Shravan pooja:ಶ್ರಾವಣ ಮಾಸದಲ್ಲಿ ಶಿವನಿಗೆ ಪೂಜೆ ಮಾಡೋದಕ್ಕೆ ಇಷ್ಟ ಆಗುವಂತಹ ಈ ವಸ್ತುವನ್ನು ಮನೆಯಲ್ಲಿ ತಯಾರಿಸುವ ವಿಧಾನ ಇಲ್ಲಿದೆ ನೋಡಿ!

Shravan pooja: ಈಗ ನಡೆಯುತ್ತಿರುವಂತಹ ಶ್ರಾವಣ ಮಾಸ ಮಹಾದೇವ ಶಿವಪರಮಾತ್ಮನಿಗೆ ಅತ್ಯಂತ ಪ್ರಿಯ ಹಾಗೂ ಪವಿತ್ರವಾಗಿರುವಂತಹ ತಿಂಗಳಾಗಿದೆ. ಇದು ಪುರಾಣ ಶಾಸ್ತ್ರಗಳಲ್ಲಿ ಹಾಗೂ ವೈದಿಕ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವಂತಹ ವಿಚಾರ. ಇನ್ನು ಶಿವನಿಗೆ ಪೂಜೆ ಮಾಡುವಾಗ ತುಪ್ಪ ಎಣ್ಣೆ ಹಾಗೂ ಬತ್ತಿಯ ಬಗ್ಗೆ ಪ್ರಮುಖವಾದ ಕಾಳಜಿಯನ್ನ ವಹಿಸಬೇಕಾಗುತ್ತದೆ ಹಾಗೂ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ. ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

