Sewing Machine: ಉಚಿತ ಟೈಲರಿಂಗ್ ಮಷೀನ್ ಬೇಕಾ ಹಾಗಿದ್ದರೆ ಇವತ್ತೇ ಅರ್ಜಿ ಸಲ್ಲಿಸಿ!

Sewing Machine: ಸರ್ಕಾರಗಳಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳೆಯರನ್ನು ಹೆಚ್ಚಾಗಿ ಕೇಂದ್ರೀಕರಿಸಿಕೊಂಡು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವಂತಹ ಅಥವಾ ಸಾಮಾನ್ಯವಾಗಿ ಮಹಿಳೆಯರಿಗೆ ಇನ್ನಷ್ಟು ಸ್ವಾಾವಲಂಬಿ ಜೀವನವನ್ನು ನಿರ್ಮಿಸಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವಂತಹ ಯೋಜನೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಈ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಹೊಲಿಗೆ ಮಿಷನ್ ಅನ್ನು ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಬಹುದಾಗಿದೆ. ಬನ್ನಿ ಆ ಯೋಜನೆ ಯಾವುದು ಹಾಗೂ ಯಾವ ರೀತಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವಿಶ್ವಕರ್ಮ ಯೋಜನೆ!

ಗ್ರಾಮೀಣ ಭಾಗದಲ್ಲಿ ಇರುವಂತಹ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯ ಮೂಲಕ ಅವರಿಗೆ ಬೇಕಾಗಿರುವಂತಹ ಯಂತ್ರೋಪಕರಣಗಳನ್ನು ಉಚಿತವಾಗಿ ನೀಡುವ ಮೂಲಕ ಅದರ ಜೊತೆಗೆ ಅವರ ತರಬೇತಿಯನ್ನು ಕೂಡ ಸರ್ಕಾರವೇ ನೀಡುತ್ತಿದೆ. ಬಡ್ಡಿ ರಹಿತ ಸಾಲವನ್ನು ಕೂಡ ಸರ್ಕಾರ ಈ ಯೋಜನೆ ಅಡಿಯಲ್ಲಿ ನೀಡುತ್ತಿದ್ದು ಮಹಿಳೆಯರಿಗೆ ಉಚಿತವಾಗಿರುವಂತಹ ಹೊಲಿಗೆ ಮಿಷನ್ ಅನ್ನು ಕೂಡ ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಮಹಿಳೆಯರು 15,000 ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆ ಹಾಗೂ ಡಾಕ್ಯುಮೆಂಟ್ಸ್!

ಇದನ್ನು ಪಡೆದುಕೊಳ್ಳಲು ನಿಮ್ಮ ವಯಸ್ಸು ಕನಿಷ್ಠಪಕ್ಷ 18 ವರ್ಷ ಆಗಿರಬೇಕು ಹಾಗೂ ನಿಮ್ಮ ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು. ಇನ್ನು ಐದು ವರ್ಷಗಳಿಂದ ಯಾವುದೇ ಸರ್ಕಾರದ ಸೌಲಭ್ಯ ಅಥವಾ ಸಾಲ ಯೋಜನೆಗಳಲ್ಲಿ ಫಲಾನುಭವಿಗಳು ಆಗಿರಬಾರದು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ಅಥವಾ ಫಲಾನುಭವಿಗಳಾಗಬಹುದಾಗಿದೆ.

ಬ್ಯಾಂಕ್ ಡೀಟೇಲ್ಸ್ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ನಂಬರ್ ಮತ್ತು ಆಧಾರ್ ಕಾರ್ಡ್ ಬೇಕಾಗಿರುತ್ತದೆ.

ಪಡೆದುಕೊಳ್ಳುವುದು ಹೇಗೆ?

ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಾಗಿರುವಂತಹ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿ ಸಲ್ಲಿಸಿ ಉಚಿತವಾಗಿ ಟೈಲರಿಂಗ್ ಯಂತ್ರವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲವೇ ನಿಮ್ಮ ಮನೆ ಹತ್ತಿರದಲ್ಲಿ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ ನಿಮಗೆ ಬೇಕಾಗಿರುವಂತಹ ಟೈಲರ್ ಮಷೀನ್ ಅನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸ್ವಾವಲಂಬಿ ಜೀವನವನ್ನು ನೀವೇ ರೂಪಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಇದೊಂದು ಅತ್ಯುತ್ತಮ ಯೋಜನೆಯಾಗಿದೆ ಎಂದು ಹೇಳಬಹುದಾಗಿದ್ದು ಇದರ ಸರಿಯಾದ ಉಪಯೋಗವನ್ನು ಪಡೆದುಕೊಳ್ಳಿ.

Comments are closed.