Sandalwood: ರಾಜಕುಮಾರ್ ಅವರು ಬೇಡ ಎಂದು ಸಿನಿಮಾವನ್ನು ಟೈಗರ್ ಪ್ರಭಾಕರ್ ಮಾಡಿ ಗೆದ್ದರು! ಆ ಸಿನಿಮಾ ಯಾವುದು ಗೊತ್ತಾ?
Sandalwood: ಸಾಕಷ್ಟು ಸಿನಿಮಾಗಳು ಅಂದಿನ ಕಾಲದಲ್ಲಿ ಒಂದೇ ಕಥೆಯನ್ನು ಇಟ್ಟುಕೊಂಡು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿ ನಿರ್ಮಾಣ ಆಗಿರೋದು ಕೂಡ ಇದೆ. ಇದನ್ನ ಅಂದಿನ ಕಾಲದಲ್ಲಿ ರಿಮೇಕ್ ಸಿನಿಮಾಗಳು ಅಂತ ಕರೆಯಲಾಗುತ್ತಿತ್ತು. ಈ ರೀತಿಯ ಸಾಕಷ್ಟು ಆಫರ್ಗಳು ರಾಜಕುಮಾರ್ ಅವರನ್ನು ಹುಡುಕಿಕೊಂಡು ಬಂದಿದ್ದವು ಹಾಗೂ ಅಣ್ಣಾವ್ರು ಕೇವಲ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. ಆದರೆ ರಾಜಕುಮಾರ್ ರವರು ನಟಿಸಿರುವ ಅಂತಹ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸ್ವಮೇಕ್ ಆಗಿದ್ದವು. ಇನ್ನು ಅದೇ ರೀತಿಯಲ್ಲಿ ಇನ್ನೊಂದು ಕಡೆ ನಟ ಟೈಗರ್ ಪ್ರಭಾಕರ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರಂಭಿಕ ದಿನಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡೇ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು.
ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ಖಳನಾಯಕನಾಗಿ ಕಾಣಿಸಿಕೊಂಡಿರುವಂತಹ ಅನುಭವ ಟೈಗರ್ ಪ್ರಭಾಕರ್ ಅವರಿಗೆ ಇತ್ತು. ಹೀಗಾಗಿ ಕೇವಲ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಖಳನಾಯಕನಾಗಿ ಪರಭಾಷೆಗಳಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಅವರು ಹೊಂದಿದ್ದರು. ಆದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ರಾಜಕುಮಾರ್ ಅವರು ನಟಿಸಬೇಕಾಗಿದ್ದ ಅದೊಂದು ರಿಮೇಕ್ ಸಿನಿಮಾದಲ್ಲಿ ಅವರು ಒಪ್ಪಿಕೊಳ್ಳದೆ ಇದ್ದ ಕಾರಣದಿಂದಾಗಿ ಆ ಅವಕಾಶ ಟೈಗರ್ ಪ್ರಭಾಕರ್ ಅವರಿಗೆ ಚಿಕ್ಕ ಕಾರಣಕ್ಕಾಗಿ ಆ ಸಿನಿಮಾದಿಂದ ಅವರು ದೊಡ್ಡಮಟ್ಟದ ಸ್ಟಾರ್ ಗಿರಿ ಪಡೆದುಕೊಳ್ಳುತ್ತಾರೆ.
ಶಿವಾಜಿ ಗಣೇಶನ್ ನಟಿಸಿದ್ದ ತಮಿಳು ಚಿತ್ರದ ರೀಮೇಕ್ ರೈಟ್ಸ್ ಅನ್ನು ಕೆ ಎಸ್ ಎಲ್ ಸ್ವಾಮಿ ರಾಜಕುಮಾರ್ ಅವರಿಗೆ ತರುತ್ತಾರೆ. ಸ್ವಲ್ಪ ನೆಗೆಟಿವ್ ಶೇಡ್ ಇದೆ ಎನ್ನುವ ಕಾರಣಕ್ಕಾಗಿ ರಾಜಕುಮಾರ್ ಆ ಸಿನಿಮಾದಿಂದ ಹೊರಗೆ ಬರುತ್ತಾರೆ ಹಾಗೂ ನಂತರ ಆ ಸಿನಿಮಾದಲ್ಲಿ ಯಾರು ನಟಿಸಬಹುದು ಎನ್ನುವ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಟೈಗರ್ ಪ್ರಭಾಕರ್ ಅವರ ಹೆಸರು ನೆನಪಿಗೆ ಬರುತ್ತೆ. ಆರಂಭದಲ್ಲಿ ಅವರು ಒಪ್ಪದೇ ಇದ್ದರೂ ಕೂಡ ನಂತರ ನಿರ್ದೇಶಕರು ಒಪ್ಪಿಸುತ್ತಾರೆ. ಆ ಸಿನಿಮಾದಲ್ಲಿ ನಟಿ ಆರತಿ ಅವರು ಪ್ರಭಾಕರ್ ಅವರಿಗೆ ಜೋಡಿ ಆಗಿದ್ದರು.
ಆ ಸಿನಿಮಾವೇ ಮುತ್ತೈದೆ ಭಾಗ್ಯ. ಭರ್ಜರಿ ೨೫ ವಾರಗಳ ಪ್ರದರ್ಶನವನ್ನು ಕಂಡಂತಹ ಈ ಸಿನಿಮಾ ಪ್ರಭಾಕರ್ ಅವರಿಗೆ ನಾಯಕನಾಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ತಂದು ಕೊಟ್ಟಿತು. ಸಾಕಷ್ಟು ಜನ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದು ಟೈಗರ್ ಪ್ರಭಾಕರ್ ಅವರ ನಾಯಕನಟನಾಗಿ ನಟಿಸಿದಂತಹ ಕೊನೆಯ ಸಿನಿಮಾಗಿತ್ತಂತೆ. ಅದೇನೇ ಇರಲಿ ಈ ಸಿನಿಮಾ ನಾಯಕ ನಟನಾಗಿ ಟೈಗರ್ ಪ್ರಭಾಕರ್ ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದು ಕೊಟ್ಟಿತು ಅನ್ನೋದು ಸುಳ್ಳಲ್ಲ.
Comments are closed.