ಮೋದಿ ಮಾಸ್ಟರ್ ಗೇಮ್- ದಿಡೀರ್ ಎಂದು ಎಂಟ್ರಿ ಕೊಡುತ್ತಿರುವ ಶಮಿ- ಮೋದಿ, ಶಮಿ ಆಡುತ್ತಿರುವ ಆಟ ಎಂತದ್ದು ಗೊತ್ತೇ?

ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಒಂದು ಕಡೆ ಬಿಜೆಪಿ ಪಕ್ಷದವರು ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷ 400 ಸೀಟ್ಗಳನ್ನು ಗೆಲ್ಲಲಿದೆ ಎಂಬುದಾಗಿ ಹೇಳುತ್ತಿದ್ದರೆ ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದವರು ಮೊದಲ ಬಾರಿಗೆ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲಿದ್ದಾರೆ ಅನ್ನುವಂತಹ ಮಾತುಗಳನ್ನು ಆಡುತ್ತಿದ್ದಾರೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ ಎನ್ನುವಂತಹ ಕುತೂಹಲ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಬಾರಿ ನರೇಂದ್ರ ಮೋದಿಯವರ ನೇತೃತ್ವದ ಅಧಿಕಾರ ರೂಢ ಪಕ್ಷವನ್ನು ಹಿಮ್ಮೆಟ್ಟಿಸಿ ಅಧಿಕಾರವನ್ನು ಪಡೆಯುವಂತಹ ಆಸೆಯಲ್ಲಿ ಕಾಂಗ್ರೆಸ್ ಕೂಡ ಇದೆ. ಇನ್ನು ಈ ಬಾರಿ ಬಿಜೆಪಿ ಪಕ್ಷದಿಂದ ಮೊಹಮ್ಮದ್ ಶಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದು ರಾಜಕೀಯ ವಲಯದಲ್ಲಿ ಈಗ ದೊಡ್ಡ ಮಟ್ಟದ ಸುದ್ದಿಯನ್ನು ಸೃಷ್ಟಿಸಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಅತ್ಯಂತ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದ ಬೌಲರ್ ಆಗಿದ್ದ ಶಮಿ ಅರ್ಜುನ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತರು ಕೂಡ ಆಗಿದ್ದರು. ಈಗ ಅವರು ರಾಜಕೀಯಕ್ಕೆ ಕೂಡ ಬರ್ತಿರೋದು ಎಲ್ಲರಲ್ಲೇ ಆಶ್ಚರ್ಯ ಮೂಡಿಸಿದೆ.

ಕೆಲವೊಂದು ಮಾಹಿತಿಗಳು ತಿಳಿಸಿರುವಂತೆ ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ಕ್ಷೇತ್ರದಲ್ಲಿ ಶಮಿ ಅವರನ್ನು ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಚುನಾವಣೆಗೆ ನಿಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಇನ್ನು ಈ ಕ್ಷೇತ್ರದಿಂದ ಶಮಿ ಚುನಾವಣೆಗೆ ಇಳಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದಾಗಿ ಕೂಡ ಕೆಲವೊಂದು ಮೂಲಗಳು ತಿಳಿಸಿವೆ. ಇದರ ಬಗ್ಗೆ ಎಲ್ಲಿಯೂ ಕೂಡ ಶಮಿಯವರು ಅಧಿಕೃತವಾಗಿ ಮಾತನಾಡಿಲ್ಲ. ಬಿಜೆಪಿ ಪಕ್ಷದಿಂದಲೂ ಕೂಡ ಯಾವುದೇ ಅಧಿಕೃತ ಮಾಹಿತಿ ಇದರ ಬಗ್ಗೆ ಹೊರಬಂದಿಲ್ಲ.

ಬಂಗಾಳ ಮೂಲದ ಕ್ರಿಕೆಟಿಗರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರೋದು ಇದೇ ಮೊದಲ ಇದಕ್ಕಿಂತ ಮುಂಚೆ ಅಶೋಕ್ ದಿಂಡ ಹಾಗೂ ಮನೋಜ್ ತಿವಾರಿ ಕೂಡ ಚುನಾವಣೆಗೆ ಸ್ಪರ್ಧಿಸಿರುವ ಅಂತಹ ಹಿನ್ನೆಲೆಯನ್ನು ನೀವು ಕಾಣಬಹುದಾಗಿದೆ. ಇನ್ನು ಬಿಜೆಪಿಯ ವರಿಷ್ಠ ನಾಯಕರ ಜೊತೆಗೆ ಕೂಡ ಶಮಿ ಅವರ ಸಂಬಂಧ ಉತ್ತಮವಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಬಾರಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಸೋತ ಬೆನ್ನಲ್ಲಿ ಮೋದಿಯವರು ಡ್ರೆಸ್ಸಿಂಗ್ ರೂಮ್ ಗೆ ಬಂದು ಕ್ರಿಕೆಟಿಗರನ್ನು ಸಾಂತ್ವನ ಗೊಳಿಸುತ್ತಿರುವ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರನ್ನು ಸಮಾಧಾನಗೊಳಿಸಿದ್ದನ್ನು ಕೂಡ ನಾವು ಈ ಸಂದರ್ಭದಲ್ಲಿ ನೋಡಬಹುದಾಗಿದೆ. ಎಲ್ಲಾ ಘಟನೆಗಳು ಒಂದಕ್ಕೊಂದು ಸಂಬಂಧ ಎನ್ನುವ ರೀತಿಯಲ್ಲಿ ಈ ಬಾರಿ ಶಮಿ ಚುನಾವಣೆಗೆ ನಿಲ್ಲಲಿದ್ದಾರೆ ಅನ್ನುವಂತಹ ಸುದ್ದಿಗೆ ಪೂರಕವಾಗಿವೆ.

ಸದ್ಯದ ಮಟ್ಟಿಗೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವರ ಹೆಸರನ್ನು ಮಾತ್ರ ಬಹಿರಂಗಗೊಳಿಸಿದ್ದು ಮುಂದಿನ ದಿನಗಳಲ್ಲಿ ಹೊರಬರುವಂತಹ ಲಿಸ್ಟಿನಲ್ಲಿ ಮೊಹಮ್ಮದ್ ಶಮಿ ಅವರ ಹೆಸರು ಇರುತ್ತದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ

Comments are closed.