Saving Tips:ಕೇವಲ ಐದು ರೂಪಾಯಿಯಲ್ಲಿ ಸ್ಲೋ ಆಗಿ ತಿರುಗುತ್ತಿರುವ ನಿಮ್ಮ ಮನೆಯ ಫ್ಯಾನ್ ಅನ್ನು ಸ್ಪೀಡ್ ಮಾಡಬಹುದು; ಸುಮ್ಮ್ನೆ ಹೊಸ ಫ್ಯಾನಿಗ್ ದುಡ್ಡು ಖರ್ಚು ಮಾಡ್ಬೇಡಿ!

Saving Tips:ಬೇಸಿಗೆ ಕಾಲವಾಗಿರಲಿ ಮಳೆಗಾಲ ಆಗಿರಲಿ ಫ್ಯಾನಿನ ಬಳಕೆ ಖಂಡಿತವಾಗಿ ಮುಖ್ಯವಾಗಿ ಬೇಕಾಗಿರುತ್ತದೆ‌. ಆದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಫ್ಯಾನ್ ಸ್ಲೋ ಆಗಿ ತಿರುಗುವಂತಹ ಪ್ರಕ್ರಿಯೆ ಕಂಡು ಬರ್ತಾ ಇದ್ರೆ ಆಗ ಏನು ಮಾಡಬೇಕು ಅನ್ನೋದು ನಿಮಗೆ ಹೊಳಿಯೋದಿಲ್ಲ ಅಥವಾ ಹೆಚ್ಚಿನ ದುಡ್ಡು ಖರ್ಚು ಮಾಡಬೇಕಾಗಿ ಬರಬಹುದು. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಒಂದು ಕಡಿಮೆ ಖರ್ಚಿನ ಐಡಿಯಾವನ್ನು ನೀಡಲು ಹೊರಟಿದ್ದೇವೆ. ತಪ್ಪದೆ ಲೇಖನವನ್ನು ಕೊನೆವರೆಗೂ ಓದುವ ಮೂಲಕ ಈ ಐಡಿಯಾವನ್ನು ನೀವು ಕೂಡ ಮನೆಯಲ್ಲಿ ಪ್ರಯೋಗಿಸಬಹುದಾಗಿದೆ.

ನೀವು ಪ್ರಮುಖವಾಗಿ ಫ್ಯಾನ್ನ ಬ್ಲೇಡ್ ಗಳಿಗೆ ಒದ್ದೆ ಬಟ್ಟೆಯಿಂದ ವರಿಸುತ್ತೀರಿ. ಇದರಿಂದ ಅಲ್ಲಿರುವಂತಹ ಕೊಳೆ ಹೋಗದಿದ್ದರೆ ಬಿಸಿನೀರಿಗೆ ಕಾಸ್ಟಿಕ್ ಸೋಡವನ್ನು ಬೆರೆಸಿ ನಂತರ ಬಟ್ಟೆಯಿಂದ ಫ್ಯಾನ್ ಅನ್ನು ಸ್ವಚ್ಛಗೊಳಿಸಬೇಕು. ಸಾಮಾನ್ಯವಾಗಿ ಫ್ಯಾನ್ ನಿಧಾನ ಗತಿಯಲ್ಲಿ ತೆರೆಯುವುದಕ್ಕೆ ಪ್ರಮುಖ ಕಾರಣ ಆಗಿರೋದು ಅದರ ಮೇಲೆ ನಿಂತಿರುವಂತಹ ಧೂಳು. ಫ್ಯಾನ್ ತಿರುಗುವಂತಹ ಲೆವೆಲ್ ಐದಕ್ಕೆ ಸೆಟ್ ಮಾಡಿದ್ರು ಕೂಡ ಅದರ ಮೇಲಿರುವಂತಹ ಧೂಳಿನ ಕಾರಣದಿಂದಾಗಿ ಅದು ತಿರುಗುವಂತಹ ವೇಗವನ್ನ ಕಡಿಮೆ ಮಾಡಿಕೊಂಡಿರುತ್ತದೆ. ಇದೇ ಕಾರಣಕ್ಕಾಗಿ ಈ ಸಮಸ್ಯೆಯನ್ನು ನಾವು ಈ ಮೇಲೆ ಹೇಳಿರುವಂತೆ ಕ್ಯಾಸ್ಟಿಕ್ ಸೋಡವನ್ನು ನೀರಿನಲ್ಲಿ ನೆನೆಸಿ ಅದರಿಂದ ಬಟ್ಟೆಯನ್ನು ಅದ್ದಿ ಶುಚಿಗೊಳಿಸುವ ಮೂಲಕ ನೀವು ನಿಮ್ಮ ಫ್ಯಾನ್ನ ವೇಗವನ್ನ ಹೆಚ್ಚಿಸಬಹುದಾಗಿದೆ.

ಇದು ನಿಮಗೆ ಐದು ರೂಪಾಯಿಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ಫ್ಯಾನ್ ಅನ್ನು ಶುಚಿ ಮಾಡುವಂತಹ ಕೆಲಸವನ್ನು ಮಾಡಿಕೊಡುತ್ತದೆ. ಫ್ಯಾನ್ ಸ್ಲೋ ಆದಾಗ ಮನೆಯಲ್ಲಿ ಕೆಲವೊಮ್ಮೆ ಅದನ್ನು ಬದಲಾವಣೆ ಮಾಡುವುದಕ್ಕೆ ಯೋಚನೆ ಮಾಡುತ್ತಾರೆ ಆದರೆ ಇನ್ಮುಂದೆ ಅಷ್ಟೆಲ್ಲ ಹಣವನ್ನು ಖರ್ಚು ಮಾಡಬೇಕಾದಂತಹ ಅಗತ್ಯ ಇರುವುದಿಲ್ಲ ಅನ್ನೋದನ್ನ ನೀವು ಈ ಮೂಲಕ ಅರ್ಥಮಾಡಿಕೊಳ್ಳಬಹುದು. ಇದೊಂದು ಚಿಕ್ಕ ವಿಧಾನವನ್ನು ನೀವು ಪಾಲಿಸುವ ಮೂಲಕ ನಿಮ್ಮ ಫ್ಯಾನ್ ಅನ್ನು ಸ್ವಚ್ಛ ಮಾಡಬಹುದಾಗಿದ್ದು ಅದರಿಂದ ನಿಮ್ಮ ಫ್ಯಾನ್ನ ವೇಗ ಇನ್ನಷ್ಟು ಹೆಚ್ಚಾಗುವಂತಹ ಸಾಧ್ಯತೆ ಇರುತ್ತೆ.

Comments are closed.