Aadhaar Link: ಆಧಾರ್ ಲಿಂಕ್ ಆಗದೇ ಇದ್ದರೂ ಸರಿ, ಮಹಿಳೆಯರ ಖಾತೆಗ ಹಣ ಜಮಾ ಆಗುತ್ತೆ; ಸರ್ಕಾರದ ಮಹತ್ವದ ನಿರ್ಧಾರ; ನಿಮ್ಮ ಖಾತೆಗೂ ಹಣ ಬಂದಿರುತ್ತೆ ಚೆಕ್ ಮಾಡಿ!

Aadhaar Link now not Compulsory: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು (Congress Government) ಚುನಾವಣಾ ಪೂರ್ವ ನೀಡಿದ ಮಾತಿನಂತೆ 5 ರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಹೆಚ್ಚು ಮಹತ್ವ ಪಡೆದಿರುವುದು ಗೃಹಲಕ್ಷ್ಮಿ ಯೋಜನೆ. ಈ ಗ್ಯಾರಂಟಿ ಯೋಜನೆ (Guarantee Scheme) ಅನ್ವಯ ಅರ್ಹ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2೦೦೦ ರೂ. ಜಮಾ ಮಾಡಲಾಗುತ್ತದೆ.

Aadhaar Link now not Compulsory for Gruhalakshmi as per government new rules.  

ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಮೈಸೂರಿನಲ್ಲಿ ರಕ್ಷಾ ಬಂಧನದ ದಿನ ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಚಾಲನೆ ನೀಡಿದರು. ಆದರೆ ಆರಂಭದಿಂದಲೂ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ 2೦೦೦ ರೂ. ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ತಿಂಗಳು ಕೂಡ ಶೇ.3೦ರಷ್ಟು ಮಹಿಳೆಯರ ಖಾತೆಗೆ ಹಣ ಸಂದಾಯವಾಗಿಲ್ಲ (Aadhaar Link) ಎಂದು ವರದಿಗಳು ತಿಳಿಸುತ್ತಿವೆ. ಇದಕ್ಕೆ ತಾಂತ್ರಿಕ ದೋಷಗಳೇ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

Post Office Scheme: ಅಂಚೆ ಕಚೇರಿಯ ದೀಪಾವಳಿ ಗಿಫ್ಟ್; 5 ಸಾವಿರ ಠೇವಣಿ ಇಡಿ; 3 ಲಕ್ಷ ರೂ. ಪಡೆಯಿರಿ!

ಲಕ್ಷಾಂತರ ಮಹಿಳೆಯರು ಸೌಲಭ್ಯದಿಂದ ವಂಚಿತ:

ರಾಜ್ಯ ಸರ್ಕಾರವು ಮೊದಲ ಕಂತಿನ ಹಣವನ್ನು ಸಫ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು. ಅಕ್ಟೋಬರ್ ತಿಂಗಳಲ್ಲಿ ಎರಡನೇ ಕಂತಿನ ಹಣವೂ ಬಿಡುಗಡೆ ಆಗಿದೆ. ಆದರೂ ಇ ಸೌಲಭ್ಯದಿಂದ ಲಕ್ಷಾಂತರ ಮಹಿಳೆಯರು ವಂಚಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಇದುವರೆಗೆ ಸುಮಾರು 12 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಆದರೆ ಸೌಲಭ್ಯ ಎಲ್ಲರಿಗೂ ತಲುಪಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು ಸರ್ಕಾರ ಹಣ ಬಿಡುಗಡೆ ಮಾಡಿದ ಕೂಡಲೇ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ.

ಆಧಾರ್ ಸೀಡಿಂಗ್ ನಿಯಮದಿಂದ ವಿನಾಯತಿ ನೀಡಿದ ಸರ್ಕಾರ;

12 ಲಕ್ಷ ಜನ ಮಹಿಳೆಯರಿಗೆ ಇದುವರೆಗೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ (Aadhaar Link) ಮಾಡಿಕೊಳ್ಳಲು ಸಾಧ್ಯವಾಗಿಲ್ಲ.  ಇದೇ ಕಾರಣದಿಂದ ಅವರ ಖಾತೆಗೆ ಹಣ ಜಮಾ ಮಾಡಲು ಸರ್ಕಾರದಿಂದ ಸಾಧ್ಯವಾಗಿರಲಿಲ್ಲ. ಈಗ ಇದಕ್ಕೆ ಮುಕ್ತಿ ನೀಡಲಾಗಿದೆ. ಆಧಾರ್ ಸೀಡಿಂಗ್ (Aadhaar Link) ಮಾಡಲೇಬೇಕು ಎನ್ನುವ ನಿಯಮದಿಂದ ಸರ್ಕಾರ ವಿನಾಯತಿ ನೀಡಿದೆ. ಹಾಗಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದೆ ಇದ್ದರೂ ಇದೇ ತಿಂಗಳಿನಿಂದ ಅರ್ಜಿ ಸಲ್ಲಿಸಿದ ಎಲ್ಲ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಎಂದು ತಿಳಿದು ಬಂದಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ.

ತಿಂಗಳಿಂದ ಎಲ್ಲರಿಗೂ 2೦೦೦ ರೂ. ಬಂದೇ ಬರುತ್ತೆ:

ಕಳೆದ ಎರಡು ಮೂರು ತಿಂಗಳಿನಿಂದ ಒಂದಲ್ಲಾ ಒಂದು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಸಿದ ಎಲ್ಲರ ಖಾತೆಗೆ ಹಣ ಸಂದಾಯ ಮಾಡಲು ಆಗಿರಲಿಲ್ಲ. ಇದೀಗ ಸರ್ಕಾರವು ಆಧಾರ್ ಸೀಡಿಂಗ್ನಿಂದ (Aadhaar Link) ವಿನಾಯತಿ ನೀಡಿರುವುದರಿಂದ ಈ ತಿಂಗಳು ಪ್ರತಿಯೊಬ್ಬರ ಖಾತೆಗೂ ಹಣ ಜಮಾ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Comments are closed.