Kannada Recipe: ಆಂಧ್ರ ಶೈಲಿಯಲ್ಲಿ ಇಂಥ ಒಂದು ಪುಳಿಯೋಗರೆ ಮಾಡಿದರೆ ಮನೆಯವರು ಚಪ್ಪರಿಸಿಕೊಂಡು ತಿಂತಾರೆ; ಹತ್ತು ನಿಮಿಷದ ಬೆಸ್ಟ್ ಬ್ರೇಕ್ ಫಾಸ್ಟ್ ರೆಸಿಪಿ ನೋಡಿ!
Kannada Recipe: ನಾವು ಕರ್ನಾಟಕ (Karnataka)ದವರು, ಎಲ್ಲಾ ಭಾಗದ ಆಹಾರ ಪದಾರ್ಥಗಳನ್ನು ಇಷ್ಟಪಡುತ್ತೇವೆ. ಹಾಗೆ ನೋಡೋದಕ್ಕೆ ಹೊದರೆ ನಮ್ಮಲ್ಲಿ ಸಿಗುವಷ್ಟು ವೆರೈಟಿ ಫೂಡ್ (Food) ಬೇರೆಲ್ಲೂ ಸಿಗುವುದೇ ಇಲ್ಲ. ಬೇರೆ ಎಲ್ಲಾ ಸ್ಥಳಗಳ ಆಹಾರಗಳೂ ಕರ್ನಾಟಕದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಂತೂ ಸೌತ್ (South) ತುದಿಯಿಂದ ನಾರ್ಥ್ (North) ಎಂಡ್ ವರೆಗೆ ಮಾಡುವ ಎಲ್ಲಾ ವಿಶೇಷ ತಿನಿಸುಗಳೂ ಲಭ್ಯ. ಹಾಗೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಒಂದು ಆಹಾರ ಅಂದ್ರೆ ಆಂಧ್ರ ಶೈಲಿಯ ಪುಳಿಯೋಗರೆ (Puliyogare). ಇದನ್ನ ನೀವು ಒಮ್ಮೆ ಮನೆಯಲ್ಲಿ ಮಾಡಿದ್ರೆ ಮತ್ತೆ ವಾರಕ್ಕೊಮ್ಮೆಯಾದ್ರೂ ಇದನ್ನ ಮಾಡಲೇಬೇಕಾಗುತ್ತೆ ನೋಡಿ. ಇದನ್ನೂ ಓದಿ:Kannada Recipe: ಸಾಮಾನ್ಯ ದೋಸೆ ತಿಂದು ಬೋರ್ ಆಗಿದ್ಯಾ? ಮನೆ ಮಂದಿ ಎಲ್ಲಾ ಮತ್ತೆ ಬೇಕು ಬೇಕು ಎನ್ನುವ ಆರೋಗ್ಯಕರ ದೋಸೆ ಮಾಡುವುದು ಹೇಗೆ ಗೊತ್ತೇ?
ಪುಳಿಯೋಗರೆ ಮಾಡಲು ಬೇಕಾಗುವ ಪದಾರ್ಥಗಳು:
ಒಂದು ಬಟ್ಟಲು ಅಲ್ಲ ಬೇಯಿಸಿ ಇಟ್ಟುಕೊಳ್ಳಿ.
250 ಗ್ರಾಂ ಹುಣಿಸೇ ಹಣ್ಣು
5-6 ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ
ಕರಿಬೇವಿನ ಎಲೆ
ಉಪ್ಪು ರುಚಿಗೆ
2 ಚಮಚ ಬೆಲ್ಲ
1 ಟೀಸ್ಪೂನ್ ಅರಿಶಿನ,
ಪುಳಿಯೊಗರೆ ಮಸಾಲೆಗೆ:
ಎರಡು ಚಮಚ ಎಳ್ಳು
ಒಂದು ಚಮಚ ಧನಿಯಾ / ಕೊತ್ತಂಬರಿ ಬೀಜ
ಒಂದು ಚಮಚ ಜೀರಿಗೆ
ಒಂದು ಚಮಚ ಒಣ ಮೆಣಸು
ಒಂದು ಚಮಚ ಸಾಸಿವೆ
ಕಾಲು ಟೀಸ್ಪೂನ್ ಮೆಂತ್ಯ
ಹದಗೊಳಿಸಲು ಬೇಕಾಗುವ ಸಾಮಗ್ರಿಗಳು
ಎಣ್ಣೆ, ಕಡಲೆ ಬೀಜ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಹಿಂಗ್, ಒಣಗಿದ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಬೇಕು. ಇದನ್ನೂ ಓದಿ:<strong>Health Tips:</strong> ರಾತ್ರಿ ಮಲಗುವಾಗ ಹಾಲಿಗೆ ಇದೊಂದು ವಸ್ತು ಸೇರಿಸಿಕೊಂಡು ಕುಡಿದರೆ ಏನಾಗುತ್ತೆ ಗೊತ್ತಾ? ಮಕ್ಕಳಿಂದ ಮುದುಕರವರೆಗೂ ಈ ಬೆನಿಫಿಟ್ ಪಡೆದುಕೊಳ್ಳಬಹುದು!
