Bhoota Kola:ಉಡುಪಿಯಲ್ಲಿ ನಡೆದೇಹೋಯ್ತು ರಿಯಲ್ ಕಾಂತಾರ ಸೀನ್: ಕೋರ್ಟ್ ಗೆ ವ್ಯಕ್ತಿಯು ಹೋಗಿದ್ದು ಪರಲೋಕಕ್ಕೆ. ಏನಾಗಿದೆ ಗೊತ್ತೇ??

Bhoota Kola: ಕಾಂತಾರ (Kantara) ಸಿನಿಮಾ (Film) ದಲ್ಲಿ ಇದೊಂದು ಸೀನ್ ನಿಮಗೆಲ್ಲರಿಗೂ ನೆನಪಿರಬಹುದು. ಹಲವರನ್ನು ಬೆಕ್ಕಸ ಬೆರಗಾಗಿಸಿದ್ಧ ಒಂದು ಸನ್ನಿವೇಶ (Sean) ಇದು ದೈವ (Daiva)ದ ಬಳಿ ಅಹಂಕಾರ ತೋರಿಸಿದವನಿಗೆ ದೈವ ಒಂದು ಮಾತನ್ನು ಹೇಳುತ್ತದೆ. “ಕೋರ್ಟ್ ಗೆ ಹೋಗ್ತಿ. (Court)ಆದರೆ ನಿನ್ನ ತೀರ್ಮಾನ ಮೆಟ್ಟಿಲಲ್ಲಿ ನಾನು ಮಾಡುತ್ತೇನೆ” ಅಂತ. ಹೀಗೆ ಮಾತನಾಡಿದ ಬಳಿಕ ಆತ ಕೋರ್ಟ್ ಮೆಟಿಲೇರಿದವನು ರಕ್ತ ಕಾರಿಕೊಂಡು ಸತ್ತಿದ್ದು ನೀವೆಲ್ಲಾ ನೋಡಿರುತ್ತೀರಿ. ಆದರೆ ಕಾಂತಾರ ಸಿನಿಮಾದಲ್ಲಿ ನಡೆದ ಈ ರೀಲ್ ಸ್ಟೋರಿ  (Reel Story) ಇದೀಗ ಉಡುಪಿ (Udupi) ಯಲ್ಲಿ ರಿಯಲ್ ಆಗಿ ನಡೆದಿದೆ.

Death happened in udupi same as kantara scene 2 | Live Kannada News
Bhoota Kola:ಉಡುಪಿಯಲ್ಲಿ ನಡೆದೇಹೋಯ್ತು ರಿಯಲ್ ಕಾಂತಾರ ಸೀನ್: ಕೋರ್ಟ್ ಗೆ ವ್ಯಕ್ತಿಯು ಹೋಗಿದ್ದು ಪರಲೋಕಕ್ಕೆ. ಏನಾಗಿದೆ ಗೊತ್ತೇ?? https://sihikahinews.com/2023/01/08/death-happened-in-udupi-same-as-kantara-scene/

ಹೌದು ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವ ಕೋಲದ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ಒಬ್ಬ ವ್ಯಕ್ತಿ ದೈವದ ತಂಬಿಲಾ ಸೇವೆ ಸಂದರ್ಭದಲ್ಲಿ ಅದೇ ಸ್ಥಾನದಲ್ಲಿ ಕುಸಿದು ಬಿದ್ದು ಜೀವ ಬಿಟ್ಟಿದ್ದು ಊರವರನ್ನೇ ವಿಸ್ಮಯಗೊಳಿಸಿದೆ. ಉಡುಪಿ ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ಸಮುದಾಯದ ದೇವಸ್ಥಾನ ಒಂದರಲ್ಲಿ ಪ್ರತಿವರ್ಷ ವಿಜ್ರಂಭಣೆಯ ನೇಮೋತ್ಸವವನ್ನು ನಡೆಸಲಾಗುತ್ತದೆ. ಇನ್ನು ಈ ದೇವಸ್ಥಾನ (Temple) ದ ಪ್ರತಿ ಎಂದು ವಿಷಯಗಳನ್ನು ನೋಡಿಕೊಳ್ಳುವುದು ದೇವಸ್ಥಾನವನ್ನು ನಿರ್ವಹಿಸಿಕೊಳ್ಳುವುದು ಪಡುಹಿಟ್ಲು ಜಾರಂದಾಯ ಬಂಟ ಸಮಿತಿ. ಈ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸ್ತಾ ಇದ್ದಿದ್ದು ಪ್ರಕಾಶ್ ಶೆಟ್ಟಿ (Prakash Shetty). ಇದನ್ನೂ ಓದಿ:An affair gone very wrong ends:ಪರ ಮಹಿಳೆ ಜೊತೆ ಓಡಿ ಹೋಗಿ ಜೀವನ ಸಾಗಿಸಲು ಮುದುಕ ಮಾಡಿದ ಪ್ಲಾನ್ ಕೇಳಿದರೆ ದಂಗಾಗ್ತೀರಾ. ಸ್ನೇಹಿತನಿಗೆ ಏನು ಮಾಡಿದ್ದಾನೆ ಗೊತ್ತೇ??

