Vastu Tips: ನಮ್ಮ ಹಿರಿಯರು ಮಾಡಿಟ್ಟಿರುವಂತಹ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಚಿಕ್ಕ ತಪ್ಪುಗಳನ್ನು ಮಾಡಿದ್ರು ಕೂಡ ಅದು ನಮ್ಮ ಜೀವನದ ಮೇಲೆ ದೊಡ್ಡ ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ತಪ್ಪಾದ ಜಾಗದಲ್ಲಿ ಚಪ್ಪಲಿಯನ್ನು ಬಿಡುವುದರ ಮೂಲಕ ಯಾವೆಲ್ಲ ರೀತಿಯಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎನ್ನುವುದರ ಬಗ್ಗೆ.
- ಯಾವತ್ತು ಕೂಡ ಮನೆಯ ಮುಖ್ಯ ದ್ವಾರದಲ್ಲಿ ಚಪ್ಪಲಿಯನ್ನ ಇಡುವುದಕ್ಕೆ ಹೋಗಬೇಡಿ ಯಾಕೆಂದರೆ ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ, ಮನೆಯ ಒಳಗೆ ಕಾಲಿಡಬೇಕು ಅಂತ ಅಂದ್ರೆ ಇದೇ ದಾರಿಯ ಮೂಲಕ ಒಳ ಬರ್ತಾಳೆ. ಹೀಗಾಗಿ ಇದು ಅವಳಿಗೆ ಅಪಮಾನ ಮಾಡಿದಂತಾಗುತ್ತದೆ.
- ಇದರ ಜೊತೆಗೆ ನೀವು ಎಲ್ಲಿ ಮಲಗುತ್ತಿರೋ ಅಲ್ಲಿ ಯಾವತ್ತೂ ಕೂಡ ಚಪ್ಪಲಿ ಆಗಲಿ, ಶೂ ಆಗಲಿ ಇಡುವುದಕ್ಕೆ ಹೋಗಬೇಡಿ ಇದರಿಂದ ನಿಮ್ಮ ಆರೋಗ್ಯ ಸಮಸ್ಯೆ ಹೆಚ್ಚಾಗುವಂತಹ ಸಾಧ್ಯತೆ ಇದೆ ಎಂಬುದಾಗಿ ಕೂಡ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
- ಮನೆಯ ಈಶಾನ್ಯ ದಿಕ್ಕು ಅತ್ಯಂತ ಸಕಾರಾತ್ಮಕತೆಯನ್ನು ಹೊಂದಿರುವಂತಹ ದಿಕ್ಕು ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗೂ ಇಲ್ಲಿ ನಿಮ್ಮ ಪಾದರಕ್ಷೆಗಳನ್ನು ಇಡುವುದರ ಮೂಲಕ ನೀವು ಮನೆಗೆ ಬರುವಂತಹ ಲಕ್ಷ್ಮಿಯನ್ನು ತಡೆಯುತ್ತೀರಿ ಎನ್ನುವಂತಹ ಮಾತನ್ನು ಕೂಡ ವಾಸ್ತು ಶಾಸ್ತ್ರದ ಮೂಲಕ ಹೇಳಲಾಗುತ್ತದೆ.
- ಜೀವನದಲ್ಲಿ ಉನ್ನತ ಸ್ಥಾನವನ್ನು ಹೊಂದಬೇಕು ಎನ್ನುವ ಕನಸಿನ ಹೊಂದಿರುವವರು ಕಾಲಿಗೆ ನೀಲಿ ಪಾದರಕ್ಷಾ ಅಥವಾ ಶೂಗಳನ್ನು ಧರಿಸುವುದು ಉತ್ತಮ ಎಂಬುದಾಗಿ ಹೇಳಲಾಗುತ್ತದೆ. ಯಾವುದೇ ಕಾರಣಕ್ಕೂ ಹರಿದ ಹಾಗೂ ಕೊಳಕಾಗಿರುವಂತಹ ಶೂಗಳನ್ನು ಧರಿಸುವುದಕ್ಕೆ ಹೋಗಬೇಡಿ ಗ್ರಹದೋಷ ಉಂಟಾಗುತ್ತದೆ.
- ಯಾವುದೇ ಕಾರಣಕ್ಕೂ ಹಳದಿ ಬಣ್ಣದ ಶೂಗಳನ್ನು ಧರಿಸುವುದಕ್ಕೆ ಹೋಗಬೇಡಿ ಇವುಗಳು ನಿಮಗೆ ದುರಾದೃಷ್ಟವನ್ನು ತರುತ್ತವೆ ಎಂಬಂತಹ ಉಲ್ಲೇಖ ಕೂಡ ಇದೆ.
ವಾಸ್ತು ಶಾಸ್ತ್ರದಲ್ಲಿ ಶೂ ಹಾಗೂ ಚಪ್ಪಲಿಗಳನ್ನು ಇಡುವ ಹಾಗೂ ಯಾವ ರೀತಿಯಲ್ಲಿ ಧರಿಸಬೇಕು ಎನ್ನುವಂತಹ ವಿಚಾರದ ಬಗ್ಗೆ ಕೂಡ ಇಷ್ಟೊಂದು ಮಾಹಿತಿಗಳನ್ನ ನೀಡಿರುತ್ತಾರೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದರ ಮೂಲಕ ಇವುಗಳಿಗೆ ಸಂಬಂಧಪಟ್ಟಂತಹ ಎಲ್ಲಾ ಸಮಸ್ಯೆಗಳನ್ನು ಕೂಡ ನಾವು ಜೀವನದಲ್ಲಿ ಈ ಮೂಲಕ ನಿಯಂತ್ರಿಸಬಹುದಾಗಿದೆ ಎಂಬುದಾಗಿ ವಾಸ್ತು ಶಾಸ್ತ್ರ ತಿಳಿಸುತ್ತದೆ.
Comments are closed.