Real Story: ಇಬ್ಬರು ಹುಡುಗಿಯರ ಪ್ರೀತಿ ಅದೆಂಥದ್ದು ಗೊತ್ತೇ?? ಕೊನೆಯ ಪಾಪ ಏನಾಯ್ತು ಗೊತ್ತೇ? ಸಿನಿಮಾ ಮೀರಿಸಿದ ಅಸಲಿ ಕಥೆ

Real Story: ಮನುಷ್ಯ ಒಮ್ಮೆ ಜಾತಿಯ ವಿಷಬೀಜವನ್ನು ತನ್ನ ತಲೆಯಲ್ಲಿ ತುಂಬಿಕೊಂಡರೆ ಸಾಕು. ಅದು ಸಾಯುವ ತನಕವೂ ಹೋಗುವುದಿಲ್ಲ. ಅದಕ್ಕಾಗಿ ಏನು ಮಾಡಲು ಸಿದ್ದನಾಗಿಬಿಡುತ್ತಾನೆ. ಇಂತಹುದೇ ಒಂದು ಘಟನೆ ಕೇರಳದಲ್ಲಿ ಕೆಲ ವರ್ಷಗಳ ನಡೆದಿದೆ. ಇದು ಕೇರಳದ ಚರಿತ್ರೆಯಲ್ಲಿಯೇ ನಡೆದ ರಣಬೀಕರ ಹತ್ಯೆ ಎಂದು ಹೇಳಬಹುದಾಗಿದೆ.  ಈ ಕಥೆ ಯಾವ ಸಿನೆಮಾ ಕಥೆಗೂ ಕಮ್ಮಿಯಿಲ್ಲ ಎಂದೇ ಹೇಳಬಹುದು. ಈ ಘಟನೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಖಚಿತ.

ನೀನು ಚಾಕೋ ಎನ್ನುವ ಪ್ರತಿಷ್ಠಿತ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಹುಡುಗಿ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಕೊಲ್ಲಂನಿಂದ ಕೊಟ್ಟಾಯಂಗೆ ಬಂದಿದ್ದಳು. ಈಕೆಯ ತಂದೆಯ ಹೆಸರು ಚಾಕೋ ಜಾನ್. ಈತ ಉದ್ಯಮಿಯಾಗಿದ್ದ. ಮನೆಯಲ್ಲಿ ಆರ್ಥಿಕವಾಗಿ ಬಹಳ ಗಟ್ಟಿಯಾಗಿದ್ದರು. ಕೊಟ್ಟಾಯಂನ ಅಮಲಗಿರಿ ಕಾಲೇಜಿಗೆ ಜಾನ್ ಚಾಕೋ ಅವರು ತಮ್ಮ ಮಗಳು ನೀನು ಚಾಕೋ ಅವರನ್ನು ಸೇರ್ಪಡೆ ಮಾಡಿದ್ದರು.

ಇದೇ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ದಲಿತ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದ ಕೆವಿನ್ ಜೋಸೆಫ್ ಎನ್ನುವ ಹುಡುಗ ಕೂಡ ಸೇರಿಕೊಂಡಿದ್ದ. ಈತನ ಕುಟುಂಬ ಮಧ್ಯಮವರ್ಗದ್ದಾಗಿತ್ತು. ಈತನ ತಂದೆ ಸಣ್ಣ ಗ್ಯಾರೇಜ್ ನಡೆಸುತ್ತಿದ್ದರು. ಆದರೆ ಕೆವಿನ್ ಜೊಸೇಫ್ ಓದಿನಲ್ಲಿ ಬಹಳ ಚುರುಕಾಗಿದ್ದ. ಕಾಲೇಜಿನಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳಲ್ಲೂ ಬಹಳ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದ.

