Loksabha Election 2024: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ನಿರೀಕ್ಷೆ ಮಾಡದೇ ಇರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಶುರುವಾಯ್ತಾ ಅಸಮಾಧಾನ?

Loksabha Election 2024: ಮುಂದಿನ ಲೋಕಸಭಾ ಚುನಾವಣೆಗೆ ಪೂರ್ವ ಭಾವಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 17 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಅನೌನ್ಸ್ ಮಾಡಲಾಗಿದ್ದು ನಾಲ್ಕು ಕ್ಷೇತ್ರದ ಹೆಸರುಗಳು ಪೆಂಡಿಂಗ್ ಇದೆ. ಮುಂದಿನ ದಿನಗಳಲ್ಲಿ ಎರಡನೇ ಪಟ್ಟಿಯನ್ನು ಯಾವುದೇ ಕ್ಷಣದಲ್ಲಿ ಕೂಡ ಬಿಡುಗಡೆ ಮಾಡಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಐದು ಕ್ಷೇತ್ರಗಳಲ್ಲಿ ಈಗಾಗಲೇ ಇರುವಂತಹ ಸಚಿವರ ಬದಲಾಗಿ ಅವರ ಮಕ್ಕಳು ಸ್ಪರ್ಧೆ ಮಾಡದಿದ್ದಾರೆ ಅನ್ನುವಂತಹ ಮಾಹಿತಿ ಕೂಡ ಕಾಂಗ್ರೆಸ್ ಪಕ್ಷದ ಮೂಲಗಳಿಂದ ಹೊರಬಂದಿದೆ.

ಕಾಂಗ್ರೆಸ್ ಪಟ್ಟಿಯನ್ನು ಹೊರ ಹಾಕುವ ಮುನ್ನವೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಕೂಡ ಕಂಡು ಬಂದಿದೆ. ಕಾಂಗ್ರೆಸ್ನ ರಾಷ್ಟ್ರಾಧ್ಯಕ್ಷರಾಗಿರುವಂತಹ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯ ಮುಂದೆ ವೀಣಾ ಕಾಶಪ್ಪ ನವಿರು ಕಣ್ಣೀರು ಇಟ್ಟಿರುವಂತಹ ಘಟನೆ ಕೂಡ ನಡೆದಿರುವುದು ಕಂಡುಬಂದಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಕೋಲಾರ ಟಿಕೆಟ್ ಗಾಗಿ ಕೂಡ ಸಾಕಷ್ಟು ಕಾದಾಟ ನಡೆಯುತ್ತಿರುವುದು ಕಣ್ಣುಮುಂದೆ ಕಂಡುಬರುತ್ತದೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಮುನಿಯಪ್ಪ ಹಾಗೂ ರಮೇಶ್ ಬಣ್ಣದ ನಡುವೆ ಬಡಿದಾಟ ಪ್ರಾರಂಭವಾಗಿದೆ. ಇವರಿಬ್ಬರಲ್ಲಿ ಕೋಲಾರ ಲೋಕಸಭಾ ಚುನಾವಣೆಯ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಕಳೆದ ಬಾರಿಗಿಂತ ಈ ಬಾರಿ ಟಿಕೆಟ್ ಹೈಡ್ರಾಮ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಇದೆ. ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಬಿಜೆಪಿಯಲ್ಲಿ ಕೂಡ ಇದನ್ನೇ ನಾವು ನಿರೀಕ್ಷಿಸಬಹುದಾಗಿದೆ.

ನಾಳೆ ಅಂದ್ರೆ ಮಾರ್ಚ್ 22ನೇ ತಾರೀಕಿನಂದು ಬಿಜೆಪಿ ಪಕ್ಷ ಕೂಡ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತಹ ನಿರೀಕ್ಷೆ ರಾಜ್ಯದಲ್ಲಿ ಕಂಡುಬರುತ್ತದೆ. ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ಮೂರು ಕಡೆಗಳಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತಹ ಒಪ್ಪಂದವನ್ನು ಮಾಡಿಕೊಂಡಿದೆ. ಇದರ ನಡುವೆ ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರು ಕೂಡ ಮಂಡ್ಯದಲ್ಲಿಯೇ ತನ್ನ ರಾಜಕೀಯ ಅನ್ನೋದನ್ನ ಸ್ಪಷ್ಟಪಡಿಸುವ ಮೂಲಕ ಮೈತ್ರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ ಎಂದು ಹೇಳಬಹುದಾಗಿದೆ.

ಕಳೆದ ಬಾರಿ ರಾಜ್ಯದಲ್ಲಿ ಕೇವಲ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಆದರೆ ಈ ಬಾರಿ ಲೆಕ್ಕಾಚಾರದ ಪ್ರಕಾರ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲೂ ಗೆಲ್ಲುವಂತಹ ಮಾತನ್ನು ಕಾಂಗ್ರೆಸ್ ಪಕ್ಷದ ನಾಯಕರು ಆಡಿದ್ದಾರೆ. ಒಟ್ಟಾರಿಯಾಗಿ ನರೇಂದ್ರ ಮೋದಿ ಅವರ 400 ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತಹ ಕನಸನ್ನು ನನಸು ಮಾಡುವಲ್ಲಿ ಕರ್ನಾಟಕ ರಾಜ್ಯ ಯಾವ ರೀತಿಯಲ್ಲಿ ತನ್ನ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾದು ನೋಡಬೇಕಾಗಿದೆ.

Comments are closed.