Serials: ತೆರೆ ಹಿಂದೆ ರಾಜೇಶ್ ಅವ್ರನ್ ಅಮೃತಧಾರೆ ನಾಯಕಿ ಕರೋದ್ ಏನಂತ ಗೊತ್ತಾ? ಮಜ್ವಾಗಿದೆ; ನಿಮಗೆ ಗೊತ್ತಿಲ್ದೆ ಇರೋ ಸ್ಟೋರಿ ಇದು!

Serials: ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಇಬ್ರು ಕೂಡ ಕನ್ನಡ ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಬೇಡಿಕೆಯ ಕಲಾವಿದರಾಗಿ ಕಾಣಿಸಿಕೊಂಡವರು. ರಾಜೇಶ್ ನಟರಂಗ ಇವತ್ತಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ನಟ. ಇನ್ನು ಛಾಯಾ ಸಿಂಗ್ ಅವರ ಬಗ್ಗೆ ಮಾತನಾಡುವುದಾದರೆ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದವರು ಸಡನ್ ಆಗಿ ಚಿತ್ರರಂಗದಿಂದ ದೂರವಾಗುತ್ತಾರೆ. ಮತ್ತೆ ಮುಫ್ತಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಾರೆ ಹಾಗೂ ಈಗ ಸದ್ಯಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವಂತಹ ಅಮೃತಧಾರೆ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತೆರೆಯ ಹಿಂದೆ ರಾಜೇಶ್ ನಟರಂಗ ಅವರನ್ನ ಛಾಯಾಸಿಂಗ್ ಏನಂತ ಕರೀತಾರೆ ಗೊತ್ತಾ?

ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರಿಗೆ ಹಿಂದಿನಿಂದಲೂ ಕೂಡ ಸಿನಿಮಾ ರಂಗದ ನಂಟು ಇದೆ. ಈಗ ಆ ನಂಟು ಅಮೃತಧಾರೆ ಧಾರವಾಹಿಯ ಮೂಲಕ ಮುಂದುವರೆದಿದೆ ಎಂದು ಹೇಳಬಹುದಾಗಿದೆ. ಇನ್ನು ಕೇವಲ ಸಿನಿಮಾ ಮಾತ್ರವಲ್ಲದೆ ಧಾರವಾಹಿ ಕ್ಷೇತ್ರದಲ್ಲಿ ಕೂಡ ಇಬ್ಬರಿಗೂ ಈ ಹಿಂದೆ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿರುವಂತಹ ಅನುಭವವಿದೆ. ತುಂತುರು ಎನ್ನುವ ಧಾರವಾಹಿಯಲ್ಲಿ ರಾಜೇಶ್ ನಟರಂಗ ಅವರ ತಂಗಿಯ ಪಾತ್ರದಲ್ಲಿ ಛಾಯಾಸಿಂಗ್ ಕಾಣಿಸಿಕೊಂಡಿದ್ದರು. ಅಮೃತದಾರೆ ಇಬ್ಬರಿಗೂ ಕೂಡ ಒಂದೇ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಂಡಿರುವಾಗಿದೆ ಎರಡನೇ ಧಾರವಾಹಿ ಆಗಿದೆ ಎಂದು ಹೇಳಬಹುದಾಗಿದೆ. ಆದರೆ ತುಂತುರು ಧಾರವಾಹಿ ಸಾಕಷ್ಟು ವರ್ಷಗಳ ಹಿಂದೆ ಬಂದಿದ್ದು ಅಲ್ಲಿಂದ ಇಲ್ಲಿಯವರೆಗೆ ಇಬ್ಬರು ನಡುವೆ ಯಾವುದೇ ರೀತಿಯ ಮಾತುಕತೆ ಆಗಿರಲಿಲ್ವಂತೆ.

ಅಮೃತಧಾರೆ ಧಾರವಾಹಿಯಲ್ಲಿ ಇಬ್ಬರೂ ಕೂಡ ಗಂಡ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಧಾರವಾಹಿಯಲ್ಲಿ ಇಬ್ಬರ ಜೋಡಿ ಕೂಡ ಸೂಪರ್ ಆಗಿದೆ ಅನ್ನೋದಗಿ ಧಾರವಾಹಿಯ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಛಾಯಾ ಸಿಂಗ್ ಅವರ ಬಗ್ಗೆ ಮಾತನಾಡುತ್ತಾ ರಾಜೇಶ್ ನಟರಂಗ ಅವರು ತುಂಬಾ ಒಳ್ಳೆಯ ನಟಿ ಅವರ ಕೆಲಸವನ್ನು ನಾನು ಈಗಾಗಲೇ ನೋಡಿದ್ದೇನೆ ಈ ಹಿಂದೆ ಕೂಡ ಅವರ ಜೊತೆಗೆ ಕೆಲಸ ಮಾಡಿದ್ದೇನೆ ಅನ್ನೋದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಅಮೃತದಾರೆ ಧಾರವಾಹಿಯಲ್ಲಿ ರಾಜೇಶ್ ನಟರಂಗ ರವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಛಾಯಾಸಿಂಗ್ ಕೂಡ ರಾಜೇಶ್ ನಟರಂಗ ಅವರ ಬಗ್ಗೆ ಹೊಗಳಿದ್ದಾರೆ. ಇನ್ನು ಧಾರವಾಹಿಯ ಸೆಟ್ನಲ್ಲಿ ರಾಜೇಶ್ ನಟರಂಗ ಅವರನ್ನು ಛಾಯಾ ಸಿಂಗ್ ಅವರು ರಾಜೇಶ್ ಅಣ್ಣ ಎಂಬುದಾಗಿ ಕರೀತಾರೆ ಅನ್ನೋದನ್ನ ರಾಜೇಶ್ ಅವರೇ ಖುದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿರುವಂತಹ ಛಾಯಾಸಿಂಗ್ ಪಬ್ಲಿಕ್ ನಲ್ಲಿ ಹೀಗೆಲ್ಲ ಹೇಳೋದಕ್ಕೆ ಹೋಗ್ಬೇಡಿ ಅನ್ನೋದಾಗಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ತೆರೆಯ ಮುಂದೆ ಜೋಡಿಯಾಗಿ ಕಾಣಿಸಿಕೊಳ್ಳುವಂತಹ ಈ ಕಲಾವಿದರು ತೆರೆ ಹಿಂದೆ ಮಾತ್ರ ಅಣ್ಣ ತಂಗಿ ರೀತಿಯಲ್ಲಿ ಇದಾನೆ ಅನ್ನೋದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Comments are closed.