Vanshika: ವಂಶಿಕಾಳಿಗೆ ಹೇರ್ ಕಲರ್; ನೋಡಿದ ನೆಟ್ಟಿಗರು ಹೇಳಿದ್ದೇ ಬೇರೆ, ಇವೆಲ್ಲಾ ಬೇಕಿತ್ತಾ ಮಾಸ್ಟರ್ ಆನಂದ್ ಕುಟುಂಬಕ್ಕೆ!

Vanshika: ವಂಶಿಕ ಈಗ ಕನ್ನಡ ಕಿರುತೆರೆಯಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಒಂದು ದೊಡ್ಡ ಹೆಸರು ಎಂದು ಹೇಳಬಹುದು. ವಂಶಿಕ ತಂದೆ ಮಾಸ್ಟರ್ ಆನಂದ್ ತಾನು ಕೂಡ ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೆರೆದಂತಹ ಪ್ರತಿಭೆ. ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ನಾಯಕನಟನಾಗಿ ಇವರು ಮಿಂಚುತ್ತಾರೆ ಎಂಬುದಾಗಿ ಭಾವಿಸಿದ್ದರು ಆದರೆ ಆ ರೀತಿ ಮಾಸ್ಟರ್ ಆನಂದ್ ಮಾಡೋದಕ್ಕೆ ಹೋಗೋದಿಲ್ಲ. ಬದಲಾಗಿ ಈಗ ಕನ್ನಡ ಕಿರುತೆರೆಯ ನಿರೂಪಕರಾಗಿ ಮಾಸ್ಟರ್ ಆನಂದ್ ತಮ್ಮದೇ ಆದಂತಹ ವರ್ಚಸ್ಸನ್ನು ಹೊಂದಿದ್ದಾರೆ. ಈಗ ತಂದೆ ರೀತಿಯಲ್ಲೇ ಮಗಳು ಕೂಡ ಬಾಲ ಕಲಾವಿದೆಯಾಗಿ ಕಿರುತೆರೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ವಂಶಿಕ ಅಪ್ಪನ ರೀತಿಯಲ್ಲೇ ಹರಳು ಹುರಿದಂತೆ ಮಾತನಾಡುವುದಕ್ಕೆ ಎತ್ತಿದ ಕೈ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಗಿಚ್ಚಿ ಗಿಲಿ ಗಿಲಿ ಹಾಗೂ ನಮ್ಮಮ್ಮ ಸೂಪರ್ ಸ್ಟಾರ್ ನಂತಹ ದೊಡ್ಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ವಂಶಿಕ ಈಗಾಗಲೇ ವಿನ್ನರ್ ಆಗಿ ತಮ್ಮ ಹೆಸರನ್ನು ಸಂಪಾದನೆ ಮಾಡಿದ್ದಾರೆ. ಕರ್ನಾಟಕದ ಮನೆ ಮನೆಯಲ್ಲಿ ಕೂಡ ವಂಶಿಕಾಳಿಗೆ ಈಗ ಪ್ಯಾನ್ ಫಾಲೋಯಿಂಗ್ ಇದೆ. ಪ್ರತಿಯೊಬ್ಬರು ಕೂಡ ವಂಶಿಕಾಳ ಚೂಟಿತನವನ್ನು ಇಷ್ಟ ಪಡ್ತಾರೆ. ಅವಳು ಮಾತನಾಡುವ ರೀತಿ ಲವಲವಿಕೆ ಹಾಗೂ ಎಲ್ಲವೂ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.

ವಂಶಿಕ ಹೇರ್ ಕಲರ್ ಬಗ್ಗೆ ಚರ್ಚೆ!

ಈಗ ಸೋಶಿಯಲ್ ಮೀಡಿಯಾದಲ್ಲಿ ವಂಶಿಕ ಹೇರ್ ಕಲರಿಂಗ್ ಮಾಡಿಸಿರುವಂತಹ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಂಶಿಕ ತನ್ನ ಕೂದಲಿಗೆ ಕಲರ್ ಮಾಡಿಕೊಂಡಿರುವಂತಹ ತುಣುಕು ಇದ್ದು ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ನಡೆಯುವುದಕ್ಕೆ ಪ್ರಾರಂಭವಾಗಿದೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ನೀಡುತ್ತ ಅವಳು ಪ್ರತಿಭಾನ್ವಿತ ಹಾಗೂ ಒಳ್ಳೆ ಹುಡುಗಿ ನಿಜ ಆದರೆ ಈ ರೀತಿ ಇಷ್ಟೊಂದು ಚಿಕ್ಕವಯಸ್ಸಿಗೆ ಹೇರ್ ಕಲರ್ ಮಾಡಿಸುವುದು ಒಳ್ಳೆಯದಲ್ಲ ಎಂಬಂತಹ ಅಭಿಪ್ರಾಯಗಳನ್ನು ನೀಡಿದ್ದಾರೆ. ಮಕ್ಕಳಿಗೆ ಇದನ್ನು ಅಭ್ಯಾಸ ಮಾಡಿಸಬೇಡಿ ಶಾಲೆಯಲ್ಲಿ ಇದನ್ನೆಲ್ಲ ಒಪ್ಪುತ್ತಾರ ಎನ್ನುವುದಾಗಿ ಕೂಡ ಕೆಲವರು ಕಾಮೆಂಟ್ ಮಾಡಿರುವುದು ಕಂಡುಬಂದಿದೆ.

ಚಿಕ್ಕ ಮಕ್ಕಳಿಗೆ ಈ ರೀತಿಯ ಅಭ್ಯಾಸವನ್ನು ಮಾಡುವುದಕ್ಕೆ ಹೋಗಬೇಡಿ ಮುಂದಿನ ದಿನಗಳಲ್ಲಿ ಚರ್ಮ ಹಾಗೂ ಕೂದಲಿಗೆ ಸಮಸ್ಯೆ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವುದಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ಆರೋಗ್ಯಕರ ಅಭ್ಯಾಸ ಅಲ್ಲ ಇದನ್ನೆಲ್ಲ ಮಕ್ಕಳಿಗೆ ಮಾಡುವುದಕ್ಕೆ ಹೋಗಬೇಡಿ ಅನ್ನೋದಾಗಿ ಹೇಳಿದ್ದಾರೆ. ಇನ್ನು ಕೆಲವು ವರ್ಗದ ಜನರು ಅವರ ಮಕ್ಕಳು ಅವರಿಷ್ಟ ಅನ್ನೋದಾಗಿ ಹೇಳಿದ್ದು ಎಲ್ಲರೂ ಕೂಡ ತಮ್ಮದೇ ಆದ ರೀತಿಯಲ್ಲಿ ಈ ವಿಚಾರದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.