Fuel Price: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 15ರೂ. ಕಡಿತಗೊಳಿಸಿದ ಕೇಂದ್ರ ಸರ್ಕಾರ; ಈಗೆಷ್ಟಾಗಿದೆ ಬೆಲೆ?

Fuel Price: ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ಮುನ್ನ ಎನ್ನುವಂತೆ ಈಗ ಕೇಂದ್ರಾಡಳಿತ ಪ್ರದೇಶ ಆಗಿರುವಂತಹ ಲಕ್ಷದ್ವೀಪದಲ್ಲಿ ಮೋದಿ ಸರ್ಕಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 15 ರೂಪಾಯಿ ಇಳಿಕೆಯಾಗಿದೆ. ಲಕ್ಷ ದ್ವೀಪದಲ್ಲಿ ಇರುವಂತಹ ಆಂಡ್ರೋಟ್ ಹಾಗೂ ಕಲ್ಪೇನಿ ದ್ವೀಪಗಳಲ್ಲಿ 15.3 ರೂಪಾಯಿ ಹಾಗೂ ಕವರಟ್ಟಿ ಮಿನಿ ಕಾಯ್ ಎನ್ನುವಂತಹ ಮತ್ತೆರಡು ದ್ವೀಪಗಳಲ್ಲಿ ಲೀಟರ್ಗೆ 5.2 ಇಳಿಕೆಯಾಗಿದೆ.

ಪೆಟ್ರೋಲಿಯಂ ಸಚಿವಾಲಯದ ಟ್ವೀಟ್ ನಲ್ಲಿ ತಿಳಿದುಬಂದಿರುವ ಮಾಹಿತಿ ಪ್ರಕಾರ ಈ ಮೇಲೆ ತಿಳಿಸಿರುವ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇನ್ನು ಈ ದ್ವೀಪಗಳಿಗೆ ಇಂದಿನವನ್ನು ಪೂರೈಸುವಂತಹ ಕೆಲಸವನ್ನು ಮಾಡುತ್ತಿರುವುದು ಇಂಡಿಯನ್ ಆಯಿಲ್ ಆಗಿದ್ದು ಇದು ಕೂಡ ಈ ಬಗ್ಗೆ ಖಾತ್ರಿಪಡಿಸಿದೆ. ಇಂಧನದ ಡಿಪೋಗಳಿಂದ ನೇರವಾಗಿ ಪೈಪ್ ಲೈನ್ ಮೂಲಕ ಇಂಧನವನ್ನು ಪೂರೈಕೆ ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ಈ ದ್ವೀಪಗಳಲ್ಲಿ ಆಂಡ್ರೋಟ್, ಕಲ್ಪೇನಿ, ಕವರಟ್ಟಿ ದ್ವೀಪಗಳಿಗೆ ಬ್ಯಾರಲ್ ಮೂಲಕ ಇಂಧನವನ್ನು ಪೂರೈಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಲಕ್ಷದ್ವೀಪದಲ್ಲಿ ಇರುವಂತಹ ಎಲ್ಲಾ ದ್ವೀಪಗಳಲ್ಲಿ ಇರುವಂತಹ ಪೆಟ್ರೋಲ್ ಬೆಲೆಯನ್ನು ಗಮನಿಸುವುದಾದರೆ ಪ್ರತಿ ಲೀಟರ್ ಗೆ ರೂ.100.75 ಆಗಿದೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 95.71 ರೂಪಾಯಿ ಆಗಿದೆ.

ಕಳೆದ ಬಾರಿ ನಮ್ಮ ಭಾರತ ದೇಶದ ಒಳಗೆ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು ಎನ್ನುವಂತಹ ಸುದ್ದಿ ಕೂಡ ಕೇಳಿ ಬಂದಿದ್ದು ಎರಡು ರೂಪಾಯಿ ಇಳಿಕೆ ಆಗಿತ್ತಂತೆ. ಚುನಾವಣೆ ನಿಯಮಗಳ ಪ್ರಕಾರ ಯಾವುದೇ ರೀತಿಯ ಯೋಜನೆಗಳನ್ನು ಹಾಗೂ ಹೊಸ ನಿಯಮಗಳನ್ನು ಜಾರಿಗೆ ತರುವಂತಹ ಪ್ರಕ್ರಿಯೆಯನ್ನು ಕೆಲವೊಂದು ದಿನಗಳ ಮುಂಚೇನೆ ಮಾಡಬೇಕು ಎನ್ನುವುದಾಗಿ ಚುನಾವಣೆ ಕಮಿಷನ್ ಆದೇಶ ನೀಡಿರುತ್ತದೆ ಹೀಗಾಗಿ ಈ ನಿರ್ಧಾರವನ್ನು ಕೈಗೊಂಡಿರಬಹುದು ಎಂಬುದಾಗಿ ಜನರಲ್ಲಿ ಮಾತುಕತೆ ನಡೆಯುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ಗಳ ಬೆಲೆಯ ಏರಿಕೆ ಕಾರಣದಿಂದಾಗಿ ಗ್ರಾಹಕರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದು ಈ ಬೆಲೆ ಇಳಿಕೆ ಅನ್ನುವುದು ಖಂಡಿತವಾಗಿ ಅವರಿಗೆ ಸ್ವಲ್ಪಮಟ್ಟಿಗೆ ನಿರಾಳತೆಯನ್ನು ತಂದು ಕೊಟ್ಟಿರಬಹುದು.

ಸದ್ಯದ ಮಟ್ಟಿಗೆ ಲೋಕಸಭಾ ಚುನಾವಣೆಯ ತಯಾರಿ ನಡೆಯುತ್ತಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕೂಡ ಈ ಬಾರಿಯ ಗೆಲುವಿನ ಚುಕ್ಕಾಣಿ ಹಿಡಿಯುವಂತಹ ಜಿದ್ದಾಜಿದ್ದಿ ಪೈಪೋಟಿಗೆ ಸಿದ್ಧವಾಗಿವೆ. ಈ ಬಾರಿ ಒಂದು ಕಡೆಯಲ್ಲಿ ದೇಶದ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು 400 ಸೀಟ್ ಗಳಿಗಿಂತ ಅಧಿಕ ಸೀಟ್ ಗೆಲ್ಲುವ ಸವಾಲ್ ಹಾಕಿದ್ರೆ, ಇನ್ನೊಂದು ಕಡೆ ರಾಹುಲ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಪಾರ್ಟಿ ಕೂಡ ನಾವು ಕೂಡ ಯಾರಿಗೇನು ಕಮ್ಮಿ ಇಲ್ಲ ಎನ್ನುವಂತಹ ಮಾತುಗಳನ್ನ ಆಡುತ್ತಿದೆ. ಆದರೆ ಸಿಂಹ ಸಲದ ಗದ್ದುಗೆಯನ್ನು ಯಾರು ಪಡೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Comments are closed.