Astrology: ಸೂರ್ಯ ಹಾಗೂ ಗುರುವಿನ ನಡುವೆ ವಿಶೇಷವಾದ ಸಂಯೋಗ. ಈ ರಾಶಿಯವರೇ ಇನ್ನುಮುಂದೆ ಕೋಟ್ಯಾಧಿಪತಿಗಳು!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 13 ರಂದು ಸೂರ್ಯ ಮೇಷ ರಾಶಿಗೆ ಕಾಲಿಡಲಿದ್ದಾನೆ. ಈಗಾಗಲೇ ಈ ಮೇಷ ರಾಶಿಯಲ್ಲಿ ಗುರು ಇದ್ದು, ಗುರು ಹಾಗು ಸೂರ್ಯರ ಸಂಯೋಗ ಉಂಟಾಗಲಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವಂತಹ ಅದೃಷ್ಟ ಕೂಡ ಕೂಡಿ ಬರಲಿದೆ. ಹಾಗಿದ್ರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ (Gemini)

ವ್ಯಾಪಾರ ಹಾಗೂ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುವಂತಹ ಮಿಥುನ ರಾಶಿಯವರಿಗೆ ಪ್ರತಿಯೊಂದು ಕೆಲಸಗಳಲ್ಲಿ ತಮ್ಮ ಕುಟುಂಬದಿಂದ ಬೆಂಬಲ ದೊರಕಲಿದೆ. ಕೆಲಸಕ್ಕಾಗಿ ಮಿಥುನ ರಾಶಿಯವರಿಗೆ ವಿದೇಶಿ ಯಾತ್ರೆ ಮಾಡುವಂತಹ ಅವಕಾಶ ಕೂಡ ಕೂಡಿ ಬರಲಿದೆ. ಪಾಲುದಾರಿಕೆ ವ್ಯಾಪಾರ ಮಾಡುವವರು ಉತ್ತಮವಾದ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಮಿಥುನ ರಾಶಿಯವರ ವ್ಯಾಪಾರದ ವಿಧಾನ ಅವರಿಗೆ ಇನ್ನಷ್ಟು ಹೆಚ್ಚಿನ ಲಾಭವನ್ನು ತರುವುದಕ್ಕೆ ಕಾರಣವಾಗಿದೆ.

ಕರ್ಕ ರಾಶಿ (Cancer)

ಜೀವನದಲ್ಲಿ ಹಣ ಗಳಿಸುವುದಕ್ಕೆ ಕರ್ಕ ರಾಶಿಯವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಾಕಷ್ಟು ಸಮಯಗಳಿಂದ ಮುಗಿಯಬೇಕಾಗಿರುವಂತಹ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಮುಗಿಯಲಿದೆ. ಹದಗೆಟ್ಟಿರುವಂತಹ ನಿಮ್ಮ ವೈವಾಹಿಕ ಜೀವನ ಮತ್ತೆ ಸರಿದಾರಿಗೆ ಬರಲಿದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಮನೆಯಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನೀವು ಪುಣ್ಯ ಸಂಪಾದನೆ ಮಾಡಬಹುದು. ಸರ್ಕಾರಿ ಯೋಜನೆಯ ಪ್ರಯೋಜನವನ್ನು ಪಡೆಯುವ ಮೂಲಕ ಲಾಭವನ್ನು ಸಂಪಾದನೆ ಮಾಡಲಿದ್ದೀರಿ.

