Tips for Diabetic Patient: ಅಸಲಿಗೆ ಶುಗರ್ ಹೊಂದಿರುವವರು ಬಿಸಿನೀರಿನ ಸ್ನಾನ ಮಾಡಬಹುದೆ? ಮಧುಮೇಹಿಗಳೇ ನಿಮಗಾಗಿ ಈ ಸುದ್ದಿ!

Tips for Diabetic Patient: ಈಗಂತೂ ಭಯಂಕರ ಚಳಿಗಾಲ (Winer). ಎಲ್ಲರೂ ಬೆಚ್ಚಗೆ ಇರಲು ಬಯಸುತ್ತಾರೆ. ದೇಶದ ಕೆಲವು ಭಾಗಗಳಲ್ಲಂತೂ ಉಷ್ಣತೆ (Body temprecher) ತೀರಾ ಕಡಿಮೆಯಿದೆ. ಇದರಿಂದ ಜನರು ಮೈಕೊರೆಯುವ ಚಳಿಯಿಂದ ಬಳಲುತ್ತಿದ್ದಾರೆ. ಬಿಸಿ ಬಿಸಿ ಚಹ, ಕಾಫಿ ಸೇವನೆ ಮಾಡಬೇಕು. ಬಿಸಿನೀರಿನ ಸ್ನಾನ (Hot Water bath) ಮಾಡಬೇಕು ಅನಿಸುವುದು ಸಹಜ. ಆದರೆ ಮಧುಮೇಹಿಗಳು ಬಿಸಿ ನೀರಿನ ಸ್ನಾನ ಮಾಡಿದರೆ ಕಾಯಿಲೆ ಉಲ್ಬಣ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ನೋಡಿ ಪರಿಹಾರ.

ಡಬ್ಲ್ಯೂಎಚ್ಓ ಪ್ರಕಾರ ಭಾರತದಲ್ಲಿ ೭.೭ ಕೋಟಿ ಜನರು ಟೈಪ್ ೨ ಡಯಾಬಿಟಿಸ್ನಿಂದ ಬಳಲುತ್ತಿದ್ದಾರೆ. ೧೮ ವರ್ಷಕ್ಕಿಂತ ಹೆಚ್ಚಿನವರಲ್ಲಿ ೨.೨ ಕೋಟಿ ಜನರು ಪ್ರಿ ಡಯಾಬಿಟಿಸ್ನಿಂದ ಬಳಲುತ್ತಿದ್ದಾರೆ. ಈ ಮಧುಮೇಹ ಕಾಯಿಲೆಯ ಪರಿಣಾಮಗಳ ಬಗ್ಗೆ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಸರಿಯಾದ ಅರಿವೇ ಇಲ್ಲವಾಗಿದೆ. ಟೈಪ್-೨ ಮಧುಮೇಹ ರೋಗದಿಂದ ಬಳಲುತ್ತಿರುವವರು ಬಿಸಿನೀರಿನಿಂದ ಸ್ನಾನ ಮಾಡಿದರೆ ಕೆಲವೊಂದು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಎಚ್ಬಿಎ1ಸಿ ಮಟ್ಟವನ್ನು ಕಡಿಮೆ ಮಾಡಬಹುದು. ಎಚ್ಬಿಎ1ಸಿ (HbA1c) ನ್ನು ಪರೀಕ್ಷೆಯ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ ತಿಳಿದುಕೊಳ್ಳಬಹುದು. ಇದನ್ನೂ ಓದಿ:Surprise: ರಿಸೆಪ್ಶನ್ ಗೆ ರೆಡಿಯಾಗಿ ಸ್ಟೇಜ್ ಗೆ ಹುಡುಗಿ ಬರುತ್ತಿದ್ದಂತೆ ಮದುಮಗ ಮಾಡಿದ್ದೇನು ಗೊತ್ತಾ? ಅಬ್ಬಾ ಎಂಥವರನ್ನಾದರೂ ಬೆರಗಾಗಿಸುತ್ತೇ ನೋಡಿ, ರಾತ್ರೋ ರಾತ್ರಿ ವೈರಲ್ ಆಯ್ತು ವಿಡಿಯೋ!

ಬಿಸಿನೀರಿನಿಂದ ಸ್ನಾನ ಮಾಡಬಹುದು ಎಂದಾಕ್ಷಣ ಸಿಕ್ಕಾಪಟ್ಟೆ ಬಿಸಿ ನೀರಿನ ಸ್ನಾನ ಮಾಡುವ ಹವ್ಯಾಸ ಬೆಳೆಸಿಕೊಂಡಿರುವ ಮಧುಮೇಹಿಗಳು ಎಚ್ಚರಿಕೆ ವಹಿಸಬೇಕು. ಏಕೆಂದರೆ ಸಿಕ್ಕಾಪಟ್ಟೆ ಬಿಸಿಯಾದ ನೀರಿನಿಂದ ಸ್ನಾನ ಮಾಡಿದರೆ ಅದು ನಿಮ್ಮ ಪಾದಗಳ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೆ ಚರ್ಮದ ಸಿಪ್ಪೆ ಸುಲಿಯುವುದು, ಗಾಯಗಳಾಗುವ ಸಾಧ್ಯತೆ ಇರುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಲುವಾಗಿ ಇನ್ಸೂಲಿನ್ ಚುಚ್ಚುಮದ್ದು ತೆಗೆದುಕೊಳ್ಳುವವರು ಬಿಸಿನೀರಿನ ಸ್ನಾನದ ಬಗ್ಗೆ ಹೆಚ್ಚು ಗಮನಹರಿಸಬೇಕು. ಏಕೆಂದರೆ ಮೈಮೇಲೆ ಬಿಸಿ ನೀರು ಬಿದ್ದ ತಕ್ಷಣ ರಕ್ತನಾಳಗಳು ಸಡಿಲಗೊಂಡು ಅಗಲವಾಗುತ್ತದೆ. ಇದರಿಂದ ನೀವು ತೆಗೆದುಕೊಂಡ ಇನ್ಸೂಲಿನ್ ಪರಿಣಾಮ ಹೆಚ್ಚುಕಾಲ ಇರುವುದಿಲ್ಲ. ಇದನ್ನೂ ಓದಿ:Vastu Tips: ಒಂದು ಬೆಳ್ಳುಳ್ಳಿ ಇಂದ ನಿಮ್ಮ ಮನೆಯಲ್ಲಿ ಹಣವನ್ನು ತುಂಬಿ ತುಳುಕುವಂತೆ ಮಾಡುವುದು ಹೇಗೆ ಗೊತ್ತೇ? ಎಲ್ಲ ಮಂತ್ರಕ್ಕಿಂತ ಇದೆ ಬೆಸ್ಟ್!

ಮಧುಮೇಹಿಗಳು ಆದಷ್ಟು ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಬಿಡಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಉಗುರು ಬೆಚ್ಚನೆಯ ನೀರಿನಿಂದ ಮಾತ್ರ ಸ್ನಾನ ಮಾಡಬಹುದು. ಆದ್ದರಿಂದ ಮಧುಮೇಹಿಗಳು ಆದಷ್ಟು ಬಿಸಿನೀರಿನ ಸ್ನಾನಕ್ಕೆ ಗುಡ್ ಬೈ ಹೇಳಿ ತಣ್ಣೀರಿನ ಸ್ನಾನ ರೂಢಿ ಮಾಡಿಕೊಳ್ಳುವುದು ಒಳಿತು.

Comments are closed.