Ramya: ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ರಮ್ಯ ಅವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಆದ್ರೂ ಕೂಡ ಅವರ ಜನಪ್ರಿಯತೆ ಅನ್ನೋದು ಇನ್ನೂ ಕಡಿಮೆಯಾಗಿಲ್ಲ. ಇನ್ನು ಮೋಹಕ ಚೆಲುವೆ ರಮ್ಯ ಅವರ ಮದುವೆ ವಿಚಾರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಯಸ್ಸು 41 ಆಗಿದ್ದರೂ ಕೂಡ ರಮ್ಯಾ ಅವರಿಗೆ ಇದುವರೆಗೂ ಕೂಡ ಮದುವೆ ಆಗಿಲ್ಲ ಹಾಗೂ ಇದುವರೆಗೂ ಅವರ ಮದುವೆ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಗಳು ಕಂಡುಬಂದಿದ್ದವು ಅನ್ನೋದನ್ನ ಕೂಡ ನಾವಿಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. ನವೆಂಬರ್ 29ಕ್ಕೆ ನಿಮಗೆಲ್ಲರಿಗೂ ತಿಳಿದಿರಬಹುದು ರಮ್ಯ ಅವರ ಜನ್ಮದಿನವಾಗಿರುತ್ತದೆ. ಅದೇ ದಿನ ರಮ್ಯಾ ಅವರು ಪ್ರಭವ್ ಚೌದರಿ ಎನ್ನುವಂತಹ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎನ್ನುವುದಾಗಿ ಇತ್ತೀಚಿಗಷ್ಟೇ ಸುದ್ದಿವಾಹಿನಿಗಳು ಸುದ್ದಿಯನ್ನು ಬಿತ್ತರಿಸಿದ್ದವು.
ಕೊನೆಗೂ ನಟಿ ರಮ್ಯಾ ಅವರು ಈ ರೀತಿ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವಂತಹ ಸುಳ್ಳು ಮದುವೆ ವಿಚಾರದ ಬಗ್ಗೆ ತಮ್ಮ ಅಸಹನೆಯನ್ನು ಕಳೆದುಕೊಂಡು ಉತ್ತರ ನೀಡಿದ್ದಾರೆ. ನನಗೆ ಮೀಡಿಯಾದಲ್ಲಿ ಈಗಾಗಲೇ ಸಾಕಷ್ಟು ಬಾರಿ ಮದುವೆ ಮಾಡಿಸಿದ್ದಾರೆ. ನಾನು ನಿಜವಾಗಿಯೂ ಮದುವೆ ಆಗೋದಿದ್ರೆ ನಾನೇ ಹೇಳ್ತೇನೆ ಈ ರೀತಿ ಸುಳ್ಳು ಸುದ್ದಿಗಳನ್ನು ನಂಬುವುದಕ್ಕೆ ಹೋಗಬೇಡಿ ಎನ್ನುವ ರೀತಿಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯನ್ನು ಅಪ್ಲೋಡ್ ಮಾಡುವ ಮೂಲಕ ಈ ಸುಳ್ಳು ಸುದ್ದಿಗೆ ಪರದೆ ಎಳೆಯುವಂತಹ ಕೆಲಸವನ್ನು ನಟಿ ರಮ್ಯ ಮಾಡಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಇದೇ ರೀತಿ ಈ ಹಿಂದೆನೂ ಕೂಡ ರಮ್ಯಾ ಅವರ ಬಗ್ಗೆ ಮದುವೆ ಸುದ್ದಿಗಳು ಸುಳ್ಳು ಸುದ್ದಿಯ ರೂಪದಲ್ಲಿ ಹರಿದಾಡಿದ್ದವು ಅನ್ನೋದನ್ನ ಕೂಡ ನಾವು ಇಲ್ಲಿ ನಾವು ನೆನಪು ಮಾಡಿಕೊಳ್ಳಬಹುದಾಗಿದೆ.
ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ರೂ ಕೂಡ ನಟಿ ರಮ್ಯಾ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸ್ತಾ ಇಲ್ಲ ಅನ್ನೋದೇ ಅಭಿಮಾನಿಗಳಿಗೆ ಬೇಸರದ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ರಮ್ಯಾ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದರ ಬಗ್ಗೆ ಕೂಡ ಅಭಿಮಾನಿಗಳು ಕುತೂಹಲರಾಗಿದ್ದಾರೆ.
Comments are closed.