ ಆಮಿ ಜಾಕ್ಸನ್ ಅವರ ಬದಲಿಗೆ ವಾಯ್ಸ್ ಕೂಡ ನೀಡುವ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು.
Comments are closed.