Vastu Tips: ನಿಮ್ಮ ಮನೆಯಲ್ಲಿ ಇದೊಂದು ಬದಲಾವಣೆ ಮಾಡ್ಕೊಂಡ್ರೆ ಸಾಕು, ಜೀವನದಲ್ಲಿ ಕಷ್ಟ ನಷ್ಟಗಳಿಗೆ ಜಾಗವೇ ಇರಲ್ಲ.. ಬರೀ ಸುಖ!

Vastu Tips: ನಮ್ಮ ಮನೆಗಳಲ್ಲಿ ಇರುವಂತಹ ಪ್ರತಿಯೊಂದು ವಿಚಾರ ಅಥವಾ ವಸ್ತುಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿರುವಂತಹ ಕೆಲವೊಂದು ವಸ್ತುಗಳು ಅಥವಾ ಚಿಕ್ಕಪುಟ್ಟ ಘಟನೆಗಳು ಕೂಡ ನಕಾರತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳ ಹರಿವಿಗೆ ಕಾರಣವಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಸ್ತುಗಳಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿಗಳು ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತನ್ನು ತರುವುದಕ್ಕೆ ಕಾರಣವಾಗಬಹುದಾಗಿದೆ. ಅವುಗಳ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ.

  1. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ವಾಸ್ತು ದೋಷಗಳಿದ್ದರೆ ಆ ಸಂದರ್ಭದಲ್ಲಿ ನೀವು ಬೆಳಗ್ಗೆ ಹಾಗೂ ಸಂಜೆಯ ಸಂದರ್ಭದಲ್ಲಿ ಪೂಜೆ ಮಾಡುವಾಗ ಪೂಜಾ ಸ್ಥಳದಲ್ಲಿ ದೀಪಕ್ಕೆ ಹಸುವಿನ ತುಪ್ಪವನ್ನು ಎಣ್ಣೆ ರೀತಿಯಲ್ಲಿ ಬಳಸಿಕೊಳ್ಳಬೇಕು. ಇದು ನಿಮ್ಮ ಮನೆಯ ಮುಂದೆ ಬೆಳಗುವದರಿಂದಾಗಿ ನಿಮ್ಮ ಮನೆಯಲ್ಲಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಗಳು ಹೊರ ಹೋಗುತ್ತವೆ ಹಾಗೂ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.
  2. ಯಾವತ್ತೂ ಕೂಡ ನಿಮ್ಮ ಮಲಗುವಂತಹ ಮಂಚ ಅಥವಾ ಹಾಸಿಗೆಯ ಕೆಳಗೆ ಶೂ ಅಥವಾ ಚಪ್ಪಲಿಗಳನ್ನು ಇಡಬಾರದು. ಇದರಿಂದಾಗಿ ಲಕ್ಷ್ಮೀದೇವಿ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳೆ. ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಾರದು ಎನ್ನುವಂತಹ ಯೋಚನೆ ನಿಮ್ಮ ಬಳಿ ಇದ್ದರೆ ಚಪ್ಪಲಿ ಅಥವಾ ಪಾದರಕ್ಷೆಗಳನ್ನು ಮನೆಯ ಹೊರಗೆ ಇಡಬೇಕು. ಈ ಕ್ರಮಗಳನ್ನು ಪಾಲಿಸುವುದರಿಂದ ಲಕ್ಷ್ಮೀದೇವಿಯ ಮನಸ್ಸನ್ನು ಗೆಲ್ಲುವುದಕ್ಕೆ ಸಾಧ್ಯವಾಗುತ್ತದೆ ಹಾಗೂ ಆಕೆ ನಿಮಗೆ ಸಂಪತ್ತನ್ನು ಕರುಣಿಸುತ್ತಾಳೆ.