ಈತನ ಈ ಚುರುಕುತನವೇ ನೀನು ಚಾಕೋಗೆ ಬಹಳ ಇಷ್ಟವಾಗಿತ್ತು. ಕಾಲೇಜಿನಲ್ಲಿ ಸಹಜವಾಗಿಯೇ ನೀನು ಚಾಕೋ ಹಾಗೂ ಕೆವಿನ್ ಜೋಸೇಫ್ ಸ್ನೇಹಿತರಾಗಿದ್ದಾರೆ. ಇದು ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಎರಡನೇ ವರ್ಷದ ಪದವಿಯ ಸಂದರ್ಭದಲ್ಲಿಯೇ ಕೆವಿನ್ ಜೋಸೇಫ್ ನೀನು ಚಾಕೋಗೆ ತನ್ನ ಪ್ರೇಮ ನಿವೇದನೆ ಮಾಡಿದ್ದ. ಇದಕ್ಕೆ ನೀನು ಚಾಕೋ ಕೂಡ ಒಪ್ಪಿಕೊಂಡಿದ್ದಳು. ನಂತರ ಸಿನೆಮಾ, ಪಾರ್ಕ್, ಟ್ರಿಪ್ ಹೀಗೆ ಹಲವು ಕಡೆ ಸುತ್ತಾಡಿದ್ದಾರೆ. ಇವರಿಬ್ಬರ ನಡುವೆ ನಿಷ್ಕಲ್ಮಶವಾದ ಪ್ರೀತಿ ಇತ್ತು. ಕಾಲೇಜು ಮುಗಿಯುತ್ತಿದ್ದ ಹಾಗೆ ಕೆವಿನ್ ಜೋಸೇಫ್ ಮದುವೆ ಆಗುವ ಪ್ರಸ್ತಾಪವನ್ನು ನೀನು ಚಾಕೋ ಅವಳ ಮುಂದೆ ಇಟ್ಟಿದ್ದ. ಇದಕ್ಕೆ ನೀನು ಚಾಕೋ ಸಮ್ಮತಿ ಕೂಡ ಸಿಕ್ಕಿತ್ತು.

ಕೆವಿನ್ ಜೋಸೇಪ್ ಕಾಲೇಜು ಮುಗಿದ ನಂತರ ಉದ್ಯೋಗಕ್ಕಾಗಿ ಪ್ರಯತ್ನ ಆರಂಭಿಸಿದ್ದ. ನೀನು ಚಾಕೋ ಕಾಲೇಜು ಮುಗಿಸಿ ಮನೆಗೆ ಆಗಮಿಸಿ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾಳೆ. ಇದಕ್ಕೆ ಮನೆಯವರು ಒಪ್ಪಲಿಲ್ಲ. ನೀನು ನಾವು ನೋಡಿದ ಹುಡುಗನನ್ನೇ ಮದುವೆ ಆಗಬೇಕು. ಜೋಸೇಫ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿದ ನೀನು ಚಾಕೋ, ನಾನು ಮದುವೆ ಆದರೆ ಆತನನ್ನೇ ಇಲ್ಲದಿದ್ದರೆ ಇಲ್ಲ ಎಂದು ಅಲ್ಲಿಂದ ಬಂದಿದ್ದಾಳೆ.

ಮನೆಯಿಂದ ಹೊರಬಂದು ಕೆವಿನ್ ಜೊಸೆಫ್ಗೆ ಮನೆಯಲ್ಲಿ ಆದ ವಿಚಾರವನ್ನು ತಿಳಸಿದ್ದಾಳೆ. ಆತ ನೀನು ಚಾಕೋವನ್ನು ತನ್ನ ಸ್ನೇಹಿತರ ಸಹಾಯದಿಂದ ಹಾಸ್ಟೆಲ್ ಒಂದರಲ್ಲಿ ಗುಟ್ಟಾಗಿ ಇರಿಸಿದ್ದ. ನಂತರ ಕೆಲವೇ ದಿನಗಳಲ್ಲಿ ನೀನು ಚಾಕೋಳನ್ನು ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆ ಆಗಿದ್ದ. ಮದುವೆ ಆದ ಬಳಿಕವೂ ನೀನು ಚಾಕೋಳನ್ನು ಹಾಸ್ಟೆಲ್ನಲ್ಲಿ ಇರುವಂತೆ ಮನವೊಲಿಸಿದ್ದ. ನೀನು ಚಾಕೋ ಮದುವೆ ಆಗಿರುವ ವಿಚಾರವನ್ನು ತನ್ನ ಪಾಲಕರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ನೀನು ಚಾಕೋ ತಂದೆ ಜಾನ್ ಚಾಕೋ ನಿನ್ನನ್ನು ಹಾಗೂ ನಿನ್ನ ಮತ್ತು ಅವರ ಮನೆಯವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇಷ್ಟೇ ಅಲ್ಲದೆ ಜಾನ್ ಚಾಕೋ ಕೆವಿನ್ ಜೊಸೆಫ್ ತಂದೆಯ ಗ್ಯಾರೇಜ್ಗೆ ಬಂದು ನಮ್ಮ ಮಗಳನ್ನು ಕಳುಹಿಸಿಕೊಡಬೇಕು. ಇಲ್ಲದಿದ್ದರೆ ನಿಮ್ಮ ಒಬ್ಬರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದರು.

