Namratha Gowda: ಅಪ್ಪುಗಾಗಿ ಬಿಗ್ ಬಾಸ್ ಖ್ಯಾತಿಯ ನಮೃತಾ ಗೌಡ ಮಾಡಿದ್ದೇನು ಗೊತ್ತಾ? ಇಂಥ ಕೆಲ್ಸನೂ ಮಾಡ್ತಾರಾ?

Namratha Gowda: ನಮೃತ ಗೌಡ ಅವರ ಬಗ್ಗೆ ಕರ್ನಾಟಕದ ಮನೆ ಮನೆಗೂ ಕೂಡ ಈಗ ತಿಳಿದಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ನಮೃತ ಗೌಡ ಬಾಲ ಕಲಾವಿದೆಯಾಗಿ ಕೂಡ ಕಾಣಿಸಿಕೊಂಡಿದ್ದರು. ಅದಾದ ನಂತರ ನಿಜಕ್ಕೂ ಕೂಡ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿದ್ದಂತಹ ನಾಗಿಣಿ 2 ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ. ಈ ಧಾರವಾಹಿಯಲ್ಲಿ ಅವರು ತಮ್ಮ ಪಾತ್ರದ ಮೂಲಕ ದೊಡ್ಡ ಮಟ್ಟದ ಕಿರುತೆರೆ ಪ್ರೇಕ್ಷಕರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದಾದ ನಂತರ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಅವರು ಕಾಣಿಸಿಕೊಂಡಿದ್ದು ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಸುವ ಕಾರ್ಯಕ್ರಮ ಆಗಿರೋ ಬಿಗ್ ಬಾಸ್ ನಲ್ಲಿ.

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ನಮೃತ ಗೌಡ ಅವರು ನೂರಕ್ಕೆ ನೂರು ದಿನ ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದು ಬಿಗ್ ಬಾಸ್ ಅನ್ನು ನೋಡುವಂತಹ ಪ್ರೇಕ್ಷಕರ ಫೇವರೆಟ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕೇವಲ ಕಿರುತೆರೆಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಅನ್ನು ನಮ್ರತ ಗೌಡ ಹೊಂದಿದ್ದಾರೆ.

ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕಿಶನ್ ಅವರ ಜೊತೆಗೆ ನಮೃತ ಗೌಡ ಡ್ಯಾನ್ಸ್ ಮಾಡಿರುವಂತಹ ಗ್ಲಾಮರಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಸಾವಿರಾರು ಲಕ್ಷಾಂತರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾವೆ. ಇನ್ ಮಾರ್ಚ್ 17ರಂದು ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಅಮೃತ ಗೌಡ ಅವರು ಮಾಡಿರುವ ಕೆಲಸ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬರ್ತಡೆ ಆಗಿರುವ ಕಾರಣದಿಂದಾಗಿ ಇದೇ ದಿನ ಬಡವರಿಗೆ ಆಹಾರ ನೀರು ಹೀಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುವಂತಹ ಕೆಲಸವನ್ನು ನಮೃತ ಗೌಡ ಪ್ರಾರಂಭ ಮಾಡಿದ್ದಾರೆ. ಕೇವಲ ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿ ತಿಂಗಳ 17ನೇ ತಾರೀಖಿನಂದು ಈ ರೀತಿ ಅಗತ್ಯ ಇರುವವರಿಗೆ ಸಹಾಯ ಮಾಡುವಂತಹ ನಿರ್ಧಾರವನ್ನು ನಮೃತ ಗೌಡ ರವರು ತೆಗೆದುಕೊಂಡಿದ್ದು ಈ ದಿನವನ್ನು ಪುನೀತ್ ರಾಜಕುಮಾರ್ ಅವರಿಗೆ ಸಮರ್ಪಿಸುವಂತಹ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ.

ಇನ್ನು ಈ ಕೆಲಸವನ್ನು ಈ ಬಾರಿಯ ಮಾರ್ಚ್ 17ರ ಅಂದರೆ ಅಪ್ಪು ಬರ್ತಡೆಯ ದಿನದಿಂದಲೇ ಪ್ರಾರಂಭ ಮಾಡಿದ್ದಾರೆ. ನಮೃತ ಗೌಡ ಅವರ ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದ್ದು ಈ ರೀತಿ ಕೆಲಸ ಮಾಡುತ್ತಿರುವುದರ ಬಗ್ಗೆ ಪ್ರತಿಯೊಬ್ಬರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಅಪ್ಪು ಅಭಿಮಾನಿಗಳು ನಮೃತಗೌಡ ಅವರ ಈ ಕೆಲಸಕ್ಕೆ ಮೆಚ್ಚುಗೆಯನ್ನು ಸಲ್ಲಿಸುತ್ತಿದ್ದು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ.

Comments are closed.