Airtel Loan: ಆನ್ಲೈನ್ ಮೂಲಕ ಕುಳಿತ ಜಾಗದಲ್ಲಿಯೇ ಏರ್ಟೆಲ್ ನಿಂದ ನೀರು ಕುಡಿದಷ್ಟು ಸುಲಭವಾಗಿ 8 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ??

Airtel Loan: ಏರ್ಟೆಲ್ ಟೆಲಿಕಾಂ (Airtel Telecom)ಜಗತ್ತಿನಲ್ಲಿ ಅತ್ಯಂತ ದೊಡ್ಡ ಹೆಸರು ಗಳಿಸಿದ ಕಂಪನಿ (Company). ಈಗ ಕೆಲವು ಪ್ರಿಪೇಯ್ಡ್ (Pre paid) ಹಾಗೂ ಪೋಸ್ಟ್ ಪೇಯ್ಡ್ (Post Paid) ಯೋಜನೆಗಳಲ್ಲಿ ತುಸು ದರ ಹೆಚ್ಚಳ ಆಗಿದೆ. ಆದರೆ, ದರ ಹೆಚ್ಚಳದ ಜೊತೆಗೆ ಅಷ್ಟೇ ಪ್ರಮಾಣದ ಆಫರ್ (Offer) ಗಳು ಕೂಡ ಲಭ್ಯವಿದೆ ಹಾಗಾಗಿ ಗ್ರಾಹಕರಿಗೆ ಏರ್ಟೆಲ್ ಬಹಳ ಅನುಕೂಲ ಮಾಡಿಕೊಟ್ಟಿದೆ ಇನ್ನು ಏರ್ಟೆಲ್ ನೆಟ್ವರ್ಕ್ (Network) ಗೆ ಸಂಬಂಧ ಪಟ್ಟ ಹಾಗೆ ಹೇಳುವುದಾದರೆ ಬಹುತೇಕ ದೇಶದಲ್ಲಿ ಎಲ್ಲಾ ಕಡೆ ನೆಟ್ವರ್ಕ್ ಲಭ್ಯವಿದೆ ಇನ್ನೊಂದು ಗುಡ್ ನ್ಯೂಸ್ (good news) ನೀಡಿದೆ ಅದೇನು ಎಂದು ತಿಳಿದುಕೊಳ್ಳಬೇಕಾ ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

Get Airtel Loan in Airtel Thanks app. Download now

ಹೌದು ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ ಇನ್ನು ಮುಂದೆ ಏರ್ಟೆಲ್ ನಿಂದ ಫೋನ್ ಕರೆ ಮಾಡುವುದು ಮಾತ್ರವಲ್ಲ ಆನ್ಲೈನ್ ಮೂಲಕ ಸುಲಭವಾಗಿ ಸಾಲ(Loan)ವನ್ನು ಕೂಡ ಪಡೆಯಬಹುದು. ಇದೀಗ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ Airtel Loan ಅನ್ನು ಕೂಡ ಪ್ರಾರಂಭಿಸಿದೆ ಈಗಾಗಲೇ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಿದ್ದು ಅನೇಕ ಕಂಪನಿಗಳೊಂದಿಗೆ ಪಾಲುದಾರಿಕೆ ವ್ಯವಹಾರ ನಡೆಸುತ್ತಿದೆ ಈ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿರುವುದು ಅಲ್ಲದೆ ಸಾಕಷ್ಟು ಆಫರ್ ಗಳನ್ನು ಕೂಡ ಬಿಟ್ಟಿದೆ.

ಏರ್ಟೆಲ್ ಸಾಲ ಸೌಲಭ್ಯ! (Airtel personal loan online)

ಏರ್ಟೆಲ್ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುತ್ತಿದ್ದು ನೀವು ಸುಲಭವಾಗಿ 8 ಲಕ್ಷದವರೆಗೆ ಸಾಲ (8lakh loan) ಪಡೆಯಬಹುದು. ಏರ್ಟೆಲ್ ಥ್ಯಾಂಕ್ಸ್(Airtel thanks plan) ಯೋಜನೆಯ ಮೂಲಕ ಆನ್ಲೈನ ನಲ್ಲಿ ಸಾಲಕ್ಕಾಗಿAirtel Loan ಅರ್ಜಿ ಸಲ್ಲಿಸಬಹುದು. ಏರ್ಟೆಲ್ ಸಿಮ್ (Airtel Sim) ಬಳಸುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ. ನೀವು ಸಾಲವನ್ನ ಮರುಪಾವತಿ ಮಾಡಲು ಈಎಂಐ (EMI) ವಿಧಾನವನ್ನು ಬಳಸಬಹುದು.

ಅರ್ಜಿ ಹಾಕಿದ್ರೆ ಸಾಲ ಯಾವಾಗ ಸಿಗುತ್ತೆ ಗೊತ್ತಾ?

