Government Scheme: ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಪಡೆಯುತ್ತಿರುವವರಿಗೆ ಇನ್ಮುಂದೆ ಸರ್ಕಾರದಿಂದ ಹೊಸ ನಿಯಮ.

Government Scheme: ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳೆಯರಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣವನ್ನು ಅವರ ಖಾತೆಗೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ವಿಧಾನದ ಮೂಲಕ ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡುತ್ತಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಮಾರ್ಚ್ 25ರ ಒಳಗೆ ಇದೊಂದು ಕೆಲಸವನ್ನು ಮಾಡದೆ ಹೋದಲ್ಲಿ ನಿಮ್ಮ ಖಾತೆಗೆ ಹಣ ಬರೋದು ಅಸಾಧ್ಯ ಎಂಬುದಾಗಿ ತಿಳಿದು ಬಂದಿದ್ದು ಹಾಗಿದ್ದರೆ ಬನ್ನಿ ಸರ್ಕಾರದ ಕಡೆಯಿಂದ ಬದಲಾಗಿರುವಂತಹ ಆ ನಿಯಮ ಯಾವುದು ಎಂಬುದನ್ನು ತಿಳಿಯೋಣ.

ಈಗಾಗಲೇ ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬರಬೇಕಾಗಿರುವಂತ ಉಳಿದ ಐದು ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರುಪಾಯಿ ರೀತಿಯಲ್ಲಿ 170 ರೂಪಾಯಿಗಳನ್ನು ಮನೆಯ ಯಜಮಾನಿಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಆದರೆ ಇನ್ಮುಂದೆ ನಿಮ್ಮ ದಾಖಲೆಗಳು ಡಿಜಿಟಲೈಸ್ಡ್ ಆಗದೆ ಹೋದಲ್ಲಿ ನಿಮ್ಮ ಖಾತೆಗೆ ಸರ್ಕಾರ ಹಣವನ್ನು ವರ್ಗಾವಣೆ ಮಾಡುವುದಿಲ್ಲ. NPCI ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್ ಹಾಗೂ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ಮಾಡಿರಬೇಕು. ಇನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ ಒಂದಕ್ಕೊಂದು ಲಿಂಕ್ ಆಗಿರುವಂತೆ ಸರಿಯಾಗಿರಬೇಕು.

ಕೇವಲ ಅನ್ನ ಭಾಗ್ಯ ಯೋಜನೆ ಹಣ ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಕೂಡ ನೀವು ಪಡೆದುಕೊಳ್ಳಬೇಕೆಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಹೀಗೆ ಮಾಡಿದರೆ ಮಾತ್ರ ನಿಮ್ಮ ಏಳನೇ ಕಂತಿನ ಹಣ ನಿಮ್ಮ ಖಾತೆಗೆ ಸೇರುತ್ತದೆ. ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡಲ್ಲಿ ಮಾತ್ರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಮಾರ್ಚ್ 15 ರಿಂದ 31ರ ಒಳಗೆ ನಿಮ್ಮ ಖಾತೆಗೆ ಸೇರಲಿದೆ.

ಹೀಗಾಗಿ ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಪ್ರಕ್ರಿಯೆಗಳನ್ನು ನೀವು ಈ ತಿಂಗಳ ಒಳಗಾಗಿ ಮಾಡಿದರೆ ತಿಂಗಳ ಕೊನೆಯವರೆಗೂ ನೀವು ನಿಮಗೆ ಸೇರಬೇಕಾಗಿರುವಂತಹ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲಿದ್ದೀರಿ. ಹೀಗಾಗಿ ನಿಮ್ಮ ಮುಂದಿನ ಕಂತಿನ ಹಣಗಳು ಸರಿಯಾಗಿ ನಿಮ್ಮ ಖಾತೆಗೆ ಸೇರಬೇಕು ಎಂದಾದಲ್ಲಿ ಈ ಕೆಲಸಗಳನ್ನು ತಪ್ಪದೆ ಮಾಡಿ. ಎಲ್ಲದಕ್ಕಿಂತ ಪ್ರಮುಖವಾಗಿ ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಅವರಿಗೂ ಕೂಡ ಈ ಸಮಸ್ಯೆಯ ಪರಿಹಾರವನ್ನು ಹೇಳಿಕೊಡಿ.

Comments are closed.