ಬಿಡುಗಡೆ ಆಯ್ತು TRP ಲಿಸ್ಟ್ – ಹೊಸ ಧಾರಾವಾಹಿಗಳ ಧರ್ಬಾರ್ ಹೇಗಿದೆ ಗೊತ್ತೇ? ಟಾಪ್ ಧಾರವಾಹಿ ಇದೆ ನೋಡಿ

ಕನ್ನಡದಲ್ಲಿ ಸಿನಿಮಾ ನೋಡುವವರಷ್ಟೇ ಧಾರವಾಹಿಗಳನ್ನು ನೋಡುವಂತಹ ದೊಡ್ಡ ಮಟ್ಟದ ವೀಕ್ಷಕ ಬಳಗ ಕೂಡ ಇದೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಲಾಕ್ಡೌನ್ ನಂತರ ಕಿರುತೆರೆ ಕಾರ್ಯಕ್ರಮಗಳನ್ನು ಹಾಗೂ ಧಾರವಾಹಿಗಳನ್ನು ನೋಡುವಂತಹ ಗ್ರಾಹಕರ ಬಳಗ ದೊಡ್ಡ ಮಟ್ಟದಲ್ಲಿ ವೇಗವಾಗಿ ದಿನೇ ದಿನೇ ಹೆಚ್ಚಿದೆ. ಸಾಕಷ್ಟು ಹಳೆಯ ದಾರವಾಹಿಗಳು ಮುಗಿದಿದ್ದು ಹೊಸ ಧಾರವಾಹಿಗಳು ಪ್ರಾರಂಭವಾಗಿದ್ದು ಅವುಗಳು ಕೂಡ ಟಿಆರ್‌ಪಿ ವಿಚಾರದಲ್ಲಿ ಮುಂದಿವೆ ಎಂದು ಹೇಳಬಹುದಾಗಿದೆ. ಸಾಕಷ್ಟು ಧಾರವಹಿಗಳು ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಟಾಪ್ ಸ್ಥಾನವನ್ನು ಪಡೆದುಕೊಂಡು ನಂತರ ಕೆಳಗಿನ ಸ್ಥಾನಕ್ಕೆ ಇಳಿದಿರುವಂತಹ ಉದಾಹರಣೆಗಳನ್ನು ಕೂಡ ನೀವು ಕಾಣಬಹುದಾಗಿದೆ. ಕೆಲವು ಹೊಸ ಧಾರವಾಹಿಗಳು ಕೂಡ ರಂಭದಿಂದಲೇ ಉತ್ತಮ ಟಿಆರ್‌ಬಿ ಅಂಕಗಳನ್ನು ಪಡೆದುಕೊಂಡಿರುವ ಉದಾಹರಣೆ ಕೂಡ ಇದೆ.

ಹಾಗಿದ್ರೆ ಬನ್ನಿ ಈ ಬಾರಿಯ ಟಿ ಆರ್ ಪಿ ರೇಟಿಂಗ್ ಯಾವ ರೀತಿಯಲ್ಲಿ ಇದೆ, ಯಾವ ಧಾರವಾಹಿಗಳು ಯಾವ ಸ್ಥಾನದಲ್ಲಿ ಇವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಕರಿಮಣಿ ಧಾರವಾಹಿ ಆರಂಭವಾಗಿ ಮೊದಲ ವಾರದಲ್ಲಿ ಈಗ ಆಶ್ಚರ್ಯಕರ ರೀತಿಯಲ್ಲಿ 4.3 ಟಿಆರ್‌ಪಿ ಅಂಕಗಳನ್ನು ಪಡೆದುಕೊಂಡಿದೆ.‌ ನಂತರ ಭೂಮಿಕಾ ಹಾಗೂ ಶಮಂತ್ ಬ್ರೋ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವಂತಹ ಲಕ್ಷ್ಮಿ ಬಾರಮ್ಮ ಧಾರವಾಹಿ 4.9 ಟಿ ಆರ್ ಪಿ ಅಂಕಗಳನ್ನು ಪಡೆದುಕೊಂಡಿದೆ. ಅದೇ ರೀತಿಯಲ್ಲಿ ಭಾಗ್ಯಲಕ್ಷ್ಮಿ ಧಾರವಾಹಿ 5.9 ಟಿಆರ್‌ಪಿ ಅಂಕಗಳನ್ನು ಪಡೆದುಕೊಂಡು ನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ.

