Vastu Tips: ಮನೆಯಲ್ಲಿ ದುಡ್ಡಿರ್ಬೇಕು ಅಂದ್ರೆ ಮನೆಯ ಈ ಭಾಗದಲ್ಲಿ ಚಪ್ಪಲಿ ಇಡುವುದನ್ನು ಬಿಟ್ಟುಬಿಡಿ; ಇಲ್ಲಾಂದ್ರೆ ದಾರಿದ್ರ್ಯ ಮೆಟ್ಕೊಳ್ಳೋದ್ ಗ್ಯಾರಂಟಿ!
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುಗಳು ಯಾವ ದಿಕ್ಕಿನಲ್ಲಿ ಇರಬೇಕು ಅಂತ ಇರುತ್ತೋ ಅಲ್ಲಿ ಇಟ್ಟರೆ ಮಾತ್ರ ಅದರಿಂದ ನಾವು ಶುಭ ಫಲಿತಾಂಶಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಇರುವಂತಹ ಈ ನಿಯಮಗಳನ್ನ ಪಾಲನೆ ಮಾಡಿದರೆ ಜೀವನದಲ್ಲಿ ಇರುವಂತಹ ಎಲ್ಲಾ ವಾಸ್ತುದೋಷ ಸಂಬಂಧ ಪಟ್ಟಂತಹ ಸಮಸ್ಯೆಗಳು ನಿವಾರಣೆ ಆಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನ ಕೂಡ ಉಲ್ಲೇಖಿಸಲಾಗುತ್ತದೆ. ಇನ್ನು ನಾವು ನಮ್ಮ ಮನೆಯ ಮುಂಭಾಗದಲ್ಲಿ ಇಡುವಂತಹ ಚಪ್ಪಲಿಗಳ ವಿಚಾರದಲ್ಲಿ ಕೂಡ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಕೂಡ ಶುಭಫಲವನ್ನ ನಮ್ಮ ಜೀವನದಲ್ಲಿ ನಾವು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂಬುದನ್ನು ಕೂಡ ಇಲ್ಲಿ ತಿಳಿದುಕೊಳ್ಳಬಹುದಾಗಿದ್ದು ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
- ಶೂ ಅಥವಾ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಕೂಡ ತಲೆಕೆಳಗಾಗಿ ಇಡುವುದಕ್ಕೆ ಹೋಗಬೇಡಿ. ಇದು ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯನ್ನು ಹೆಚ್ಚು ಮಾಡುವುದಕ್ಕೆ ಕಾರಣವಾಗಬಹುದಾಗಿದೆ.
- ಯಾವುದೇ ಕಾರಣಕ್ಕೂ ಅನ್ನಪೂರ್ಣೆಯ ವಾಸಸ್ಥಾನ ಆಗಿರುವಂತಹ ಅಡುಗೆ ಮನೆಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗಬೇಡಿ. ಇದು ಆಕೆಗೆ ನೀವು ಮಾಡುವಂತಹ ಅವಮಾನ ಆಗಿರುತ್ತದೆ.
- ಬೆಡ್ ರೂಮ್ನಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸಿಕೊಂಡು ಹೋಗುವುದು ಅಥವಾ ಅಲ್ಲಿ ಇಡುವುದನ್ನು ಮಾಡಬೇಡಿ. ದಂಪತಿಗಳ ನಡುವೆ ವಿರಸವನ್ನು ಸೃಷ್ಟಿಸುವುದಕ್ಕೆ ಇದು ಕಾರಣವಾಗಬಹುದಾಗಿದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ.
- ಪೂರ್ವ ಹಾಗೂ ಉತ್ತರ ಎರಡು ದಿಕ್ಕುಗಳು ಕೂಡ ಸಾಕಷ್ಟು ಶುಭಕರ ಎಂಬುದಾಗಿ ವಾಸ್ತು ಶಾಸ್ತ್ರದ ಮೂಲಕ ಉಲ್ಲೇಖಿಸಲಾಗಿದ್ದು ಈ ದಿಕ್ಕಿನಲ್ಲಿ ನಿಮ್ಮ ಚಪ್ಪಲಿಯನ್ನು ಇಟ್ಟರೆ ಲಕ್ಷ್ಮಿಗೆ ಕೋಪ ತರಿಸುವುದಕ್ಕೆ ಪ್ರಮುಖ ಕಾರಣವಾಗಿ ಕಂಡುಬರುತ್ತದೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಕುಂಠಿತವಾಗಬಹುದು. ಈ ಕಾರಣಕ್ಕಾಗಿ ನೀವು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ನಿಮ್ಮ ಚಪ್ಪಲಿಯನ್ನು ಬಿಟ್ಟರೆ ಉತ್ತಮ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಹೀಗಾಗಿ ವಾಸ್ತುಶಾಸ್ತ್ರದ ಪ್ರಕಾರ ಈ ಮೇಲೆ ಹೇಳಿರುವಂತಹ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವ ಮೂಲಕ ನೀವು ಲಕ್ಷ್ಮೀದೇವಿಗೆ ಯಾವುದೇ ರೀತಿಯ ಕೋಪವನ್ನು ತರಿಸದೆ ನಿಮ್ಮ ಮನೆಯಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿ ಹಾಗೂ ಶ್ರೀಮಂತಿಕೆಯನ್ನು ಕಾಪಾಡಿಕೊಂಡು ಹೋಗಬಹುದಾಗಿದೆ ಎಂಬುದನ್ನ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದ್ದು ಅವುಗಳನ್ನು ನೀವು ಅನುಸರಿಸಿಕೊಂಡು ಹೋಗುವುದು ಕೂಡ ಶುಭಪ್ರದವಾಗಿರುತ್ತದೆ.
Comments are closed.