Shani blessings: ಇಂಥವರ ಮೇಲೆ ಈ ವರ್ಷ ಪೂರ್ತಿ ಶನಿಯ ವಕ್ರದೃಷ್ಟಿಯಲ್ಲ, ಕೃಪೆ ಇರುತ್ತೆ; ಮುಟ್ಟಿದ್ದೇಲ್ಲಾ ಚಿನ್ನ ಆಗೋ ಸಮಯ!

Shani blessings: 2024ರಲ್ಲಿ ಶನಿಯ ಉದಯ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ವಿಶೇಷವಾಗಿ ಕೆಲವೊಂದು ರಾಶಿಗಳ ಮೇಲೆ ಅದೃಷ್ಟದ ಪರಿಣಾಮವನ್ನು ಬೀರುವುದು ಪಕ್ಕ ಆಗಿದೆ. ಶನಿಯ ಕೃಪಾಕಟಾಕ್ಷ ಇದ್ದ ಮೇಲೆ ವರ್ಷವಿಡಿ ಅವರಿಗೆ ಶುಭ ಫಲಿತಾಂಶಗಳು ಹೆಚ್ಚಾಗಿ ಕಂಡುಬರುತ್ತದೆ. ಹಾಗಿದ್ರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಮೇಷ ರಾಶಿ (Aries)

ಮೇಷ ರಾಶಿಯ ಜನರ ಕೆಲಸದ ಜೀವನ ಈ ಸಂದರ್ಭದಲ್ಲಿ ಸರಿಯಾಗುತ್ತದೆ ಹಾಗೂ ಕೆಲಸದ ಬಗ್ಗೆ ಇರುವಂತಹ ಪ್ರತಿಯೊಂದು ಗೊಂದಲಗಳು ನಿವಾರಣೆಯಾಗುತ್ತವೆ. ಕೆಲಸದ ಜೀವನದಲ್ಲಿ ನಿಮ್ಮ ಕೆಲಸದಿಂದಾಗಿ ಪ್ರತಿಯೊಬ್ಬರು ಕೂಡ ಇಂಪ್ರೆಸ್ ಆಗ್ತಾರೆ ಹಾಗೂ ನಿಮ್ಮ ಮೇಲೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಸಾಕಷ್ಟು ಪ್ರಯೋಜನಗಳನ್ನು ಈ ಸಂದರ್ಭದಲ್ಲಿ ನೀವು ಪಡೆದುಕೊಳ್ಳಲಿದ್ದೀರಿ. ಕೆಲಸದಲ್ಲಿ ಪ್ರಮೋಷನ್ ಕೂಡ ಪಡೆದುಕೊಳ್ಳಲಿದ್ದೀರಿ. ಸಂಬಳ ಕೂಡ ಹೆಚ್ಚಾಗಲಿದೆ. ಆರ್ಥಿಕ ಲಾಭ ಕೂಡ ಸರಾಗವಾಗಿ ನಿಮ್ಮ ಜೀವನದಲ್ಲಿ ಹರಿದು ಬರಲಿದೆ.

ವೃಷಭ ರಾಶಿ (Taurus)

ಬಾಕಿ ಇರುವಂತಹ ವೃಷಭ ರಾಶಿಯವರ ಕೆಲಸಗಳು ಈ ಸಂದರ್ಭದಲ್ಲಿ ಪೂರ್ತಿಯಾಗಲಿವೆ. ಇನ್ನು ಉದ್ಯೋಗ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾವುದಾದರೂ ನಿರ್ದಿಷ್ಟ ಸ್ಥಳಕ್ಕೆ ಟ್ರಾನ್ಸ್ಫರ್ ಬಯಸಿದರೆ ಅದು ಕೂಡ ಸಿಗುತ್ತದೆ. ಕೆಲಸ ಮಾಡುವ ಹಾಗೂ ವ್ಯಾಪಾರ ಮಾಡುವ ಸ್ಥಳದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ವ್ಯಾಪಾರಸ್ಥರು ಕೂಡ ಈ ಸಂದರ್ಭದಲ್ಲಿ ಶನಿಯ ಕೃಪೆಯಿಂದಾಗಿ ಕೈ ತುಂಬಾ ಹಣವನ್ನು ಸಂಪಾದನೆ ಮಾಡಲಿದ್ದಾರೆ.

