IPL 2024: ಸೋತಿದ್ ಒಂದ್ ಪಂದ್ಯ; ಆಗ್ಲೇ ಆಟ ಸಾಕು ಅಂತ ನಿವೃತ್ತಿ ಸುಳಿವು ಕೊಟ್ಟ ಆರ್ ಸಿ ಬಿ ಆಟಗಾರ; ಯಾರ್ ಗೊತ್ತಾ?

IPL 2024: ಈ ಬಾರಿ ಐಪಿಎಲ್ ಪ್ರಾರಂಭವಾಗಿದ್ದು ಮೊದಲನೇ ಪಂದ್ಯದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಆಗಿರುವಂತಹ ಚೆನ್ನೈ ಸೂಪರ್ ಕಿಂಗ್ ತಂಡದ ವಿರುದ್ಧ 6 ವಿಕೆಟ್ಗಳ ಸೋಲನ್ನು ಕಂಡಿದೆ. ಇನ್ನು ಈ ಸೋಲನ್ನು ಕಂಡ ಬೆನ್ನಲ್ಲಿಯೇ ತಂಡದ ಪ್ರಮುಖ ಆಟಗಾರ ಆಗಿರುವಂತಹ ದಿನೇಶ್ ಕಾರ್ತಿಕ್ ತಂಡದಿಂದ ನಿವೃತ್ತಿಯನ್ನು ಘೋಷಣೆ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆರಂಭಿಕ ಆಘಾತವನ್ನು ಕಂಡುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ರವರ 38 ರನ್ನುಗಳ ಬ್ಯಾಟಿಂಗ್ ಮೂಲಕ 20 ಓವರ್ ಗಳ ಪಂದ್ಯದಲ್ಲಿ ಚೆನ್ನೆ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಿ 174 ರನ್ನುಗಳ ಗುರಿಯನ್ನು ನೀಡಿತ್ತು. 2022ರ ಮೆಗಾ ಆಕ್ಷನ್ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ರವರನ್ನು 5.50 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತ್ತು‌. ಕಾಮೆಂಟ್ರಿಯಲ್ಲಿ ಕೂಡ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈ ನಡುವೆ ಕ್ರಿಕೆಟ್ ಅನ್ನು ಕೂಡ ದೂರ ಮಾಡಿದ್ರು. ಆದರೆ ಈ ಬಾರಿ ಮತ್ತೆ ಆರ್ಸಿಬಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಲು ಬ್ಯಾಟಿಂಗ್ ಮಾಡಿದ್ದ ದಿನೇಶ್ ಕಾರ್ತಿಕ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ ಕೂಡ ಮುಂದಿನ ಬಾರಿ ಐಪಿಎಲ್ ನಿಂದ ನಿವೃತ್ತಿಯಾಗುವ ಸೂಚನೆ ನೀಡಿದ್ದಾರೆ.

ಇದು ಚಿಪಾಕ್ ನಲ್ಲಿ ನಿಮ್ಮ ಕೊನೆಯ ಪಂದ್ಯಾನ ಅನ್ನೋದಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಪ್ಲೇ ಆಫ್ ನಲ್ಲಿ ಎರಡು ಪಂದ್ಯಗಳು ಇಲ್ಲಿ ನಡೆಯುವ ಕಾರಣದಿಂದಾಗಿ ಒಂದು ವೇಳೆ ನಾವು ತೇರ್ಗಡೆಯಾದರೆ ಅದು ನಮ್ಮ ಕೊನೆಯ ಪಂದ್ಯ ಆಗಿರಲಿ ಇಲ್ಲವಾದರೆ ಇದೇ ನನ್ನ ಚಿಪಾಕ್ ನಲ್ಲಿ ಪಂದ್ಯವಾಗಿರಲಿದೆ ಅನ್ನೋದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಆರಂಭಿಕವಾಗಿ ಆರ್ಸಿಬಿ ಸಂಪೂರ್ಣವಾಗಿ ನೆಲಕಚ್ಚಿದ ಸಂದರ್ಭದಲ್ಲಿ ಅನುಜ್ ರಾವತ್ ರವರ ಜೊತೆಗೆ ಸೇರಿಕೊಂಡು ದಿನೇಶ್ ಕಾರ್ತಿಕ್ ರವರು 174 ರನ್ನುಗಳ ಸ್ಪರ್ಧಾತ್ಮಕ ಗುರಿಯನ್ನು ಚೆನ್ನೈ ತಂಡಕ್ಕೆ ನೀಡಿತ್ತು. ಆಡಿರುವಂತಹ ಮೊದಲ ಪಂದ್ಯದಲ್ಲಿ ಮೊದಲ ಗೆಲುವನ್ನು ಪಡೆದುಕೊಂಡ ಚೆನ್ನೈ ಮತ್ತೆ ತನ್ನ ಕಪ್ ಅನ್ನು ಈ ಬಾರಿ ಕೂಡ ಗೆಲ್ಲುವಂತಹ ಭರವಸೆಯನ್ನು ಮೂಡಿಸಿದೆ. ಈ ಬಾರಿ ಚೆನ್ನೈ ತಂಡಕ್ಕೆ ಧೋನಿ ಅವರ ಹೊರತಾಗಿ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಕೇವಲ ದಿನೇಶ್ ಕಾರ್ತಿಕ್ ಮಾತ್ರವಲ್ಲದೆ ಅವರ ಸಮಕಾಲೀನರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಕೂಡ ಈ ಬಾರಿ ಐಪಿಎಲ್ ನಲ್ಲಿ ಕೊನೆದಾಗಿ ಆಡಬಹುದು ಎನ್ನುವಂತಹ ಚರ್ಚೆಗಳು ನಡೆಯುತ್ತಿವೆ. ಇದು ಎಷ್ಟರ ಮಟ್ಟಿಗೆ ನಿಜ ಆಗುತ್ತದೆ ಎಂದು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

Comments are closed.