Serial TRP:ಈ ಬಾರಿಯ ಧಾರವಾಹಿಗಳ ಟಿ ಆರ್ ಪಿ ವಾರ್ ನಲ್ಲಿ ಯಾರು ಟಾಪ್ ಸ್ಥಾನವನ್ನು ಪಡೆದಿದ್ದೇ ಈ ಧಾರಾವಾಹಿ, ಯಾರೂ ಗೆಸ್ ಮಾಡಿರ್ಲಿಲ್ಲ ಬಿಡಿ!
Serial TRP:ಈ ವಾರದ ಟಿ ಆರ್ ಪಿ ಪಟ್ಟಿಯ ಪ್ರಕಟಣೆ ನಡೆದಿದ್ದು ಪ್ರತಿ ಬಾರಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರವಾಹಿ ಟಿ ಆರ್ ಪಿ ಲಿಸ್ಟಿನಲ್ಲಿ ತನ್ನ ಸ್ಥಾನದಲ್ಲಿ ಕುಸಿತವನ್ನು ಕಂಡಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಯಾವ ಧಾರವಾಹಿ ಯಾವ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ ಟಾಪ್ ಸ್ನಾನವನ್ನು ಪಡೆದುಕೊಂಡಿರುವಂತಹ ಧಾರವಾಹಿ ಯಾವುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
- ಸೀತಾರಾಮ ಧಾರವಾಹಿ 7ನೇ ಸ್ಥಾನದಲ್ಲಿ ಕಂಡುಬರುತ್ತದೆ. ಈ ಹಿಂದೆ ಟಾಪ್ 5 ಧಾರವಾಹಿಗಳ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಟಿ ಆರ್ ಪಿ ಯನ್ನ ಕಳೆದುಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ.
- 6ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ಧಾರವಾಹಿ ಆಗಿರುವಂತಹ ಲಕ್ಷ್ಮೀ ಬಾರಮ್ಮ ಧಾರವಾಹಿ ಕಾಣಿಸಿಕೊಳ್ಳುತ್ತದೆ.
- ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಆಗಿರುವಂತಹ ಅಣ್ಣಯ್ಯ ಧಾರವಾಹಿ 5ನೇ ಸ್ಥಾನವನ್ನು ಈ ಬಾರಿಯ ಟಿ ಆರ್ ಪಿ ಲಿಸ್ಟಿಂಗ್ ನಲ್ಲಿ ಪಡೆದುಕೊಂಡಿದೆ.
- ಆಶ್ಚರ್ಯ ಎನ್ನುವ ರೀತಿಯಲ್ಲಿ ಟಿ ಆರ್ ಪಿ ಸ್ಥಾನದಲ್ಲಿ ತನ್ನ ಟಿ ಆರ್ ಪಿ ಕಳೆದುಕೊಂಡಿರುವಂತಹ ಜೀ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವಂತಹ ಪುಟ್ಟಕ್ಕನ ಮಕ್ಕಳು ನಾಲ್ಕನೇ ಸ್ಥಾನದಲ್ಲಿದೆ. ಉಮಾಶ್ರೀ ಸೇರಿದಂತೆ ಈ ಧಾರವಾಹಿಯಲ್ಲಿ ದೊಡ್ಡ ಮಟ್ಟದ ತಾರಾ ಬಳಗ ಇದ್ದು, ಧಾರವಾಹಿಯ ವೀಕ್ಷಕ ಬಳಗ ಕೂಡ ದೊಡ್ಡದಾಗಿದೆ. ಎಲ್ಲರ ಅಭಿಪ್ರಾಯದ ಪ್ರಕಾರ ಧಾರವಾಹಿಯ ಪ್ರಸಾರದ ಸಮಯವನ್ನು ಬದಲು ಮಾಡಿರುವ ಕಾರಣದಿಂದಾಗಿಯೇ ಟಿಆರ್ಪಿಯಲ್ಲಿ ಇಳಿಕೆ ಕಂಡು ಬಂದಿದೆ ಎಂಬುದಾಗಿ ಹೇಳಲಾಗುತ್ತಿದೆ.
- ಮೂರನೇ ಸ್ಥಾನದಲ್ಲಿ ಮತ್ತೊಂದು ಝೀ ಕನ್ನಡ ವಾಹಿನಿಯ ಧಾರವಾಹಿ ಆಗಿರುವ ಶ್ರಾವಣಿ ಸುಬ್ರಮಣ್ಯ ಧಾರವಾಹಿ ಕಾಣಿಸಿಕೊಳ್ಳುತ್ತಿದ್ದು ಅಪ್ಪ-ಮಗಳ ಪ್ರೀತಿಯ ಕಥೆಯನ್ನು ಹೊಂದಿರುವಂತಹ ಈ ಸಾಂಸಾರಿಕ ಧಾರವಾಹಿ ಪ್ರತಿಯೊಬ್ಬರ ಮನಸ್ಸಿನ ಗೆಲ್ಲೋದಕ್ಕೆ ಯಶಸ್ವಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ಟಿ ಆರ್ ಪಿ ವಿಚಾರದಲ್ಲಿ ಕೂಡ ಉತ್ತಮ ರೇಟಿಂಗ್ ಅನ್ನು ಪಡೆದುಕೊಳ್ಳುತ್ತಿರುವುದು ಕೂಡ ಕಂಡುಬರುತ್ತಿದೆ.
- ಇನ್ನು ನಿರೀಕ್ಷೆಯ ರೀತಿಯಲ್ಲಿ ಈ ಬಾರಿ ಕೂಡ ಅಮೃತಧಾರೆ ಧಾರವಾಹಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಭೂಮಿಕ ಹಾಗೂ ಗೌತಮ್ ಪಾತ್ರಗಳನ್ನು ನೋಡೋದಕ್ಕೆ ಅಂತಾನೆ ಈ ಧಾರವಾಹಿಯನ್ನು ಪ್ರೇಕ್ಷಕರು ಹೆಚ್ಚಾಗಿ ನೋಡ್ತಾರೆ ಅನ್ನೋದನ್ನ ಕೂಡ ನಾವಿಲ್ಲಿ ಮರೆಯೋ ಹಾಗಿಲ್ಲ. ಇಬ್ರು ಕೂಡ ಧಾರವಾಹಿಯ ಸೆಂಟರ್ ಆಫ್ ದಿ ಅಟ್ರಾಕ್ಷನ್ ಅಂತ ಹೇಳಬಹುದು.
- ಮೊದಲನೇ ಸ್ಥಾನವನ್ನು ಈ ಬಾರಿ ಜೀ ಕನ್ನಡ ಧಾರವಾಹಿಯ ಮತ್ತೊಂದು ಸೂಪರ್ ಹಿಟ್ ಧಾರಾವಾಹಿ ಆಗಿರುವ ಲಕ್ಷ್ಮಿ ನಿವಾಸ ಈ ಬಾರಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದು ತಾಳಿ ಕಟ್ಟಿರುವಂತಹ ರಹಸ್ಯ ಈಗಾಗಲೇ ಎಲ್ಲರಿಗೂ ಪ್ರಾರಂಭವಾಗಿದ್ದು ಈ ಟ್ವಿಸ್ಟ್ ನಿಂದಲೇ ಧಾರವಾಹಿಯ ವೀಕ್ಷಕರೆ ಸಂಖ್ಯೆ ಕೂಡ ಹೆಚ್ಚಾಗಿದೆ.
Comments are closed.