ಎಲ್ಲರ ಮನ ಗೆದ್ದಿರುವಂತಹ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿ ಕೂಡ ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳಲಿದೆ. ರಾಮಾಚಾರಿ ಧಾರವಾಹಿ 6.6 ಟಿ ಆರ್ ಪಿ ಅಂಕಗಳನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಸುಧಾರಾಣಿ ಹಾಗೂ ಇನ್ನಿತರ ಪ್ರಮುಖ ಕಲಾವಿದರು ಕಾಣಿಸಿಕೊಂಡಿರುವಂತಹ ಜನಪ್ರಿಯ ಧಾರವಾಹಿ ಆಗಿರುವ ಶ್ರೀರಸ್ತು ಶುಭಮಸ್ತು ಕಾಣಿಸಿಕೊಳ್ಳಲಿದೆ. ಇದು ಕೂಡ 6.6 ರೇಟಿಂಗ್ ಅನ್ನು ಪಡೆದುಕೊಂಡಿದೆ. ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರವಾಹಿಗಳಲ್ಲಿ ಒಂದಾಗಿರುವಂತಹ ಸತ್ಯ ಧಾರವಾಹಿ ಕೂಡ ನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

ಸತ್ಯ ಧಾರವಾಹಿ 6.7 ಟಿ ಆರ್ ಪಿ ಅಂಕಗಳನ್ನು ಈ ಬಾರಿ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೀತಾರಾಮ ಧಾರವಾಹಿ ಏಳು ಟಿ ಆರ್ ಪಿ ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದೆ. ಸಿನಿಮಾರಂಗದಲ್ಲಿ ಅತ್ಯದ್ಭುತ ನಟನೆಯ ಮೂಲಕ ಹೆಸರುವಾಸಿಯಾಗಿರುವಂತಹ ನಟಿ ಛಾಯಸಿಂಗ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೃತಧಾರೆ ಧಾರವಾಹಿ 7.4 ಟಿಆರ್‌ಪಿ ರೇಟಿಂಗ್ ಅಂಕಗಳನ್ನು ಈ ಬಾರಿ ಅಂದರೆ ಈ ವಾರ ಪಡೆದುಕೊಂಡಿದೆ.

ಇನ್ನು ಈ ವಾರದ ಹೈಯೆಸ್ಟ್ ಟಿ ಆರ್ ಪಿ ರೇಟಿಂಗ್ ಪಡೆದುಕೊಂಡಿರುವಂತಹ ಧಾರವಾಹಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವಂತಹ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಾಣಿಸಿಕೊಳ್ಳುತ್ತದೆ. ಉಮಾಶ್ರೀ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಪುಟ್ಟಕ್ಕನ ಮಕ್ಕಳು ಧಾರವಾಹಿ ಈ ವಾರ 8.4 ಟಿ ಆರ್ ಪಿ ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದೆ. ಪುಟ್ಟಕ್ಕನ ಮಕ್ಕಳನ್ನು ಹಿಂದಿಕ್ಕಿ ಈ ಬಾರಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿರುವ ಧಾರವಾಹಿ ಅಂದ್ರೆ ಅದು ಲಕ್ಷ್ಮಿ ನಿವಾಸ ಆಗಿದೆ. 9.2 trp ಅಂಕಗಳ ಮೂಲಕ ಲಕ್ಷ್ಮಿ ನಿವಾಸ ಧಾರವಾಹಿ ಈ ವಾರದ ನಂಬರ್ ಒನ್ ಧಾರಾವಾಹಿಯಾಗಿ ಕಾಣಿಸಿಕೊಂಡಿದೆ.

Comments are closed.