Vastu Tips: ಇಂದಿನ ಜನರು ಉಗುರು ಹಾಗೂ ತಲೆ ಕೂದಲು ತೆಗೆಯೋದಕ್ಕೆ ಯಾವುದೇ ದಿನವನ್ನು ಕೂಡ ಅನುಸರಿಸುವುದಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಅಂತಾನೆ ಕೆಲವೊಂದು ಶುಭ ದಿನಗಳು ಮೀಸಲಾಗಿವೆ. ಆ ದಿನದಂದು ಉಗುರು ತೆಗೆದರೆ ಸಾಕಷ್ಟು ಶುಭ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಗುರು ನ್ಯಾಯಾಧಾತ ಆಗಿರುವಂತಹ ಶನಿಗೆ ಸಂಬಂಧಪಟ್ಟಂತಹ ವಸ್ತುವಾಗಿರುವುದರಿಂದಾಗಿ ಇವುಗಳನ್ನು ಶುಚಿಯಾಗಿ ಇಟ್ಟುಕೊಂಡಿಲ್ಲ ಅಂದ್ರೆ ಶನಿದೇವ ನಿಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾನೆ ಹಾಗೂ ಆತನ ಕೋಪದ ಫಲಿತಾಂಶವಾಗಿ ಸಾಕಷ್ಟು ಅಶುಭ ಫಲಿತಾಂಶಗಳನ್ನು ನೀವು ಎದುರಿಸಬೇಕಾಗಿರುತ್ತದೆ. ಸೋಮವಾರದ ದಿನವನ್ನ ಶಿವ ಹಾಗೂ ಚಂದ್ರನಿಗೆ ಅರ್ಪಿಸಲಾಗುತ್ತದೆ ಹೀಗಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರದ ದಿನದಂದು ಉಗುರನ್ನು ತೆಗೆದುಕೊಳ್ಳುವುದು ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮದುವೆಯಾಗಿರುವಂತಹ ಮಹಿಳೆಯರು ಈ ದಿನದಂದು ಉಗುರನ್ನು ತೆಗೆಯುವುದರಿಂದಾಗಿ ಗಂಡನ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂಬುದಾಗಿ ತಿಳಿಸಲಾಗಿದೆ.
ಇನ್ನು ಗಣೇಶನಿಗೆ ಅರ್ಪಿತವಾಗಿರುವಂತಹ ಬುಧವಾರದ ದಿನದಂದು ಒಂದು ವೇಳೆ ಮಹಿಳೆಯರು ಉಗುರನ್ನು ತೆಗೆದರೆ ಇದರಿಂದಾಗಿ ನಿಮ್ಮ ಜೀವನದಲ್ಲಿ ಅಭಿವೃದ್ಧಿಗೆ ಇನ್ನಷ್ಟು ಹೊಸ ದಾರಿಗಳು ತೆರೆದುಕೊಳ್ಳಲಿವೆ ಹಾಗೂ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ ಎಂಬುದಾಗಿ ಕೂಡ ತಿಳಿಸಲಾಗಿದೆ. ಶುಕ್ರವಾರದ ದಿನದಂದು ಕೂಡ ಉಗುರನ್ನ ತೆಗೆದು ಸ್ವಚ್ಛ ಮಾಡಿಕೊಳ್ಳುವುದಕ್ಕೆ ಶುಭದಿನ ಎಂಬುದಾಗಿ ಪರಿಗಣಿಸಲಾಗಿದ್ದು ಈ ಸಂದರ್ಭದಲ್ಲಿ ಮಹಿಳೆಯರು ಈ ರೀತಿ ಮಾಡಿದರೆ ಅವರ ಜೀವನದಲ್ಲಿ ಇರುವಂತಹ ಎಲ್ಲಾ ಸೌಕರ್ಯಗಳು ಕೂಡ ಹಾಗೂ ನಿರೀಕ್ಷಿತ ಕೆಲಸಗಳು ಕೂಡ ಸರಿಯಾದ ಸಮಯದಲ್ಲಿ ಅಭಿವೃದ್ಧಿ ಪೂರ್ವಕವಾಗಿ ನಡೆಯಲಿದೆ ಎಂಬುದಾಗಿ ತಿಳಿಸಲಾಗಿದೆ.
ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂಬುದಾಗಿ ಕರೀತಾರೆ. ಹೀಗಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೇಲೆ ತಿಳಿಸಲಾಗಿರುವಂತಹ ನಿರ್ದಿಷ್ಟ ದಿನದಂದು ಉಗುರನ್ನು ಸ್ವಚ್ಛಗೊಳಿಸುವಂತಹ ಅಥವಾ ತೆಗೆಯುವಂತಹ ಕೆಲಸವನ್ನು ಮಾಡಿದ್ರೆ ಆ ಸಂದರ್ಭದಲ್ಲಿ ಖಂಡಿತವಾಗಿ ಅದು ನೇರವಾಗಿ ಅವರ ಗಂಡನಿಗೆ ಅಥವಾ ಅವರ ಮನೆಗೆ ಶುಭ ಫಲಿತಾಂಶವನ್ನು ತರುತ್ತದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದನ್ನ ಪರಿಪಾಲಿಸುವ ಮೂಲಕ ಮಹಿಳೆಯರು ನಿಜಕ್ಕೂ ಕೂಡ ತಮ್ಮ ಮನೆಗೆ ಭಾಗ್ಯಲಕ್ಷ್ಮಿಯಾಗಿ ಕಾಣಬಹುದಾಗಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ಉಗುರನ್ನು ತೆಗೆದುಕೊಳ್ಳುವಂತಹ ಅಭ್ಯಾಸವನ್ನು ಹೊಂದಿದ್ದು, ಅದನ್ನ ಸರಿಯಾದ ಕ್ರಮದಲ್ಲಿ ಮಾಡಬೇಕು ಎಂಬಂತಹ ಮನೋಭಾವನೆ ಇದ್ದರೆ ಈ ಮೇಲೆ ಹೇಳಿರುವಂತಹ ದಿನಗಳಂದು ತೆಗೆಯುವ ಮೂಲಕ ಮನೆಯ ಅದೃಷ್ಟವನ್ನು ತರಬಹುದಾಗಿದೆ.
Comments are closed.