ಮಾಡುವ ವಿಧಾನ:
ಮೊದಲು ಅನ್ನ ಮಾಡಿ ಇಟ್ಟುಕೊಳ್ಳಿ. ನಂತರ 250 ಗ್ರಾಂ ಹುಣಸೆ ಹಣ್ಣನ್ನು 2 ಕಪ್ ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ ಇಟ್ಟುಕೊಳ್ಳಿ. ನಂತರ ಅದರ ರಸ ತೆಗೆದಿಟ್ಟುಕೊಳ್ಳಿ. ಹುಣಸೆ ಹಣ್ಣಿನ ತಿರುಳು ಸಿದ್ಧವಾಗಿದೆ. ಇದನ್ನು ದೊಡ್ಡ ಕಡಾಯಿಗೆ ಹಾಕಿ. ಮೆಣಸಿನಕಾಯಿ, ಕರಿಬೇವಿನ ಎಲೆ, ಉಪ್ಪು, ಬೆಲ್ಲ ಮತ್ತು ಅರಿಶಿನ ಹಾಕಿ ಮಿಕ್ಸ್ ಮಾಡಿ ಇಪ್ಪತ್ತು ನಿಮಿಷ ಕುದಿಸಿಕೊಳ್ಳಬೇಕು. ಇದನ್ನೂ ಓದಿ:Kannada Astrology: ಗುರು ಶನಿ ರಾಹು ಕೇತು ಗ್ರಹಗಳಿಂದ 2023 ಆರಂಭದಲ್ಲಿ ಈ ರಾಶಿಗಳ ಜೀವನದಲ್ಲಿ ಆಗಲಿದೆ ದೊಡ್ಡ ಬದಲಾವಣೆ, ಎಣಿಸಲಿದ್ದೀರಿ ಕಾಂಚಾಣ! ಯಾವುವು ಗೊತ್ತೇ?
ನಂತರ ಪುಳಿಯೊಗರೆಮಸಾಲೆ ಮಿಶ್ರಣ ಮಾಡಿಕೊಳ್ಳಲು ಒಂದು ಪ್ಯಾನ್ ನಲ್ಲಿ ಎಳ್ಳು, ಕೊತ್ತಂಬರಿ ಜೀರಿಗೆ, ಮೆಣಸು, ಸಾಸಿವೆ ಮತ್ತು ಮೆಂತ್ಯವನ್ನು ಹಾಕಿ ಹುರಿದುಕೊಳ್ಳಿ (ಡ್ರೈ ರೋಸ್ಟ್) ಅದನ್ನು ತಣ್ಣಗಾದ ಮೇಲೆ ಮಿಕ್ಸರ್ ಜಾರ್ ಗೆ ಹಾಕಿ ಪುಡಿಮಾಡಿ. ಇದನ್ನು ಹುಣಸೆ ಹಣ್ಣಿನ ಮಿಶ್ರಣ ಮಾಡಿ ಇಟ್ಟುಕೊಂಡಿದ್ಡೇವಲ್ಲ ಅದಕ್ಕೆ ಸೇರಿಸಿ ಬೇಯಿಸಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ಬಳಿಕ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೆಳೆ, ಇಂಗು ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹುಣಿಸೇಹಣ್ಣು ಮಿಶ್ರಣಕ್ಕೆ ಇದನ್ನೂ ಸೇರಿಸಿ. ಈಗ ಪುಳಿಯೋಗರೆ ಒಗ್ಗರಣೆ ರೆಡಿ. ಈ ಒಗ್ಗರಣೆಗೆ ಬೇಕಾದಷ್ಟೇ ಅನ್ನ ಹಾಕಿ ಮಿಕ್ಸ್ ಮಾಡಿ. ಈ ಪುಳಿಯೋಗರೆ ಮಿಶ್ರಣವನ್ನು ನೀವು ಸಿದ್ಧಪಡಿಸಿ ಪ್ರೀಡ್ಜ್ ನಲ್ಲಿ ಗಾಳಿ ಆಡದ ಜಾರ್ ನಲ್ಲಿ ಹಾಕಿಟ್ಟರೆ ವಾರದ ವರೆಗೂ ಕೆಡುವುದಿಲ್ಲ. ಬೇಕಾದಾಗ ಬಿಸಿಬಿಸಿ ಅನ್ನಕ್ಕೆ ಮಿಕ್ಸ್ ಮಾಡಿಕೊಂಡು ಸವಿದ್ರೆ ಆಯ್ತು .. ಬೆಳಗಿನ ಉಪಹಾರ ಐದೇ ನಿಮಿಷಗಳಲ್ಲಿ ಸಿದ್ಧ!
Comments are closed.