Government Scheme: ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಿರಿ. ಕೇಂದ್ರ ಸರ್ಕಾರದಿಂದ ಸಿಗುತ್ತೆ 70 ಲಕ್ಷ.

Government Scheme: ಒಂದು ಹೆಣ್ಣು ಮಗು ಮನೆಯಲ್ಲಿ ಜನಿಸಿತು ಎಂದರೆ ಆಕೆ ಶಿಕ್ಷಣ ಹಾಗೂ ಮದುವೆ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದಕ್ಕೆ ಹಣವನ್ನು ಆಕೆಯ ಹುಟ್ಟಿನಿಂದಲೇ ಪೋಷಕರು ಉಳಿತಾಯ ಮಾಡುವುದಕ್ಕೆ ಪ್ರಾರಂಭ ಮಾಡಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ 2015ರಿಂದಲೇ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಯೋಜನೆಯ ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವ ಕಾರಣದಿಂದಾಗಿಯೇ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದಾಗಿದೆ. 14 ವರ್ಷಗಳ ನಂತರ ನೀವು ಹೂಡಿಕೆ ಮಾಡಿರುವಂತಹ ಹಣದ ಮೇಲೆ ಬಡ್ಡಿಯನ್ನು ಸೇರಿಸಿ ಕೇಂದ್ರ ಸರ್ಕಾರ ನಿಮಗೆ 70 ಲಕ್ಷ ರೂಪಾಯಿಗಳ ವರೆಗೆ ಕೂಡ ಹಣ ನೀಡುತ್ತದೆ. ಹಾಗಿದ್ರೆ ಬನ್ನಿ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸುಕನ್ಯಾ ಸಮೃದ್ಧಿ ಯೋಜನೆ

ಹತ್ತು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಸುಖನ್ಯ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುತ್ತಾರೆ. ನಿರ್ದಿಷ್ಟ ಸಮಯದವರೆಗೆ ನಿಯಮಿತವಾಗಿ ಹಣವನ್ನು ಠೇವಣಿ ಇಡುತ್ತಾರೆ. ಮುಂದಿನ ಭವಿಷ್ಯದ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಅವರ ಮದುವೆ ಖರ್ಚಿಗಾಗಿ ಈ ಹಣವನ್ನು ಸುಲಭ ರೂಪದಲ್ಲಿ ಅವರ ಪೋಷಕರು ಉಪಯೋಗಿಸಬಹುದಾಗಿದೆ. ಇನ್ನು ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಮಾತ್ರ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ. ಅಂದರೆ ಒಂದು ಕುಟುಂಬದಲ್ಲಿ ಎಷ್ಟು ಹೆಣ್ಣು ಮಕ್ಕಳಿದ್ದರೂ ಕೂಡ ಒಬ್ಬ ಹೆಣ್ಣುಮಗಳ ಹೆಸರಿನಲ್ಲಿ ಒಂದೇ ಖಾತೆಯನ್ನು ತೆರೆಯಲಾಗುತ್ತದೆ. ಪ್ರಮುಖವಾಗಿ ಪೋಷಕರು ಭಾರತದ ನಿವಾಸಿಯಾಗಿರಬೇಕು.

ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ

ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿ ಫಾರ್ಮ್ ಅನ್ನು ಪಡೆದುಕೊಂಡು, ಅದರ ಜೊತೆಗೆ ನಿಮ್ಮ ಹೆಣ್ಣು ಮಗುವಿನ ಬರ್ತ್ ಸರ್ಟಿಫಿಕೇಟ್ ನ ಜೆರಾಕ್ಸ್ ಪ್ರತಿಯನ್ನು ಹಿಡಿದುಕೊಂಡಿರಬೇಕು. ಇದರ ಜೊತೆಗೆ ಪೋಷಕರ ಅಡ್ರೆಸ್ ಪ್ರೂಫ್ ಹಾಗೂ ಐಡೆಂಟಿಟಿ ಪ್ರೂಫ್ ಅನ್ನು ನೀಡಬೇಕು. ಇದರ ಜೊತೆಗೆ ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.

ಇನ್ನು ನೀವು ಈ ಯೋಜನೆ ಅಡಿಯಲ್ಲಿ ಕನಿಷ್ಠ 250 ಇಂದ ಪ್ರಾರಂಭಿಸಿ ಗರಿಷ್ಟ 1.50 ಲಕ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಕನಿಷ್ಟ ಪಕ್ಷ ವರ್ಷಕ್ಕೆ ಒಂದು ಕಂತನ್ನಾದರೂ ಪಾವತಿ ಮಾಡಲೇಬೇಕು ಇಲ್ಲವಾದಲ್ಲಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ನಿಯಮ 80 c ಪ್ರಕಾರ ನಿಮಗೆ ತೆರಿಗೆ ವಿನಾಯಿತಿಯನ್ನು ಕೂಡ ನೀಡಲಾಗುತ್ತದೆ.

ಪ್ರಯೋಜನಗಳು

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಉತ್ತಮ ಬಡ್ಡಿಯ ರಿಟರ್ನ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದು. ಈ ದೀರ್ಘಕಾಲಿಕೆಯ ಹೂಡಿಕೆಯ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದಾಗಿ ಮುಂದಿನ ದಿನಗಳಲ್ಲಿ ಅಂದರೆ ನಿಮ್ಮ ಹೆಣ್ಣು ಮಗುವಿನ ಉನ್ನತ ಶಿಕ್ಷಣದ ಹಾಗೂ ಮದುವೆಯ ದೊಡ್ಡ ಮಟ್ಟದ ಖರ್ಚುಗಳನ್ನು ಪೂರೈಸುವುದಕ್ಕಾಗಿ ಎಪ್ಪತ್ತು ಲಕ್ಷ ರೂಪಾಯಿಗಳ ವರೆಗೆ ಹಣವನ್ನು ನೀವು ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Comments are closed.