Ration Card: ರೇಷನ್ ಕಾರ್ಡ್ ಇರೋರಿಗೆ ಹ್ಯಾಪಿ ನ್ಯೂಸ್. ಸರ್ಕಾರದಿಂದ ಹೊಸ ನಿರ್ಧಾರ.

Ration Card: ಹೊಸದಾಗಿ ಕಾಂಗ್ರೆಸ್ ಸರ್ಕಾರ ಪ್ರಾರಂಭ ಮಾಡಿರುವಂತಹ ಅನ್ಯ ಭಾಗ್ಯ ಯೋಜನೆ ಯಿಂದ ಪ್ರಾರಂಭಿಸಿ ಪ್ರತಿಯೊಂದು ಸರ್ಕಾರದ ಯೋಜನೆಗಳನ್ನು ತಲುಪಿಸುವುದಕ್ಕೆ ಹಾಗೂ ಜನರು ಪಡೆಯೋದಕ್ಕೆ ರೇಷನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ. ಇನ್ನು ಇತ್ತೀಚಿಗಷ್ಟೇ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ದೀನಿ ಅನ್ನೋರಿಗೆ ರೇಷನ್ ಕಾರ್ಡ್ ಇನ್ನು ಕೂಡ ಬಂದಿಲ್ಲ ಅನ್ನೋ ಕೊರಗು ಇರುತ್ತದೆ. ಅಂತವರಿಗೆ ಸರ್ಕಾರದಿಂದ ಮಹತ್ವವಾದ ಪ್ರಕಟಣೆ ಹೊರಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಎಪಿಎಲ್ ಬಿಪಿಎಲ್ ಹಾಗೂ ಅಂತ್ಯದ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿರುವವರಿಗೆ ಹಾಗೂ ಈಗಾಗಲೇ ಹೊಂದಿರುವವರಿಗೆ ಕೂಡ ಸರ್ಕಾರದ ಈ ಮಹತ್ವವಾದ ಸುದ್ದಿ ಅನ್ನೋದು ಗುಡ್ ನ್ಯೂಸ್ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾರ್ಡಿಗೆ 25 ಕೆಜಿ ರೀತಿಯಲ್ಲಿ ಬಿಪಿಎಲ್ ಕಾರ್ಡಿಗೆ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಹಾಗೂ ಇದರಲ್ಲಿ ಕೇಂದ್ರ ಸರ್ಕಾರ ನೀಡುವಂತಹ ಅಕ್ಕಿ ಕೂಡ ಸೇರಿಕೊಂಡಿದೆ.

ಇದೆಲ್ಲದರ ಜೊತೆಗೆ ಈಗಾಗಲೇ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರು ಹಾಗೂ ಇರುವಂತಹ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿರುವ ಅಂತಹ ಅರ್ಜಿದಾರರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು ಮಾರ್ಚ್ 31ರ ಒಳಗೆ ಎಲ್ಲ ಪರಿಶೀಲನೆಗಳನ್ನು ನಡೆಸಿ ಏಪ್ರಿಲ್ ಒಂದರಿಂದ ಹೊಸ ಕಾರ್ಡ್ ವಿತರಣೆ ಹಾಗು ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಈ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಮತ್ತೆ ಸರ್ಕಾರ ಹೊಸ ಕಾರ್ಡ್ ಅರ್ಜಿ ಪ್ರಕ್ರಿಯೆಯನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನುವಂತಹ ಮಾಹಿತಿಗಳು ಸಿಕ್ಕಿವೆ. ಈ ವಿಚಾರದ ಬಗ್ಗೆ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕೃತವಾಗಿ ತಿಳಿಸಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  1. ಭಾರತದ ನಿವಾಸಿಯಾಗಿದ್ದು ಕರ್ನಾಟಕದಲ್ಲಿ ಇರಬೇಕು.
  2. ಈಗ ಹೊಸದಾಗಿ ಮದುವೆ ಆಗಿರುವಂತಹ ನವದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ರೇಷನ್ ಕಾರ್ಡ್ ಹೊಂದಿರುವವರು ಹೊಸ ತಿದ್ದುಪಡಿಯನ್ನು ಮಾಡಬಹುದಾಗಿದೆ.
  3. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ತಮ್ಮ ಆಧಾರ್ ಕಾರ್ಡ್ ವೋಟರ್ ಐಡಿ ಡ್ರೈವಿಂಗ್ ಲೈಸನ್ಸ್ ಪಾಸ್ಪೋರ್ಟ್ ಸೈಜ್ ಫೋಟೋಗಳಂತಹ ಪ್ರಮುಖ ದಾಖಲೆಗಳನ್ನು ನೀಡಬೇಕಾಗಿರುತ್ತದೆ. ಇದರ ಜೊತೆಗೆ ಕುಟುಂಬದ ಆದಾಯ ಯಾವ ರೀತಿಯಲ್ಲಿ ಇದೆ ಅನ್ನೋದನ್ನ ತೀರ್ಮಾನಿಸಿದ ನಂತರ ಅವರಿಗೆ ಯಾವ ರೀತಿಯ ರೇಷನ್ ಕಾರ್ಡ್ ನೀಡಬೇಕೆಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಹೊಸದಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವವರು ಈ ವಿಚಾರವನ್ನು ಸರಿಯಾಗಿ ಗಮನಿಸಬೇಕಾಗಿದೆ.

Comments are closed.