Tirupati Darshanam:ತಿರುಪತಿ ತಿಮ್ಮಪ್ಪನ ಭಕ್ತ ಅಭಿಮಾನಿಗಳಿಗೆ ಸಿಕ್ಕಿದೆ ನೋಡಿ ವಿಶೇಷ ಅವಕಾಶ! ಮಿಸ್ ಮಾಡ್ಕೋಬೇಡಿ!
Tirupati Darshanam:ಶ್ರೀವಾರಿಯಲ್ಲಿ ಆಗಸ್ಟ್ 9 ಹಾಗೂ ಆಗಸ್ಟ್ 19ರಂದು ಎರಡು ಬಾರಿ ಗರುಡು ಸೇವೆ ನಡೆಯಲಿದೆ ಎನ್ನುವಂತಹ ಮಾಹಿತಿ ತಿಳಿದು ಬಂತು, ಈ ಸಂದರ್ಭದಲ್ಲಿ ಭಕ್ತಾಭಿಮಾನಿಗಳು ಶ್ರೀ ಮಲಯಪ್ಪ ಸ್ವಾಮಿ ನಾಲ್ಕು ಮದಬೀದಿಗಳಲ್ಲಿ ಸಂಚರಿಸುವಾಗ ಈ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆಗಸ್ಟ್ 9ನೇ ತಾರೀಕಿನ ಗರುಡ ಪಂಚಮಿಯ ಸಂದರ್ಭದಲ್ಲಿ ಶ್ರೀ ಮಲಯಪ್ಪ ಸ್ವಾಮಿ ತನ್ನ ನೆಚ್ಚಿನ ವಾಹನ ಆಗಿರುವಂತಹ ಗರುಡನ ಮೇಲೆ ರಾತ್ರಿ 7 ರಿಂದ 9 ಗಂಟೆಯ ಸಂದರ್ಭದಲ್ಲಿ ತಿರುಮಲದ ಬೀದಿಗಳಲ್ಲಿ ಸಂಚಾರ ಮಾಡಲಿದ್ದಾನೆ.
ಪ್ರತಿ ವರ್ಷ ತಿರುಪತಿ ತಿಮ್ಮಪ್ಪನಿಗೆ ನಡೆಯುವಂತಹ ಸೇವೆಗಳಲ್ಲಿ ಇದು ಕೂಡ ಒಂದು ಪ್ರಮುಖವಾಗಿದೆ. ಗರುಡು ಪಂಚಮಿಯ ಶುಕ್ಲ ಪಕ್ಷದ ಐದನೇ ದಿನದಂದು ಹೊಸದಾಗಿ ಮದುವೆಯಾಗಿರುವವರು ಗರುಡ ಪಂಚಮಿಯ ಪೂಜೆ ಮಾಡುತ್ತಾರೆ ಅನ್ನೋದು ಪ್ರತೀತಿ. ಈ ಮೂಲಕ ಅವರಿಬ್ಬರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ ಅನ್ನೋದು ತಲೆತಲಾಂತರದಿಂದಲೂ ಕೂಡ ನಡೆದುಕೊಂಡು ಬಂದಿರುವಂತಹ ಆಚಾರ ಆಗಿದೆ. ಇದರ ಜೊತೆಗೆ ಆಗಸ್ಟ್ 19ನೇ ದಿನಾಂಕದಂದು ಪೌರ್ಣಮಿ ಗರುಡಸೇವೆ ಕೂಡ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ನಡೆಯಲಿದೆ. ಇಲ್ಲಿ ಕೂಡ ರಾತ್ರಿ ಏಳರಿಂದ ಒಂಬತ್ತು ಗಂಟೆವರೆಗೆ ಭಕ್ತರಿಗೆ ಬಾಲಾಜಿಯ ದರ್ಶನ ಸಿಗಲಿದೆ.
ದೇವಸ್ಥಾನದ ಆಡಳಿತ ಮಂಡಳಿ ಆಗಿರುವಂತಹ ಟಿಟಿಡಿ ಈ ವಿಚಾರದ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ಭಕ್ತಾಭಿಮಾನಿಗಳಿಗೆ ನೀಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅಕ್ಟೋಬರ್ 4 ರಿಂದ 12ನೇ ತಾರೀಖಿನವರೆಗೆ ನಡೆಯಲಿರುವಂತಹ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವವನ್ನು ಕೂಡ ನಾಲ್ಕು ಬೀದಿಗಳಲ್ಲಿ ನಡೆಯುವ ಬಗ್ಗೆ ಸರಿಯಾದ ರೀತಿಯಲ್ಲಿ ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಆಗಮನ ನಿರ್ಗಮನ ಹಾಗೂ ಆರತಿ ಹಾಗೂ ಗ್ಯಾಲರಿಗಳನ್ನು ಕೂಡ ಈ ಸಂದರ್ಭದಲ್ಲಿ ಪರಿಶೀಲಿಸಲಾಗಿದೆ.
ವಾಹನ ಮಂಟಪದಿಂದ ಪ್ರಾರಂಭವಾಗುವಂತಹ ರಥಬೀದಿಗಳನ್ನು ಸರಿಯಾದ ರೀತಿಯಲ್ಲಿ ಈ ಸಂದರ್ಭದಲ್ಲಿ ಪರಿಶೀಲಿಸಲಾಗಿದೆ. ಗ್ಯಾಲರಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪರಿಶೀಲಿಸಲಾಗಿದ್ದು ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಪ್ರತಿಯೊಂದು ವ್ಯವಸ್ಥೆಗಳನ್ನು ಕೂಡ ಸರಿಯಾದ ರೀತಿಯಲ್ಲಿ ಭಕ್ತಾಭಿಮಾನಿಗಳಿಗೆ ಪರಿಕಲ್ಪಿಸುವ ವಿಚಾರದ ಬಗ್ಗೆ ಈಗಾಗಲೇ ಟಿಟಿಡಿಯ ಉಚ್ಛ ಅಧಿಕಾರಿಗಳು ಸಾಕಷ್ಟು ತಪಾಸಣೆಯನ್ನು ಈಗಾಗಲೇ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಈ ಬ್ರಹ್ಮೋತ್ಸವ ಎನ್ನುವುದು ಅಕ್ಟೋಬರ್ ನಾಲ್ಕನೇ ದಿನಾಂಕದಂದು ಧ್ವಜಾರೋಹಣ ಕಾರ್ಯಕ್ರಮದ ಜೊತೆಗೆ ಆರಂಭವಾಗಲಿದೆ. ಅಕ್ಟೋಬರ್ ಎಂಟಕ್ಕೆ ಶ್ರೀ ಗರುಡವಾರಿ ಸೇವೆ ನಡೆಯಲಿದೆ. ಅಕ್ಟೋಬರ್ ಒಂಬತ್ತಕ್ಕೆ ಸ್ವರ್ಣ ರಥಮ್, ಅಕ್ಟೋಬರ್ 11ಕ್ಕೆ ರಥೋತ್ಸವ ಹಾಗೂ ಅಕ್ಟೋಬರ್ 12ಕ್ಕೆ ಚಕ್ರ ಸ್ನಾನ ನಡೆಯಲಿದೆ ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅಧಿಕೃತ ಮಾಹಿತಿ ಹೊರಬಂದಿದೆ. ಇದೇ ಸಂದರ್ಭದಲ್ಲಿ ಮಲಯಪ್ಪ ಸ್ವಾಮಿ ವಿವಿಧ ವಾಹನಗಳಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂಬಂತಹ ಮಾಹಿತಿಯನ್ನು ಕೂಡ ತಿಳಿಸಲಾಗಿದೆ.
Comments are closed.