WhatsApp: ವಾಟ್ಸಪ್ ನಲ್ಲಿ ಯಾರು ನಿಮ್ಮನ್ನು ಬ್ಲಾಕ್ ಮಾಡಿದರೆ ಅನ್ನೋದನ್ನ ತಿಳಿದುಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ಸುಲಭ ವಿಧಾನ!
WhatsApp: ವಾಟ್ಸಪ್ ಎನ್ನುವುದು ಈಗ ಭಾರತ ದೇಶದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವಂತಹ ಒಂದು ಸಂದೇಶವನ್ನು ಕಳಿಸುವಂತಹ ಪ್ಲಾಟ್ಫಾರ್ಮ್ ಆಗಿದೆ. ಇನ್ನು ಇದರಲ್ಲಿ ಯಾರು ಬ್ಲಾಕ್ ಮಾಡಿದ್ದಾರೆ ಎನ್ನುವಂತಹ ನೋಟಿಫಿಕೇಶನ್ ಅನ್ನು ಯಾರಿಗೂ ಕೂಡ ವಾಟ್ಸಪ್ ಕಳಿಸುವುದಿಲ್ಲ ಹಾಗಿದ್ರೆ ಇದನ್ನ ಯಾವ ರೀತಿಯಲ್ಲಿ ತಿಳಿದುಕೊಳ್ಳಬಹುದು ಸಾಕಷ್ಟು ಜನರಿಗೆ ಕುತೂಹಲ ಹಾಗೂ ಅನುಮಾನ ಎರಡು ಇದ್ದು ಇವತ್ತಿನ ಈ ಲೇಖನದ ಮೂಲಕ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ವಾಟ್ಸಪ್ ನಿಂದ ಸಿಗುವಂತಹ ಕೆಲವೊಂದು ಸೂಚನೆಗಳ ಮೂಲಕ ನೀವು ಯಾರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
- ಮೊದಲನೇದಾಗಿ ಸಾಕಷ್ಟು ದಿನಗಳಿಂದಲೂ ಕೂಡ ಅವರ ಪ್ರೊಫೈಲ್ ಫೋಟೋ ಅಂದರೆ ಡಿಪಿ ಅಪ್ಡೇಟ್ ಆಗಿಲ್ಲ ಅಂದ್ರೆ ಆ ಸಂದರ್ಭದಲ್ಲಿ ಕೂಡ ಅದು ಬ್ಲಾಕ್ ಮಾಡಿರುವಂತಹ ಸೂಚನೆಯನ್ನು ನೀಡಿರುತ್ತದೆ.
- ಅವರು ಹಾಕುವಂತಹ ಸ್ಟೇಟಸ್ಗಳು ನಿಮಗೆ ಕಾಣ್ತಾ ಇಲ್ಲ ಅಂತ ಅಂದ್ರೆ ಅವರು ಬ್ಲಾಕ್ ಮಾಡಿದರೆ ಮಾತ್ರ ಆ ರೀತಿ ಸ್ಟೇಟಸ್ ಕಾಣದೆ ಇರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಅನ್ನೋದನ್ನ ಕೂಡ ನೀವಿಲ್ಲಿ ತಿಳಿದುಕೊಳ್ಳಬೇಕಾಗಿದೆ.
- ವಾಟ್ಸಪ್ ನಲ್ಲಿ ನೀವು ಬೇರೆಯವರಿಗೆ ಕರೆ ಮಾಡಿದಾಗ ಅದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ಈ ವ್ಯಕ್ತಿಗೆ ಕರೆ ಮಾಡಿದಾಗ ಮಾತ್ರ ಕರೆ ಹೋಗುತ್ತಿಲ್ಲ ಎಂದಾದಲ್ಲಿ ಆ ಸಂದರ್ಭದಲ್ಲಿ ಕೂಡ ಇದು ಬ್ಲಾಕ್ ಮಾಡಿದರೆ ಮಾತ್ರ ಸಾಧ್ಯವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ.
- ಇನ್ನು ಕೆಲವು ಗ್ರೂಪ್ಗಳಿಗೆ ಆ ನಿರ್ದಿಷ್ಟ ಸದಸ್ಯರನ್ನು ನೀವು ಸೇರಿಸಲು ಸಾಧ್ಯವಾಗದೇ ಇದ್ದಾಗ್ಲೂ ಕೂಡ ಅವರು ಬ್ಲಾಕ್ ಮಾಡಿರಬಹುದು ಎನ್ನುವುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
ವಾಟ್ಸಾಪ್ ಯಾರಿಗೂ ಕೂಡ ಯಾರು ಬ್ಲಾಕ್ ಮಾಡಿದ್ದಾರೆ ಅನ್ನುವಂತಹ ಮಾಹಿತಿಯನ್ನು ನೇರವಾಗಿ ಹೇಳುವುದಕ್ಕೆ ಹೋಗುವುದಿಲ್ಲ ಹೀಗಾಗಿ ಈ ರೀತಿಯ ಕೆಲವೊಂದು ಸೂಚನೆಗಳನ್ನು ಗಮನಿಸುವ ಮೂಲಕ ನೀವು ಅವರು ಬ್ಲಾಕ್ ಮಾಡಿದ್ದಾರೆ ಎನ್ನುವ ಮಾಹಿತಿನ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮನ್ನು ಕೂಡ ಯಾರಾದ್ರೂ ಬ್ಲಾಕ್ ಮಾಡಿದ್ದಾರೆ ಅಂತ ಭಾವನೆ ಇದ್ರೆ ಈ ಮಾಹಿತಿಗಳನ್ನ ಅನುಸರಿಸಿ ನೀವು ಬ್ಲಾಕ್ ಮಾಡಿದ್ದಾರ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಬಹುದು.
Comments are closed.