Karnataka Politics: ಬಿಗ್ ನ್ಯೂಸ್: ನೇರವಾಗಿ ಕಾಂಗ್ರೆಸ್ ಬುಡಕ್ಕೆ ಇಟ್ಟ ಜನಾರ್ಧನ ರೆಡ್ಡಿ: ಮೊದಲ ಟಾರ್ಗೆಟ್ ಯಾರು ಗೊತ್ತೆ?? ಮತ ವಿಭಜನೆ ಫಿಕ್ಸ್.

Karnataka Politics: ನಮ್ಮದು ಪ್ರಜಾತಂತ್ರ ರಾಷ್ಟ್ರ. ಇಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಜೆಗಳು ಅಂದರೆ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ.ಇದಕ್ಕಾಗಿ ಚುನಾವಣಾ ವ್ಯವಸ್ಥೆ ಜಾರಿಯಲ್ಲಿದೆ. ಇನ್ನೇನು ಒಂದೆರಡು ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಂದೆ ಬಿಡುತ್ತದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜೊತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕೂಡ ಚುನಾವಣೆಗೆ ತಯಾರಿ ಆರಂಭಿಸಿದೆ. ಒಂದೊಂದು ಪಕ್ಷಗಳು ಒಂದೊಂದು ರೀತಿಯಲ್ಲಿ ಜನರ ಮನಸ್ಸನ್ನು ಗೆಲ್ಲಲು ಕಸರತ್ತು ಆರಂಭಿಸಿವೆ. ಇದನ್ನೂ ಓದಿ:Jio Recharge:ಜಿಯೋ ಕೊಟ್ಟ ಆಫರ್ ಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್: ಇನ್ಮುಂದೆ ಏರ್ಟೆಲ್ ಆಟ ಸ್ಟಾರ್ಟ್ ಆಯ್ತಾ?? ಹೇಗಿದೆ ಎಂದು ತಿಳಿದರೆ ಇಂದೇ ರಿಚಾರ್ಜ್ ಮಾಡಿಸ್ತೀರಾ

ಈ ನಡುವೆ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಇದೇ ಸಂದರ್ಭದಲ್ಲಿ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಇದಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಡಲಾಗಿದೆ. ಇದರಿಂದ ರಾಜ್ಯದ ರಾಜಕೀಯದಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ನಮ್ಮ ರಾಜ್ಯದಲ್ಲಿ ಇದುವರೆಗೆ ಯಾವುದೇ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಉದಾಹರಣೆ ಇಲ್ಲ. ಆದರೆ ಕೆಲವರು ಅಧಿಕಾರಕ್ಕೆ ಬರುವುದನ್ನು ತಪ್ಪಿಸುವಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿವೆ ಎಂದರೆ ತಪ್ಪಾಗುವುದಿಲ್ಲ. ಇದನ್ನೂ ಓದಿ: Sukanya Sammriddhi:ಹೊಸ ವರ್ಷಕ್ಕೆ ಮೊದಲ ಬಾರಿ ಸಿಹಿ ಸುದ್ದಿ; ಹಣ ಉಳಿಸುವವರಿಗೆ ಭರ್ಜರಿ ಅವಕಾಶ.. ಅದೇನು ಗೊತ್ತಾ?

ಜನಾರ್ಧನ ರೆಡ್ಡಿಯವರು ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಗೆ ಅಧಿಕೃತವಾಗಿ ಗುಡ್ ಬೈ ಹೇಳಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದೀಗ ಅವರು ತಮ್ಮ ಕಾರ್ಯಚಟುವಟಿಕೆ ಶುರು ಮಾಡಿದ್ದು, ನೇರವಾಗಿ ಕಾಂಗ್ರೆಸ್ ಮತಗಳಿಗೆ ಕೈ ಹಾಕಿದಂತೆ ಕಾಣುತ್ತಿದೆ. ಇದರ ಮೊದಲ ಹಂತವಾಗಿ ಕುರುಬ, ಮುಸ್ಲಿಂ ಮುಖಂಡರನ್ನು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Washing Machine Offer: ಚಿಲ್ಲರೆ ಹಣ ಕೊಟ್ಟು ಒಳ್ಳೆಯ ವಾಷಿಂಗ್ ಮಷಿನ್ ಪಡೆಯುವುದು ಹೇಗೆ ಗೊತ್ತಾ? ಒಂದು ತಿಂಗಳ ಬಾಡಿಗೆ ಇಲ್ಲಿ ಕೊಡಿ; ವಾಷಿಂಗ್ ಮಷಿನ್ ಬರುತ್ತೇ ನೋಡಿ

ಜನಾರ್ಧನ ರೆಡ್ಡಿಯವರಿಗೆ ಕಂಬಳಿ ನೀಡಿ ಕುರುಬ ಸಮಾಜದ ಮುಖಂಡರಾದ ಹನುಮಂತ ಅರಸನಕೆರೆ ಕೆಆರ್ಪಿಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇದು ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರೆಡ್ಡಿಯವರಿಗೆ ಕಂಬಳಿ ಹೊದೆಸಿ ಕೆಆರ್ಪಿಪಿಗೆ ಸೇರ್ಪಡೆಯಾಗಿ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ ಹನುಮಂತ ಅರಸನಕೆರೆ.
ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಉ.ಕ ಭಾಗದ ಪ್ರಮುಖ ಮುಸ್ಲಿಂ ಹಾಗೂ ಕುರುಬ ನಾಯಕರನ್ನು ತಮ್ಮತ್ತ ಸೆಳೆಯುವ ಮೂಲಕ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿಯವರಿಗೆ ನಡುಕ ಹುಟ್ಟಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ತಾವು ಇನ್ನೂ ಪ್ರಭಾವಿ ನಾಯಕ ಎನ್ನುವುದನ್ನು ಜನಾರ್ಧನ ರೆಡ್ಡಿಯವರು ಸಾಬೀತು ಮಾಡುತ್ತಿದ್ದಾರೆ.

Comments are closed.