ಇಷ್ಟಕ್ಕೆ ಸುಮ್ಮನಾಗದ ಜಾನ್ ಚಾಕೋ ಗಾಂಧಿನಗರದ ಪೊಲೀಸ್ ಠಾಣೆಗೆ ತೆರಳಿ ಕೆವಿನ್ ಕುಟುಂಬದವರ ವಿರುದ್ಧ ತಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲಿನ ಪಿಎಸ್ಐಗೆ ಲಂಚವನ್ನೂ ನೀಡಿ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿರುವ ಕೆಲವರಿಂದ ಈ ಮಾಹಿತಿ ಪಡೆದ ಕೆವಿನ್ ಜೊಸೇಫ್ ಪೊಲೀಸ್ ಠಾಣೆಗೆ ಆಗಮಿಸಿ ಇದ್ದ ವಿಚಾರವನ್ನು ತಿಳಿಸಿದ್ದಾನೆ. ಆಗ ಅಲ್ಲಿನ ಎಸ್ಐ ನೀನು ಚಾಕೋಳನ್ನು ಸಹ ಕರೆದುಕೊಂಡು ಬರುವಂತೆ ಆದೇಶ ನೀಡಿದ್ದಾರೆ. ಕೆವಿನ್ ಜೊಸೇಫ್ ಹಾಗೂ ನೀನು ಚಾಕೋ ಪೊಲೀಸ್ ಠಾಣೆಗೆ ಆಗಮಿಸಿದ ವೇಳೆ ಅಲ್ಲಿ ಹೈಡ್ರಾಮಾವೇ ನಡೆದು ಹೋಗಿ ಬಿಡುತ್ತದೆ. ಕಾನೂನು ಬದ್ದವಾಗಿ ಮದುವೆ ಆದ ಜೋಡಿಯನ್ನು ಪೊಲೀಸರೆ ಬೇರೆ ಮಾಡಲು ನೋಡುತ್ತಾರೆ. ಇದನ್ನು ಖಂಡಿಸಿ ಪೊಲೀಸ್ ಠಾಣೆ ಎದುರೇ ಧರಣಿ ಕೂರುತ್ತಾರೆ. ಅಲ್ಲಿ ಕೆವಿನ್  ಜೊಸೇಪ್ ಹಾಗೂ ಜಾನ್ ಚಾಕೋ ಕುಟುಂಬದವರ ನಡುವೆ ದೊಡ್ಡ ವಾಗ್ವಾದವೇ ನಡೆಯುತ್ತದೆ. ಜಾನ್ ಚಾಕೋ ತನ್ನ ಮಗಳನ್ನು ಬಲವಂತವಾಗಿ ಕರೆದೊಯ್ಯಲು ನೋಡುತ್ತಾರೆ. ಆದರೆ ಅವಳು ಹೋಗುವುದಿಲ್ಲ.

ಆ ದಿನ ಕೆವಿನ್ ಜೊಸೇಫ್ ನೀನು ಚಾಕೋಳನ್ನು ಬೇರೊಂದು ಹಾಸ್ಟೆಲ್ನಲ್ಲಿ ಇಟ್ಟು ನೀನು ಇಲ್ಲಿ ಆರಾಮವಾಗಿರು, ಬೆಳಿಗ್ಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಆತ ತನ್ನ ಸ್ನೇಹಿತನ ಮನೆಗೆ ಹೋಗಿ ಉಳಿದುಕೊಳ್ಳುತ್ತಾನೆ.

ಕೆವಿನ್ ತನ್ನ ಸ್ನೇಹಿತನ ಮನೆಯಲ್ಲಿ ಇರುವ ವಿಚಾರ ತಿಳಿದಿ ನೀನು ಚಾಕೋಳ ಸಹೋದರ ರೌಡಿಗಳೊಂದಿಗೆ ಅಲ್ಲಿಗೆ ಬಂದು ಕೆವಿನ್ ಸ್ನೇಹಿತರಿಗೂ ಹೊಡೆಯುತ್ತಾನೆ. ಕೆವಿನ್ ಜೊಸೆಫ್ನನ್ನು ಬಲವಂತವಾಗಿ ಪಕ್ಕದಲ್ಲಿದ್ದ ಪಾಳು ಬಿದ್ದ ಕಟ್ಟಡಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿ ಚರಂಡಿಗೆ ಎಸೆದು ಬಿಡುತ್ತಾರೆ. ತಮ್ಮ ಜಾತಿಯವನಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಜಾನ್ ಚಾಕೋ ಕುಟುಂಬಸ್ಥರು ಕೆವಿನ್ ಜೋಸೇಪ್ನನ್ನು ಕೊಂದು ಹಾಕಿಬಿಡುತ್ತಾರೆ.

Comments are closed.