ಸಾಮಾನ್ಯವಾಗಿ ಗ್ರಾಹಕರು ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದು ಇದು ದಾಖಲಾತಿಗಳ ಪರಿಶೀಲನೆಗಾಗಿ ಸಾಕಷ್ಟು ದಿನ ಸಾಲಕ್ಕಾಗಿ ಕಾಯಬೇಕಾಗಿರುತ್ತದೆ. ಆದರೆ ಅತಿ ವೇಗವಾಗಿ ಏರ್ಟೆಲ್ ನಿಂದ ಸಾಲ Airtel Loan ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಿದ ಕೇವಲ 24 ಗಂಟೆಗಳಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಬಂದು ಸೇರುತ್ತದೆ. ಹಾಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ನಿಗದಿಪಡಿಸಿದ ಈ ಎಂಐ ಮೊತ್ತ ಕಟ್ ಆಗುತ್ತದೆ.

ಏರ್ಟೆಲ್ ಸಾಲ ಹೇಗೆ ನೀಡುತ್ತೆ

ಹೌದು, ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏರ್ಟೆಲ್ ನೇರವಾಗಿ ಯಾರಿಗೂ ಸಾಲ ನೀಡುವುದಿಲ್ಲ. ಇದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಏರ್ಟೆಲ್ ಆಪ್ಲಿಕೇಶನ್ ನಲ್ಲಿ ಈಗಾಗಲೇ ಹಲವಾರು ಕಂಪನಿಗಳು ಸಹಭಾಗಿತ್ವ ಪಡೆದುಕೊಂಡಿವೆ ಏರ್ಟೆಲ್ ಡಿಎಂಐ ಫೈನಾನ್ಸ್, ಮನಿ ವ್ಯೂ, ಹಾಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮೊದಲದ ಹಣಕಾಸು ಸಂಸ್ಥೆಗಳು ಏರ್ಟೆಲ್ ಜೊತೆಗೆ ಕೈಜೋಡಿಸಿವೆ. ಹಾಗಾಗಿ ಸಾಲ ಪಡೆಯಲು ಬಯಸುವ ಗ್ರಾಹಕರು ಹೀಗೆ ಮಾಡಿ.

Aadhaar Link ಆಗದೇ ಇದ್ದರೂ ಸರಿ, ಮಹಿಳೆಯರ ಖಾತೆಗ ಹಣ ಜಮಾ ಆಗುತ್ತೆ; ಸರ್ಕಾರದ ಮಹತ್ವದ ನಿರ್ಧಾರ; ನಿಮ್ಮ ಖಾತೆಗೂ ಹಣ ಬಂದಿರುತ್ತೆ ಚೆಕ್ ಮಾಡಿ!

ಲೋನ್ ಗೆ ಹೀಗೆ ಅಪ್ಲೈ ಮಾಡಿ

ಏರ್ಟೆಲ್ ಗ್ರಾಹಕರು ಗೂಗಲ್ ಪೇ ಸ್ಟೋರ್ ನಿಂದ ಏರ್ಟೆಲ್ ಥ್ಯಾಂಕ್ಸ್ ಆಪ್ ಡೌನ್ಲೋಡ್ Airtel Loan ಮಾಡಿಕೊಳ್ಳಬೇಕು. ನಂತರ ಓಟಿಪಿ ಸಹಾಯದಿಂದ ಲಾಗಿನ್ ಆಗಿ. ಇಲ್ಲಿ ಏರ್ಟೆಲ್ ಇಂದ ಲಭ್ಯವಾಗುವ ಎಲ್ಲಾ ಸಾಲ ಸೌಲಭ್ಯಗಳ ಕುರಿತಾಗಿ ಮಾಹಿತಿ ಇರುತ್ತದೆ. ನೀವು ಶಾಪ್ ಆಯ್ಕೆಯನ್ನು ಮಾಡಬೇಕು. ಅಲ್ಲಿ ಫೈನಾನ್ಸಿಯಲ್ ಸರ್ವಿಸಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿಯೂ ಕೂಡ ನಿಮಗೆ ಬೇಕಾದ ಹಲವಾರು ಆಯ್ಕೆಗಳನ್ನು ನೀಡಲಾಗಿದೆ. ಅಲ್ಲಿ ನೀವು ಪರ್ಸನಲ್ ಲೋನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.  ಈಗ ನಿಮಗೆ ಒಂದು ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆಯ ವಿವರಗಳನ್ನು ನೀವು ಫಿಲ್ ಮಾಡಬೇಕು. ನೀವು ನೀಡಿರುವ ದಾಖಲೆಗಳು ಸರಿಯಾಗಿದ್ದರೆ ಹಾಗೂ ಉತ್ತಮ ಕ್ರೆಡಿಟ್ ಸ್ಕೂಲ್ ಹೊಂದಿದ್ದರೆ ಸಾಲಕ್ಕೆ ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಸಾಲ ಸೌಲಭ್ಯವನ್ನು ಪಡೆಯುತ್ತೀರಿ.

Comments are closed.