ತುಲಾ ರಾಶಿ(Libra)

ಈ ಸಂದರ್ಭದಲ್ಲಿ ತುಲಾ ರಾಶಿಯವರ ಜೀವನದಲ್ಲಿ ಸಾಕಷ್ಟು ಪಾಸಿಟಿವ್ ಘಟನೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕೆಲಸ ಇಲ್ಲದೆ ಇರುವಂತಹ ತುಲಾ ರಾಶಿಯವರಿಗೆ ಕೆಲಸ ಸಿಗಲಿದೆ ಹಾಗೂ ಈಗಾಗಲೇ ಕೆಲಸ ಇರುವವರಿಗೆ ಪ್ರಮೋಷನ್ ಸಿಗಲಿದೆ. ಈ ಬದಲಾವಣೆಗಳು ನಿಮ್ಮ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಆದಾಯವನ್ನು ತರುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಸಂಗತಿಯ ಮೇಲಿನ ನಿಮ್ಮ ಪ್ರೀತಿ ಹೆಚ್ಚಾಗಲಿದೆ. ಸಾಕಷ್ಟು ಹಣವನ್ನು ನೀವು ಈ ಸಂದರ್ಭದಲ್ಲಿ ಉಳಿತಾಯ ಮಾಡಲಿದ್ದೀರಿ ಹಾಗೂ ಇದನ್ನು ನೀವು ನಿಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾಗಿದೆ.

ಧನು ರಾಶಿ(Sagittarius)

ಬೇರೆ ಬೇರೆ ಪ್ರವಾಸಿಯ ತಾಣಗಳಿಗೆ ಕುಟುಂಬದ ಜೊತೆಗೆ ಧನುರಾಶಿಯವರು ಪ್ರವಾಸಕ್ಕೆ ಹೋಗುವಂತಹ ಸಾಧ್ಯತೆ ಕೂಡ ಇದೆ. ಇದು ನಿಮ್ಮ ಕುಟುಂಬದಲ್ಲಿ ಸಂತೋಷವನ್ನು ಮತ್ತೊಮ್ಮೆ ತರಲಿದೆ. ಕೇವಲ ಅದೃಷ್ಟವನ್ನು ನಂಬಿಕೊಂಡು ಕೂರಬೇಡಿ ನಿಮ್ಮ ಕಠಿಣ ಪರಿಶ್ರಮ ಕೂಡ ಸರಿಯಾದ ಪ್ರತಿಫಲವನ್ನು ತರಲಿದೆ. ಇದೇ ಕಾರಣಕ್ಕಾಗಿ ಸೋಮಾರಿತನವನ್ನು ಬಿಡಿ ಹಾಗೂ ಹರ್ಷ ಕಡಿಮೆ ಮಾಡಿಕೊಳ್ಳಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲಿದೆ.

ಮಕರ ರಾಶಿ (Capricorn)

ಈ ಸಂದರ್ಭದಲ್ಲಿ ನೀವು ಹಣ ಉಳಿತಾಯದ ವಿಚಾರದಲ್ಲಿ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತೀರಿ ಹೀಗಾಗಿ ಕೈತುಂಬ ಹಣ ಉಳಿಯಲಿದೆ ಹಾಗೂ ಕುಟುಂಬದ ಪ್ರತಿಯೊಂದು ಆರ್ಥಿಕ ಅಗತ್ಯತೆಗಳನ್ನು ನೀವು ಪೂರೈಸಲಿದ್ದೀರಿ. ಕುಟುಂಬದಲ್ಲಿ ನಿಮ್ಮ ಬಗ್ಗೆ ವಿಶ್ವಾಸ ನಂಬಿಕೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಸಿಗುವಂತಹ ಪ್ರಮೋಷನ್ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ಇನ್ನಷ್ಟು ಸಂತೋಷ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನೀವು ಅಥವಾ ನಿಮ್ಮ ಕುಟುಂಬಸ್ಥರು ಆಸ್ತಿ ಅಥವಾ ವಾಹನವನ್ನು ಹೊಸದಾಗಿ ಖರೀದಿ ಮಾಡುವಂತಹ ಸಾಧ್ಯತೆ ಇದೆ.

Comments are closed.