Relationship: ಮದುವೆಯಾದ ಪುರುಷರನ್ನ ಪ್ರೀತಿಸುವುದಕ್ಕಿಂತ ಮುಂಚೆ ಹುಡುಗಿಯರು ಈ ವಿಚಾರಗಳನ್ನ ತಿಳಿದುಕೊಂಡ್ರೆ ಒಳ್ಳೇಯದು!

Relationship: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಧ್ಯಮಗಳಲ್ಲಿ ನೀವು ಹುಡುಗಿಯರು ಮದುವೆಯಾಗಿರೋ ಪುರುಷರನ್ನ ಇಷ್ಟಪಡುವುದನ್ನು ನೋಡಿರಬಹುದು. ಅಥವಾ ಒಂದು ವೇಳೆ ನೀವು ಕೂಡ ಇದೇ ಹಾದಿಯಲ್ಲಿ ಇದ್ದರೆ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಬೇಕು. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಒಂದು ವೇಳೆ ನೀವು ಈಗಾಗಲೇ ಮದುವೆ ಆಗಿರುವಂತಹ ಪುರುಷನನ್ನು ಮದುವೆ ಆಗುವುದಕ್ಕೆ ಸಿದ್ಧವಾಗಿದ್ದು ನಿಮಗಾಗಿ ಆತ ತನ್ನ ಸಂಬಂಧವನ್ನು ಕಳೆದುಕೊಂಡು ನಿಮ್ಮ ಜೊತೆಗೆ ಬರಲು ಸಿದ್ಧನಾಗಿದ್ದಾನೆ ಎಂದರೆ, ಆತ ಈ ಹಿಂದೆ ಬೇರೆ ಮಹಿಳೆಯರ ಜೊತೆಗೂ ಕೂಡ ಇದೇ ರೀತಿಯ ಮಾತುಗಳನ್ನು ಆಡಿರಬಹುದೆಂಬುದನ್ನು ಕೂಡ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವೊಮ್ಮೆ ಅವನ ಜೊತೆಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವಂತಹ ಆಸೆ ನಿಮಗಿದ್ದು ಆತ ನಿಮ್ಮನ್ನು ಕಾಯಿಸುತ್ತಿರಬಹುದು. ನೀವು ಫೋನ್ ಅಥವಾ ಮೆಸೇಜ್ ಮಾಡಿದಾಗ ಅದಕ್ಕೆ ಆತ ಪ್ರತಿಕ್ರಿಯೆ ನೀಡುವುದಕ್ಕೆ ಕೂಡ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಪಬ್ಲಿಕ್ ನಲ್ಲಿ ನಿಮ್ಮ ಜೊತೆಗೆ ಆತ ಫ್ರೀ ಆಗಿ ನಡೆದುಕೊಳ್ಳದೆ ಇರಬಹುದು. ಅಂಜಿಕೆ ಹಾಗೂ ಅಳುಕಿನಿಂದಲೇ ಆತ ನಿಮ್ಮ ಜೊತೆಗೆ ಪಬ್ಲಿಕ್ ನಲ್ಲಿ ನಡೆದುಕೊಂಡರೆ ಆ ಸಂದರ್ಭದಲ್ಲಿ ಕೂಡ ನೀವು ಆತನ ಬಗ್ಗೆ ಯೋಚನೆ ಮಾಡಬೇಕಾಗಿರುತ್ತದೆ. ಇನ್ನು ಆತನ ಸ್ನೇಹಿತರ ಜೊತೆಗೆ ಇರುವಾಗ ನಿಮ್ಮ ಕಾಲ್ ಗಳಿಗೆ ರಿಪ್ಲೈ ಮಾಡದೆ ಇರುವುದು ಹಾಗೂ ಹೆಂಡತಿಗೆ ಸುಳ್ಳು ಹೇಳೋದು ಈ ರೀತಿಯ ಪರಿಸ್ಥಿತಿಗಳಲ್ಲಿ ಆತ ನಿಮ್ಮನ್ನು ನಿರ್ಲಕ್ಷಿಸಬಹುದಾಗಿದೆ. ಎಲ್ಲಾ ವಿಚಾರಗಳಿಂದ ತಿಳಿದುಬರುವುದು ಏನಂದರೆ ಆತ ತನ್ನ ಹೆಂಡತಿಗೆ ಮೋಸ ಮಾಡಿರುತ್ತಾನೆ ಹಾಗೂ ಮುಂದೊಂದು ದಿನ ನಿಮಗೂ ಕೂಡ ಇದೇ ರೀತಿಯ ಮೋಸ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು. ಎಲ್ಲಕ್ಕಿಂತ ಪ್ರಮುಖವಾಗಿ ಈಗಾಗಲೇ ಆತ ಮದುವೆಯಾಗಿದ್ದು ಮಕ್ಕಳನ್ನು ಕೂಡ ಹೊಂದಿರುತ್ತಾನೆ ಹೀಗಾಗಿ ನಿಮ್ಮ ಮತ್ತು ಕುಟುಂಬದ ಆಯ್ಕೆ ಬಂದಾಗ ಖಂಡಿತವಾಗಿ ಆತ ತನ್ನ ಹೆಂಡತಿ ಮಕ್ಕಳನ್ನೇ ಪ್ರಮುಖ ಆದ್ಯತೆಯನ್ನಾಗಿ ಆಯ್ಕೆಮಾಡುತ್ತಾನೆ.

ಇನ್ನು ಇವತ್ತಲ್ಲ ನಾಳೆ ನಿಮ್ಮಿಬ್ಬರ ನಡುವೆ ಇರುವಂತಹ ಈ ವಿಚಾರ ಪಬ್ಲಿಕ್ ಆದಾಗ ಸಂತೋಷಕ್ಕಿಂತ ಹೆಚ್ಚಾಗಿ ನಿಮಗೆ ಅದರಿಂದ ಆಗುವಂತಹ ಸಮಸ್ಯೆಗಳು ಹಾಗೂ ಬೇಸರವೇ ಹೆಚ್ಚಾಗಿರುತ್ತದೆ ಅನ್ನೋದನ್ನ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇನ್ನು ಈ ಸಂಬಂಧದ ಬಗ್ಗೆ ಆ ಪುರುಷ ಯಾವುದೇ ರೀತಿಯ ಭರವಸೆಯನ್ನು ನೀಡಿದರು ಕೂಡ ಅದು ತಾತ್ಕಾಲಿಕವಾಗಿರುತ್ತದೆ ಹಾಗೂ ಅದರಿಂದ ಆತ ಯಾವಾಗ ಬೇಕಾದರೂ ಕೂಡ ಹೊರ ಬರಬಹುದು ಅನ್ನೋದನ್ನ ನೀವು ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿ ಬಿಡಿ. ಹೀಗಾಗಿ ಮದುವೆ ಆಗಿರುವಂತಹ ಪರಪುರುಷನ ಸಾಂಗತ್ಯವನ್ನು ಮಾಡುವ ಸಂದರ್ಭದಲ್ಲಿ ನೀವು ಈ ಮೇಲೆ ಹೇಳಿರುವಂತಹ ವಿಚಾರಗಳನ್ನು ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕು ಹಾಗೂ ಇದಕ್ಕೆ ತಯಾರಾಗಿರಬೇಕು.

Comments are closed.