ಈ ವರ್ಷ ಪ್ರಕಾಶ್ ಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಸಮಿತಿ ಬದಲಾಗಿತ್ತು. ಹಾಗಾಗಿ ಪ್ರಕಾಶ್ ಶೆಟ್ಟಿ ಅವರಿಗೆ ಅಧಿಕಾರ ಹೋಯಿತು. ಆದರೆ ಅಧಿಕಾರವನ್ನು ಉಳಿಸಿಕೊಳ್ಳುವ ಆಸೆ ಬಹುವಾಗಿ ಇದ್ದ ಪ್ರಕಾಶ್ ಶೆಟ್ಟಿ ತನ್ನದೇ ಆದ ಪ್ರತ್ಯೇಕ ಟ್ರಸ್ಟ್ ಒಂದು ರಚಿಸುತ್ತಾರೆ. ಬಂಡಾಯ ಮನೆಯ ಗುರಿಕಾರರಾದ ಜಯ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. 9 ಜನರ ಟ್ರಸ್ಟ್ ವಂದನು ರಚಿಸಿದ ಪ್ರಕಾಶ್ ಶೆಟ್ಟಿ ದೇವಸ್ಥಾನ ತಮಗೆ ಸೇರಬೇಕು ಎಂದು ವಾದಿಸಲು ಆರಂಭಿಸುತ್ತಾರೆ.

ದೇವಸ್ಥಾನದಲ್ಲಿ ನಡೆದಿದ್ದೇನು?

ಹೀಗೆ ದೇವಸ್ಥಾನ ತನಗೆ ಬೇಕು ಅಂತ ಪ್ರಕಾಶ ಶೆಟ್ಟಿ ಹೇಳುವುದನ್ನು ಬಿಡುವುದಿಲ್ಲ ಪ್ರತಿವರ್ಷದಂತೆ ಈ ವರ್ಷವೂ ನೇಮಹೋತ್ಸವವನ್ನು ನಡೆಸುವುದಕ್ಕಾಗಿ ಜಾರಂದಾಯ ದೇವಸ್ಥಾನ ಸಮಿತಿ ತೀರ್ಮಾನಿಸುತ್ತೆ. ಇದೆ ಜನವರಿ 7ನೇ ತಾರೀಕಿಗೆ ಕೋಲ ನಡೆಸುವುದಕ್ಕೆ ನಿರ್ಧಾರ ಮಾಡಲಾಗುತ್ತೆ. ಆದರೆ ಅಧಿಕಾರದ ಹುಚ್ಚು, ದೇವಸ್ಥಾನದ ಹಕ್ಕು ಬೇಕು ಎಂದು ಪ್ರಕಾಶ್ ಶೆಟ್ಟಿ ಹಾಗೂ ಜಯ ಪೂಜಾರಿ ಇಬ್ಬರು ನೇಮೋತ್ಸವದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದ ಕೋಲಕ್ಕೆ ತಡೆಯಾಜ್ಞೆ ಕೂಡ ನ್ಯಾಯಾಲಯ ನೀಡುತ್ತದೆ. ಆದರೆ ಇಲ್ಲಿ ನಡೆದಿರುವ ಅಚ್ಚರಿಯ ಸಂಗತಿ ಏನು ಗೊತ್ತಾ? ಡಿಸೆಂಬರ್ 23ಕ್ಕೆ ತಡೆಯ ಬಂದ ನಂತರ ಡಿಸೆಂಬರ್ 24ರಂದು ಜಯ ಪೂಜಾರಿ ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ.

ಟ್ರಸ್ಟಿಯಾಗಿದ್ದ ಪ್ರಕಾಶ್ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದು ಮಾತ್ರವಲ್ಲದೆ ಜಾರಂದಾಯ ಕಮಿಟಿಯ ಕೆಲಸಕ್ಕೂ ಅಡ್ಡಿಪಡಿಸುತ್ತಾರೆ. ಜಾರಂದಾಯ ದೇವಸ್ಥಾನದ ದೈವ ನರ್ತಕ ಭಾಸ್ಕರ್ ಭಂಗೇರ ಅವರನ್ನು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿಯಂತೆ ನೀನು ನುಡಿಯಬೇಕು ಎಂದು ಹೆದರಿಸುತ್ತಾರೆ. ಹೀಗೆ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ ಎಂದು ದೈವ ನರ್ತಕರು ಕೂಡ ಆರೋಪ ಮಾಡಿದ್ದಾರೆ.

ಇದೀಗ ಕೋರ್ಟ್ ನಿರ್ಧಾರ ಹಾಗೂ ಸೂತಕದ ಹಿನ್ನೆಲೆಯಿಂದಾಗಿ ಜಾರಂದಾಯ ದೈವದ ನೇಮೋತ್ಸವಕ್ಕೆ ತಡೆ ನೀಡಲಾಗಿದೆ ಜಾರಂದಾಯ ಕಮಿಟಿಯವರು, ನೇಮೋತ್ಸವವನ್ನು ಮುಂದೂಡಲು ದೇವರ ಬಳಿ ಕೆಳಿಕೊಂಡಿದ್ದಾರೆ. ಇಲ್ಲಿಯೂ ಪ್ರಕಾಶ್ ಶೆಟ್ಟಿ ನೇವೋತ್ಸವ ನಡೆಯಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಜರಂದಾಯ ಹೊಸ ಕಮಿಟಿ ತಮ್ಮ ನಿರ್ಧಾರವನ್ನು ಘೋಷಿಸಿದೆ.

Comments are closed.