Surya Deva:ಸಿಂಹ ರಾಶಿಗೆ ಸೂರ್ಯ ದೇವನ ಎಂಟ್ರಿ- ಇನ್ನು ಈ ರಾಶಿಗಳಿಗೆ ಅದೃಷ್ಟ ಶುರು; ತಡೆಯೋರು ಯಾರು ಇಲ್ಲ!

Surya Deva: ಗ್ರಹಗಳ ರಾಜ ಆಗಿರುವಂತಹ ಸೂರ್ಯ ತನ್ನ ಸ್ವಂತ ರಾಶಿ ಆಗಿರುವಂತಹ ಸಿಂಹ ರಾಶಿಗೆ ಈಗಾಗಲೇ ಕಾಲಿಟ್ಟಿದ್ದು ಸಪ್ಟೆಂಬರ್ 16ರ ವರೆಗೆ ಕೂಡ ಇಲ್ಲೇ ಇರಲಿದ್ದಾನೆ. ಹಣಕಾಸು ಹಾಗೂ ಬೇರೆ ವಿಚಾರಗಳಲ್ಲಿ ಈ ಸಮಯ ಅನ್ನೋದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 3 ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ ಆ ಮೂರು ರಾಶಿಯವರು ಯಾರು ಅನ್ನೋದನ್ನ ತಿಳಿಯೋಣ ಬನ್ನಿ.

ಮೇಷ ರಾಶಿ

ಮಕ್ಕಳು ನಿಮಗೆ ತಂದೊಗಿಸುವಂತಹ ಸಮಸ್ಯೆಗಳು ಪರಿಹಾರವಾಗಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉನ್ನತ ವ್ಯಾಸಂಗಕ್ಕಾಗಿ ತಯಾರಿ ನಡೆಸಿಕೊಳ್ಳುವಂತಹ ವಿದ್ಯಾರ್ಥಿಗಳಿಗೆ ಇದು ಉತ್ತಮ ಫಲಿತಾಂಶ ತರುವುದಕ್ಕೆ ಹೇಳಿ ಮಾಡಿಸಿದ ಸಮಯ ಎಂದು ಹೇಳಬಹುದಾಗಿದೆ. ಕೊನೆಗೂ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಆರ್ಥಿಕ ಸಮಸ್ಯೆಗಳು ಕೊನೆಯಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಕೂಡ ಕೈ ತುಂಬಾ ಸಂಪಾದನೆ ನಡೆಯಲಿದೆ. ಜನರಲ್ಲಿ ನಿಮ್ಮ ಬಗ್ಗೆ ಇರುವಂತಹ ಗೌರವ ಕೂಡ ಹೆಚ್ಚಾಗುತ್ತೆ.

ವೃಷಭ ರಾಶಿ

ಅರ್ಧಕ್ಕೆ ಉಳಿಸಿಕೊಂಡಿರುವಂತಹ ಕೆಲಸಗಳನ್ನು ವೃಷಭ ರಾಶಿಯವರು ಈ ಸಂದರ್ಭದಲ್ಲಿ ಮುಗಿಸಲಿದ್ದಾರೆ. ಕುಟುಂಬ ಸದಸ್ಯರ ನಡುವೆ ಇರುವಂತಹ ಭಿನ್ನಾಭಿಪ್ರಾಯಗಳು ಈ ಸಂದರ್ಭದಲ್ಲಿ ಸರಿಯಾಗಲಿವೆ. ನೀವು ಮಾಡುವಂತಹ ಕೆಲಸದಲ್ಲಿ ಕೂಡ ನಿಮ್ಮ ಉತ್ತಮ ಕಾರ್ಯ ಶೈಲಿಯಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಂತಹ ಪ್ರತಿಯೊಂದು ಅವಕಾಶಗಳನ್ನು ಕೂಡ ಹೊಂದಿದ್ದೀರಿ ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿದ್ದೀರಿ. ಆದಾಯ ಕೂಡ ದೊಡ್ಡ ಮಟ್ಟದಲ್ಲಿ ಹರಿದು ಬರಲಿದೆ ಹೀಗಾಗಿ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಸೂರ್ಯ ಪ್ರವೇಶ ಮಾಡುವುದು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವುದರಿಂದಾಗಿ ಮಾಡುವಂತಹ ಕೆಲಸದಲ್ಲಿ ಕೂಡ ಸಕಾರಾತ್ಮಕ ಪರಿಣಾಮವನ್ನು ನೀವು ಪಡೆದುಕೊಳ್ಳಲಿದ್ದೀರಿ. ವಿದೇಶಕ್ಕೆ ಹೋಗುವಂತಹ ನಿಮ್ಮ ಕನಸು ನನಸಾಗುವಂತಹ ಸಮಯ ಈ ಸಂದರ್ಭದಲ್ಲಿ ಕಾಣುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಈ ಸಂದರ್ಭದಲ್ಲಿ ಸುಧಾರಿಸಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತುಕೊಂಡಿರುವ ಕೆಲಸಗಳನ್ನು ಕೂಡ ನೀವು ಪೂರ್ಣಗೊಳಿಸಬಹುದಾಗಿದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವಂತಹ ಕೆಲಸವನ್ನು ನೋಡಿ ವರಿಷ್ಠ ಅಧಿಕಾರಿಗಳು ಪ್ರಮೋಷನ್ ನೀಡಿ ಹೊಸ ಜವಾಬ್ದಾರಿಯನ್ನು ಕೂಡ ನಿಮಗೆ ಕೊಡಲಿದ್ದಾರೆ. ಹೊಸ ಕೆಲಸವನ್ನು ಹುಡುಕುತ್ತಿರುವವರಿಗೆ ಈ ಸಂದರ್ಭದಲ್ಲಿ ಕೆಲಸ ಸಿಗಲಿದೆ. ವ್ಯಾಪಾರಿಗಳಿಗೆ ಸಂದರ್ಭದಲ್ಲಿ ಕೈ ತುಂಬ ಲಾಭ ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ. ಇನ್ನು ದೊಡ್ಡ ಮಟ್ಟದ ಉದ್ಯಮದಲ್ಲಿ ಇರುವವರು ಹೊಸ ಡೀಲ್ ಅನ್ನು ಪಡೆದುಕೊಳ್ಳಲಿದ್ದಾರೆ.

Comments are closed.