  3. ನಿಮ್ಮ ಮನೆಯಲ್ಲಿ ಇರುವಂತಹ ಕಬೋರ್ಡ್ ಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಕೂಡ ಪಾಸಿಟಿವ್ ಎನರ್ಜಿ ಮನೆಯಲ್ಲಿ ಹರಿದಾಡುತ್ತದೆ. ಇದಕ್ಕಾಗಿ ನಿಮ್ಮ ಕಬೋರ್ಡ್ ಅನ್ನು ಮನೆಯ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕಾಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಕಬೋರ್ಡ್ ಅನ್ನು ಅತ್ಯಂತ ಸ್ವಚ್ಛವಾಗಿ ಇರಿಸಿಕೊಳ್ಳುವುದು ಕೂಡ ಪ್ರಮುಖವಾಗಿರುತ್ತದೆ.
  4. ಪ್ರತಿದಿನ ಮನೆಯಲ್ಲಿ ಶಂಕವನ್ನು ಉದುರುವ ಮೂಲಕ ನಿಮ್ಮ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಗಳನ್ನು ಹೊರ ಹಾಕುವಂತಹ ಕೆಲಸವನ್ನು ನೀವು ಧಾರ್ಮಿಕ ಗ್ರಂಥಗಳ ಮೂಲಕ ತಿಳಿಸಿರುವಂತೆ ಮಾಡಬಹುದಾಗಿದೆ. ಇನ್ನು ಮನೆಯಲ್ಲಿ ಇರುವಂತಹ ಶಂಖವನ್ನು ಬೆಳಗ್ಗೆ ಹಾಗೂ ಸಂಜೆಯ ಪೂಜೆಯ ಸಂದರ್ಭದಲ್ಲಿ ಊದಬೇಕಾಗಿರುತ್ತದೆ. ಇದರ ಜೊತೆಗೆ ಮನೆಯ ಅಂಗಳದಲ್ಲಿ ಹಾಲನ್ನು ನೀಡುವ ಸಸ್ಯಗಳು ಅಂದರೆ ಉದಾಹರಣೆಗೆ ಮುಳ್ಳಿನ ಸಸ್ಯಗಳನ್ನು ನೆಡಬಾರದು ಇದರಿಂದಾಗಿ ಮನೆಯಲ್ಲಿ ಕೆಟ್ಟ ಸಮಸ್ಯೆಗಳು ಕಂಡುಬರುತ್ತವೆ.
  5. ವಾಸ್ತು ಶಾಸ್ತ್ರದ ಪ್ರಕಾರ ಯಾವತ್ತೂ ಕೂಡ ಮಣ್ಣಿನ ಮಡಕೆಗಳನ್ನು ತಲೆಕೆಳಗಾಗಿ ಇಡಬಾರದಂತೆ. ಇದರಿಂದಾಗಿ ಮನೆಯಲ್ಲಿ ಇರುವಂತಹ ಅದೃಷ್ಟ ನಿಮ್ಮ ಮೇಲೆ ಕೋಪಗೊಳ್ಳುತ್ತದೆ. ಇದರ ಜೊತೆಗೆ ಯಾವತ್ತೂ ಕೂಡ ಮುರಿದಿರುವಂತಹ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಅದರಲ್ಲಿ ನಿಮ್ಮ ಮುಖವನ್ನು ನೋಡುವುದನ್ನು ಯಾವತ್ತು ಮಾಡಬೇಡಿ ಇದರಿಂದಾಗಿ ನಿಮ್ಮ ಕೆಟ್ಟ ದಿನಗಳು ಪ್ರಾರಂಭವಾಗಬಹುದು. ವಾಸ್ತು ಶಾಸ್ತ್ರದಲ್ಲಿ ಇದರ ಉಲ್ಲೇಖವಿದೆ.
  6. ನಮ್ಮಲ್ಲಿ ಸಾಕಷ್ಟು ಜನರು ಬಾಗಿಲಿನ ಮೇಲೆ ಬಟ್ಟೆಯನ್ನು ನೇತು ಹಾಕುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ನೆಗೆಟಿವ್ ಎನರ್ಜಿ ಬರೋದಕ್ಕೆ ಕಾರಣ ಆಗಿರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ ಹೀಗಾಗಿ ಇದನ್ನು ಮಾಡುವುದಕ್ಕೆ ಹೋಗಬೇಡಿ.
  7. ಹಣದ ವಹಿವಾಟನು ಮಾಡುವ ಸಂದರ್ಭದಲ್ಲಿ ಹಣವನ್ನು ಲೆಕ್ಕಾಚಾರ ಮಾಡುವಾಗ ಐದು ಬೆರಳುಗಳನ್ನು ಕೂಡ ನೀವು ಬಳಸಬೇಕಾಗಿರುತ್ತದೆ. ಇದರಿಂದಾಗಿ ಆರ್ಥಿಕವಾಗಿ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಒದಗುತ್ತದೆ.

Comments are closed.