IPL 2024: ಆರ್ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನವೇ ಚೆನ್ನೈ ಬೌಲರ್ ಗೆ ಗಾಯ; RCB ತಂಡಕ್ಕೆ ಪ್ಲಸ್ ಆಗಲಿದ್ಯಾ?

IPL 2024: ಈ ಬಾರಿ ಐಪಿಎಲ್ ಪ್ರಾರಂಭ ಆಗುವುದಕ್ಕಿಂತ ಮುಂಚೇನೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸಾಕಾಷ್ಟು ಸಂಕಷ್ಟಗಳನ್ನು ಎದುರಿಸಬೇಕಾದಂತಹ ಸಾಧ್ಯತೆ ಇದೆ. ಮೊದಲನೆಯದಾಗಿ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಡೇವೋನ್ ಕಾನ್ವೆ ಇಂಜುರಿಯ ಕಾರಣದಿಂದಾಗಿ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು ಆದರೆ ಈಗ ಮತ್ತೊಂದು ತಲೆನೋವು ಚೆನ್ನೈ ಸೂಪರ್ ಕಿಂಗ್ ತಂಡವನ್ನು ಕಾಡುತ್ತಿದೆ. ಹೌದು ಈಗ ತಂಡದ ಪ್ರಮುಖ ಬೌಲರ್ ಆಗಿದ್ದ ಮಥೀಶ ಪತಿರಾಣಾ ಕೂಡ ಇಂಜುರಿಯ ಕಾರಣದಿಂದಾಗಿ ಈಗ ತಂಡದಿಂದ ಹೊರಗೆ ಹೋಗುವ ಸಾಧ್ಯತೆಯಿದ್ದು ಇದು ಕೂಡ ಮಹೇಂದ್ರ ಅವರಿಗೆ ತಲೆ ನೋವಿನ ವಿಚಾರವಾಗಿದೆ ಎಂದು ಹೇಳಬಹುದಾಗಿದೆ.

ಇನ್ನೇನು ಎರಡು ವಾರಗಳು ಬಾಕಿ ಉಳಿದಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ ತಂಡದಲ್ಲ ಪ್ರಮುಖ ಬೌಲರ್ ಅನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ತಂಡದ ಅಭಿಮಾನಿಗಳಿಗೆ ಬೇಸರದ ವಿಚಾರವಾಗಿದೆ. ಮಥೀಶ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವಂತಹ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಇಂಜುರಿಯಿಂದಾಗಿ ಹೊರಬಂದಿದ್ದರು. ಇನ್ನು ಶ್ರೀಲಂಕಾ ಕ್ರಿಕೆಟ್ ಮ್ಯಾನೇಜ್ಮೆಂಟ್ ಕೂಡ ಆಟಗಾರ ಮೂರನೇ ಪಂದ್ಯಕ್ಕೆ ಲಭ್ಯ ಇರೋದಿಲ್ಲ ಇದರ ಹಿನ್ನೆಲೆ ಆತನ ಗ್ರೇಡ್ ಒನ್ ಮಂಡಿರಜ್ಜು ಇಂಜುರಿಯೇ ಕಾರಣ ಎಂಬುದಾಗಿ ಹೇಳಿಕೊಂಡಿದೆ.

ಕನಿಷ್ಟ ಪಕ್ಷ ಮಥೀಶ ಈ ಇಂಜುರಿಯಿಂದ ಹೊರಬರುವುದಕ್ಕಾಗಿ ಎರಡು ವಾರಗಳನ್ನು ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಹೀಗಾಗಿ ಅವರು ತಂಡವನ್ನು ಯಾವಾಗ ಸೇರಿಕೊಳ್ಳಲಿದ್ದಾರೆ ಅನ್ನೋದು ಈಗ ಅನುಮಾನವಾಗಿದೆ. ಖಂಡಿತವಾಗಿ ಮಾರ್ಚ್ 22 ರಂದು ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಆಟಗಾರರ ಅನುಪಸ್ಥಿತಿಯಲ್ಲಿ ಮೈದಾನಕ್ಕೆ ಇಳಿಯಲಿದೆ.

ಕಳೆದ ಬಾರಿ ಐಪಿಎಲ್ ನಲ್ಲಿ ಚೆನ್ನೈ ತಂಡ ಕಪ್ ಗೆಲ್ಲೋದಕ್ಕೆ ಮಥೀಶ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. 12 ಪಂದ್ಯಗಳಲ್ಲಿ ಬರೋಬ್ಬರಿ 19 ವಿಕೆಟ್ಗಳನ್ನು ಮಥೀಶ ಪಾತಿರಾಣಾ ಕಬಳಿಸಿದ್ದರು. ಆರಂಭಿಕ ಬ್ಯಾಟ್ಸ್ ಮ್ಯಾನ್ ಹಾಗೂ ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾವ ರೀತಿಯಲ್ಲಿ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಬಾರಿ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಎಂಬುದಾಗಿ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಾರಿಯ ಐಪಿಎಲ್ ಸೀಸನ್ ಯಾವ ರೀತಿಯಲ್ಲಿ ಮುಂದುವರಿಯಲಿದೆ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ಯಾವ ರೀತಿಯಲ್ಲಿ ಯಶಸ್ವಿಯಾಗಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ. 42ನೇ ವಯಸ್ಸಿನಲ್ಲಿ ಕೂಡ ಯುವಕರನ್ನು ಕೂಡ ನಾಚಿಸುವ ರೀತಿಯಲ್ಲಿ ನಾಯಕತ್ವ ಹಾಗೂ ಕೊನೆಯ ಓವರ್ ಗಳಲ್ಲಿ ಬಂದು ಸಿಕ್ಸರ್ ಗಳನ್ನು ಬಾರಿಸುವಂತಹ ಮಹೇಂದ್ರ ಸಿಂಗ್ ಧೋನಿ ಅವರ ಆಟವನ್ನು ನೋಡಲು ಅವರ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ.

Comments are closed.