  • ಇತ್ತೀಚಿನ ದಿನಗಳಲ್ಲಿ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ರೆಡಿಮೇಡ್ ಮೇಣದಬತ್ತಿಯನ್ನು ಪ್ರತಿಯೊಬ್ಬರೂ ಕೂಡ ಬಳಸುತ್ತಾರೆ ಇದು ಶಿವನ ಪೂಜೆಗೆ ಸೂಕ್ತವಾದದ್ದಲ್ಲ ಎಂಬುದು ಶಾಸ್ತ್ರಜ್ಞರ ಅಭಿಪ್ರಾಯ. ಯಾಕೆಂದ್ರೆ ಇವುಗಳನ್ನ ಶುದ್ಧ ತುಪ್ಪದ ಬತ್ತಿಗಳು ಎಂಬುದಾಗಿ ಹೇಳಿ ನಂತರ ನಿಮಗೆ ನೀಡುವಾಗ ಮಾತ್ರ ಮೇಣದಬತ್ತಿಗಳನ್ನು ನೀಡಿರುತ್ತಾರೆ.
  • ಮಾರುಕಟ್ಟೆಯಲ್ಲಿ ಸಿಗುವಂತಹ ಭಕ್ತಿಗಳು ಸಾಕಷ್ಟು ನಕಲಿ ಆಗಿರುತ್ತವೆ ಹಾಗೂ ಅವುಗಳು ಪೂಜೆ ಮಾಡುವಂತಹ ಪವಿತ್ರ ವಿಧಾನಕ್ಕೆ ಪೂರಕವಾಗಿರುವುದಿಲ್ಲ ಹೀಗಾಗಿ ಮನೆಯಲ್ಲಿಯೇ ಬತ್ತಿಗಳನ್ನು ತಯಾರಿಸಿ ಅವುಗಳಿಂದ ಪೂಜೆ ಮಾಡಿ ಖಂಡಿತವಾಗಿ ದೇವರಿಗೂ ಕೂಡ ಇಷ್ಟವಾಗುತ್ತಿದ್ದ ಹಾಗೂ ಮನೆಯಲ್ಲಿ ಉತ್ತಮ ಪರಿಮಳವನ್ನು ಕೂಡ ಹೊರಸುತ್ತದೆ.
  • ಮನೆಯಲ್ಲಿ ನೀವು ಶುದ್ಧ ಹಸುವಿನ ತುಪ್ಪ ಕರ್ಪುರ ಹಾಗೂ ಹತ್ತಿಯ ತುಂಡುಗಳನ್ನು ಹೊಂದಿದ್ದರೆ ಸಾಕು ನೀವು ಮನೆಯಲ್ಲಿಯೇ ತುಪ್ಪದ ಬತ್ತಿಯನ್ನು ಶಿವನಿಗೆ ಪೂಜೆ ಮಾಡುವುದಕ್ಕಾಗಿ ತಯಾರಿಸಿಕೊಳ್ಳಬಹುದಾಗಿದೆ.
  • ತುಪ್ಪದ ಬತ್ತಿಗಳನ್ನು ದೇವರ ಪೂಜೆಗಾಗಿ ತಯಾರಿಸುವುದು ಹೇಗೆ ಅನ್ನುವಂತಹ ಗೊಂದಲ ಸಾಕಷ್ಟು ಜನರಲ್ಲಿ ಇರಬಹುದು. ಮೊದಲಿಗೆ ಪ್ಯಾನ್ ನಲ್ಲಿ ಶುದ್ಧ ಹಸುವಿನ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ನಂತರ ಅದಕ್ಕೆ ಕರ್ಪೂರದ ತುಂಡುಗಳನ್ನು ಬೆರೆಸಿಕೊಳ್ಳಿ. ಈ ಕರ್ಪೂರದ ತುಂಡುಗಳು ಸಂಪೂರ್ಣವಾಗಿ ನುಣ್ಣಗೆ ಆಗಿರಬೇಕು. ಇದಾದ ನಂತರ ಐಸ್ ಟ್ರೇ ತೆಗೆದುಕೊಂಡು ಅದರಲ್ಲಿ ಹತ್ತಿಯ ಬತ್ತಿಯನ್ನು ಇಡಬೇಕು. ಇದಕ್ಕೆ ತುಪ್ಪದ ಮಿಶ್ರಣವನ್ನು ಇಟ್ಟು ಮೂವತ್ತು ನಿಮಿಷ ಫ್ರೀಜರ್ ನಲ್ಲಿ ಇರಬೇಕು. ನಂತರ ಅದು ಗಟ್ಟಿಯಾಗುತ್ತದೆ ಹಾಗೂ ಶ್ರಾವಣ ಮಾಸದಲ್ಲಿ ಶಿವನ ಪೂಜೆಗಾಗಿ ನೀವು ದೀಪವನ್ನು ಬಳಸಿ ಪೂಜೆ ಮಾಡುವ ಮೂಲಕ ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಹೊರ ಹಾಕಬಹುದಾಗಿದೆ. ಹಾಗೂ ಸಕಾರಾತ್ಮಕ ಶಕ್ತಿಗಳನ್ನು ಆಹ್ವಾನ ಮಾಡಿಕೊಳ್ಳಬಹುದಾಗಿದೆ.

ಈ ಮೂಲಕ ನೀವು ಪವಿತ್ರ ಶ್ರಾವಣ ಮಾಸದಲ್ಲಿ ಶಿವನನ್ನ ವಿಧಿ ವೃತ್ತಿಯಾಗಿ ಪೂಜೆ ಮಾಡುವ ಮೂಲಕ ಆತನ ಕೃಪೆಗೆ ಪಾತ್ರರಾಗಬಹುದಾಗಿದೆ. ಈ ರೀತಿಯ ದೀಪಗಳಿಂದ ಪೂಜೆ ಮಾಡುವುದು ಶಿವನಿಗೂ ಕೂಡ ಅತ್ಯಂತ ಪ್ರಿಯ ಎಂಬುದಾಗಿ ಶಾಸ್ತ್ರಗಳು ತಿಳಿಸುತ್ತವೆ.

Comments are closed.