ತುಲಾ ರಾಶಿ (Libra)

ಸೋತು ಸುಣ್ಣವಾಗಿರುವಂತಹ ತುಲಾ ರಾಶಿಯವರಿಗೆ ಜೀವನದಲ್ಲಿ ಗೆಲುವು ಸಂಪಾದಿಸುವಂತಹ ಭರವಸೆಯ ಕಿರಣಗಳು ತೋರಲಿವೆ. ಸಾಕಷ್ಟು ಸಮಯಗಳ ನಂತರ ತಕ್ಕಮಟ್ಟಿಗೆ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ನಿಮ್ಮ ಬೆಳವಣಿಗೆ ನೋಡಿ ನಿಮ್ಮ ಮನೆಯವರು ಸಂತೋಷ ಪಡಲಿದ್ದಾರೆ. ಕೆಲವೊಂದು ಪ್ರಮುಖ ಕೆಲಸಗಳನ್ನು ನೀವು ಈ ಸಮಯದಲ್ಲಿ ಮುಗಿಸಲಿದ್ದೀರಿ ಹಾಗೂ ಬಹುದಿನಗಳಿಂದ ಖರೀದಿಸಬೇಕು ಎಂದುಕೊಂಡಿರುವಂತಹ ಆಸ್ತಿ ಮನೆ ಕಾರನ್ನು ಖರೀದಿಸುವಂತಹ ಅವಕಾಶ ನಿಮಗೆ ಕೂಡಿ ಬರಲಿದೆ.

ಧನು ರಾಶಿ (Sagittarius)

ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಈ ಸಂದರ್ಭದಲ್ಲಿ ಸಾಕಷ್ಟು ಶುಭ ಸುದ್ದಿಗಳು ಜೀವನದಲ್ಲಿ ಸಂತೋಷವನ್ನು ತರಲಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಜೀವನದಲ್ಲಿ ಅಗತ್ಯವಾಗಿ ಬೇಕಾಗಿರುವಂತಹ ಹಣ ಸಂಪಾದನೆ ಮಾಡುವಂತಹ ಯೋಗವನ್ನು ನೀವು ಹೊಂದಿದ್ದೀರಿ. ಬೇರೆಯವರ ಕಷ್ಟಕ್ಕೆ ನೆರವಾಗುವಂತಹ ಶಕ್ತಿಯನ್ನು ದೇವರು ನಿಮಗೆ ಈ ಸಂದರ್ಭದಲ್ಲಿ ನೀಡಲಿದ್ದಾನೆ. ಬೇರೆಯವರಿಗೆ ಸಹಾಯ ಮಾಡುವುದರ ಮೂಲಕ ಆ ಪುಣ್ಯ ಸಂಪಾದನೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಕುಂಭ ರಾಶಿ (Aquarius)

ಕೆಲಸ ಮಾಡುವಂತಹ ಸ್ಥಳದಲ್ಲಿ ಕುಂಭ ರಾಶಿಯವರು ತಮ್ಮ ಮಾಲೀಕರ ಜೊತೆಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತಾರೆ ಹೀಗಾಗಿ ನಿಮ್ಮ ಕೆಲಸದ ಮೇಲೆ ಅವರಿಗೆ ನಂಬಿಕೆ ಹೆಚ್ಚಾಗಲಿದೆ. ಸಾಕಷ್ಟು ಸಮಯಗಳಿಂದ ಮದುವೆಯಾಗದೆ ಉಳಿದುಕೊಂಡಿರುವಂತಹ ಸಿಂಗಲ್ ಗಳು ಮದುವೆ ಆಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗುಡ್ ನ್ಯೂಸ್ ಗಾಗಿ ಕುಂಭ ರಾಶಿಯ ಜನರು ನಿರೀಕ್ಷೆ ಮಾಡಬಹುದಾಗಿದೆ. ಕುಂಭ ರಾಶಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಲಾಭವನ್ನು ಖಂಡಿತವಾಗಿ ಪಡೆದುಕೊಳ್ಳುತ್ತಾರೆ. ಎಷ್ಟೇ ಕಷ್ಟವಾದರೂ ಕೂಡ ವ್ಯಾಪಾರದಲ್ಲಿ ಲಾಭವನ್ನು ಸಂಪಾದನೆ ಮಾಡುವಂತಹ ಚಾಣಾಕ್ಷತೆ ಅವರಲ್ಲಿ ಇದೆ.

Comments are closed.